Paneer Health Benefits: ಈ ಕಾರಣಗಳಿಗಾಗಿ ನಿಮ್ಮ ಡಯಟ್ನಲ್ಲಿ ಪನೀರ್ ಅನ್ನು ತಪ್ಪದೇ ಸೇರಿಸಿ
ಪನೀರ್‌ನಲ್ಲಿ ವಿಟಮಿನ್ ಡಿ ಇರುವ ಕಾರಣ, ಇದು ನಮ್ಮ ಮೂಳೆಗಳನ್ನು ಬಲಪಡಿಸುತ್ತದೆ. ಸಾಮಾನ್ಯವಾಗಿ ಜಿಮ್ ಗೆ ಹೋಗುವವರಿಗೆ ಪನ್ನೀರ್ ತಿನ್ನುವಂತೆ ಸಲಹೆ ಸಿಗುತ್ತದೆ.
ನರಮಂಡಲಕ್ಕೆ ಕ್ಯಾಲ್ಸಿಯಂ ಮುಖ್ಯವಾಗಿದೆ ಎಂದು ನಮಗೆ ತಿಳಿದಿದೆ ಮತ್ತು ಪನೀರ್‌ನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಇದು ನಮ್ಮ ನರಮಂಡಲಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.
ನೀವು ಮಧುಮೇಹಿಗಳಾಗಿದ್ದರೆ ಪನೀರ್ ನಿಮಗೆ ಉತ್ತಮ ಆರೋಗ್ಯ ಒದಗಿಸುತ್ತದೆ. ಏಕೆಂದರೆ ಪನೀರ್‌ನಲ್ಲಿರುವ ಮೆಗ್ನೀಸಿಯಮ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಪನೀರ್‌ನಲ್ಲಿ ಕಡಿಮೆ ಕಾರ್ಬೋಹೈಡ್ರೇಟ್‌ಗಳು ಇರುವುದರಿಂದ, ಇದು ಮಧುಮೇಹ ರೋಗಿಗಳಿಗೆ ಉತ್ತಮ ಆಹಾರವಾಗಿದೆ ಎಂದು ಹೇಳಲಾಗುತ್ತದೆ.
ಪನೀರ್ ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿರುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಪನೀರ್‌ನಲ್ಲಿರುವ ಪೋಷಕಾಂಶಗಳಿಂದ ಕ್ಯಾನ್ಸರ್ ಅಪಾಯ ಕಡಿಮೆ ಆಗಲಿದೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.