ಈ ಹಣ್ಣಿನ ಎಲೆಯ ರಸ ಕುಡಿದರೆ ಬ್ಲಡ್ ಶುಗರ್ ನಿಮಿಷದಲ್ಲೇ ಕಂಟ್ರೋಲ್ ಆಗುವುದು!
)
ಪಪ್ಪಾಯಿ ಎಲ್ಲಾ ಸೀಸನ್‌ಗಳಲ್ಲಿಯೂ ದೊರೆಯುವ ಹಣ್ಣು. ಈ ರುಚಿಕರವಾದ ಹಣ್ಣಿನಲ್ಲಿ ಹಲವಾರು ಔಷಧೀಯ ಗುಣಗಳು ಮತ್ತು ಪೋಷಕಾಂಶಗಳು ಅಡಗಿವೆ. ಇದು ದೇಹಕ್ಕೆ ತುಂಬಾ ಒಳ್ಳೆಯದು.
)
ಪಪ್ಪಾಯಿ ಹಣ್ಣಷ್ಟೇ ಅಲ್ಲ, ಇದರ ಎಲೆಗಳೂ ಹಲವು ಆರೋಗ್ಯಕಾರಿ ಗುಣಗಳನ್ನು ಹೊಂದಿವೆ. ಅನೇಕ ರೋಗಗಳನ್ನು ಗುಣಪಡಿಸಲು ಪಪ್ಪಾಯಿ ಎಲೆ ಬಳಸಲಾಗುತ್ತದೆ ಎಂದು ಹೇಳುತ್ತಾರೆ.
)
ಪಪ್ಪಾಯಿಯಲ್ಲಿ ಪೋಷಕಾಂಶಗಳು, ಫೈಬರ್, ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಇದರಲ್ಲಿರುವ ಫೋಲಿಕ್ ಆಮ್ಲವು ದೇಹದಲ್ಲಿನ ಕೆಟ್ಟ ಅಮೈನೋ ಆಮ್ಲಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪಪ್ಪಾಯಿ ಎಲೆಗಳಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಇದೆ. ಡೆಂಗ್ಯೂ ಜ್ವರ ಹೆಚ್ಚಾದಾಗ ಪಪ್ಪಾಯಿ ಎಲೆಯ ರಸವನ್ನು ಕುಡಿಯಬಹುದು. ರಕ್ತದಲ್ಲಿ ಪ್ಲೇಟ್ ಲೆಟ್ ಗಳನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.
ಪಪ್ಪಾಯಿ ಎಲೆಯ ರಸವೂ ಉತ್ತಮ ಜೀರ್ಣಕ್ರಿಯೆಗೆ ಒಳ್ಳೆಯದು. ಈ ಎಲೆಗಳಲ್ಲಿ ನೀರು ಮತ್ತು ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆ ನಿವಾರಣೆಗೆ ತುಂಬಾ ಸಹಕಾರಿ.
ಪಪ್ಪಾಯಿ ಎಲೆಯ ರಸವನ್ನು ಕುಡಿದರೆ ಮಧುಮೇಹ ನಿಯಂತ್ರಿಸಬಹುದು. ಪಪ್ಪಾಯಿ ಎಲೆ ಜ್ಯೂಸ್ ಸೇವೆನೆಯಿಂದ ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ಕೂಡಲೇ ನಿಯಂತ್ರಣಕ್ಕೆ ಬರುತ್ತದೆ.
ತಾಜಾ ಪಪ್ಪಾಯಿ ಎಲೆಗಳನ್ನು ತೊಳೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಸೋಸಿ ಕುಡಿಯಿರಿ. ಇದನ್ನು ಮಿತವಾಗಿ ಕುಡಿಯುವುದ ಆರೋಗ್ಯಕ್ಕೆ ಉತ್ತಮ. ಅತಿಯಾದ ಸೇವನೆ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.