ಸರ್ವ ರೋಗಕ್ಕೂ ಮದ್ದು ಮನೆಯ ಮುಂದೆಯೇ ಸಿಗುವ ಈ ಹಣ್ಣು! ಮಧುಮೇಹದಿಂದ ಹಿಡಿದು ತೂಕ ಕಡಿಮೆ ಮಾಡುವುದರವರೆಗೂ ಇದೇ ದಿವ್ಯ ಔಷಧ!

Mon, 06 Jan 2025-12:35 pm,

 ಪಪ್ಪಾಯಿಯು ತುಂಬಾ ರುಚಿಕರವಾದ ಹಣ್ಣಾಗಿದ್ದು, ಇದರಲ್ಲಿ ಹಲವು ವಿಟಮಿನ್ ಗಳು ಮತ್ತು ಖನಿಜಾಂಶಗಳಿವೆ.. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ತುಂಬಾ ಪ್ರಯೋಜನಕಾರಿ.    

ಪಪ್ಪಾಯಿಯು ತುಂಬಾ ರುಚಿಕರವಾದ ಮತ್ತು ರಸಭರಿತವಾದ ಹಣ್ಣಾಗಿದ್ದು, ಇದು ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಪೋಷಕಾಂಶಗಳು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.   

ಅಷ್ಟೇ ಅಲ್ಲ, ಪಪ್ಪಾಯಿ ಸೇವನೆಯು ತ್ವಚೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆಗುವ ಲಾಭಗಳೇನು ಎಂದು ಇದೀಗ ತಿಳಿಯೋಣ.   

ಪಪ್ಪಾಯಿಯು ಪಪೈನ್ ಅಂಶವನ್ನು ಹೊಂದಿದ್ದು.. ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಹಣ್ಣು ನೈಸರ್ಗಿಕ ವಿರೇಚಕವಾಗಿದ್ದು.. ಇದು ಮಲಬದ್ಧತೆಯನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಕರುಳಿನ ಚಲನವಲನ ಉತ್ತಮಗೊಂಡು ಊತದ ಸಮಸ್ಯೆ ಬರುವುದಿಲ್ಲ...   

ಪಪ್ಪಾಯಿಯು ವಿಟಮಿನ್-ಸಿ ಮತ್ತು ಆಂಟಿ-ಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದ್ದು.. ಇದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ.. ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.. ಇದರಿಂದ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ. ಹೀಗಾಗಿ ಪಪ್ಪಾಯಿ ತಿನ್ನುವುದು ಆರೋಗ್ಯಕರ ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ..  

 ಪಪ್ಪಾಯಿಯಲ್ಲಿರುವ ನಾರಿನಂಶವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಇನ್ನೋಂದು ವಿಶೇಷ ಪ್ರಯೋಜನವೆಂದರೆ ತೂಕ ಹೆಚ್ಚಾಗುವುದನ್ನು ನಿಯಂತ್ರಸುತ್ತದೆ.. ಮತ್ತು ದೇಹದ ಭಾರವನ್ನು ಕಡಿಮೆ ಮಾಡುತ್ತದೆ..

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link