ಪಪ್ಪಾಯಿ ಸಿಪ್ಪೆ ಈ ಪುಡಿಯಲ್ಲಿ ಬೆರೆಸಿ ಬಿಳಿ ಕೂದಲಿಗೆ ಹಚ್ಚಿ.. 10 ನಿಮಿಷದಲ್ಲೇ ಕಡು ಕಪ್ಪಾಗಿ ರೇಷ್ಮೆಯ ನೂಲಿನಂತಾಗುವುದು !
)
ಪಪ್ಪಾಯಿ ಅತ್ಯಂತ ಆರೋಗ್ಯಕರ ಹಣ್ಣು. ಪಪ್ಪಾಯಿ ಸಿಪ್ಪೆಗಳು ಸಹ ಸಾಕಷ್ಟು ಪ್ರಯೋಜನವನ್ನು ನೀಡುತ್ತವೆ.
)
ಪಪ್ಪಾಯಿ ಸಿಪ್ಪೆ ಬಳಸಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಇದು ಕೂದಲಿನ ಹೊಳಪನ್ನು ಸಹ ಹೆಚ್ಚಿಸುತ್ತದೆ.
)
ಮಾಗಿದ ಬಾಳೆಹಣ್ಣು, ಪಪ್ಪಾಯಿ ಸಿಪ್ಪೆ, ಒಂದೆರಡು ಹನಿ ತೆಂಗಿನೆಣ್ಣೆ ಮತ್ತು ಕಾಫಿ ಪುಡಿಯಿಂದ ಹೇರ್ ಮಾಸ್ಕ್ ತಯಾರಿಸಬಹುದಾಗಿದೆ.
ಬಿಳಿ ಕೂದಲನ್ನು ಮರೆ ಮಾಚಲು ಈ ಹೇರ್ ಮಾಸ್ಕ್‌ಸಾಕಷ್ಟು ಪ್ರಯೋಜನಕಾರಿಯಾಗಿದೆ. ಈ ಹೇರ್ ಮಾಸ್ಕ್ ತಯಾರಿಸಲು ಮೊದಲು ಮಾಗಿದ ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ.
ಪಪ್ಪಾಯಿ ಸಿಪ್ಪೆಯನ್ನು ರುಬ್ಬಿಕೊಳ್ಳಿ. ಈಗ ಒಂದು ಬೌಲ್‌ಗೆ ಕಿವುಚಿದ ಬಾಳೆಹಣ್ಣು, ಪಪ್ಪಾಯಿ ಸಿಪ್ಪೆಯ ಪೇಸ್ಟ್, ಕಾಫಿ ಪುಡಿ ಮತ್ತು ಒಂದೆರಡು ಹನಿ ತೆಂಗಿನ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಇದನ್ನು ಕೂದಲಿಗೆ ಬೇರಿನಿಂದ ತುದಿಯವರೆಗೆ ಹಚ್ಚಿ 20 ನಿಮಿಷ ಬಿಡಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತಲೆಸ್ನಾನ ಮಾಡಿ.
ಇದನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಮಾಡಿ. ಬಿಳಿ ಕೂದಲು ಶಾಶ್ವತ ಕಪ್ಪಾಗಲು ಆರಂಬಿಸುವುದು.
ಈ ಮಾಸ್ಕ್ ನಿಮ್ಮ ಕೂದಲಿಗೆ ಪೋಷಣೆಯನ್ನು ನೀಡುತ್ತದೆ. ಕೂದಲನ್ನು ನಯವಾಗಿಸುತ್ತದೆ ಮತ್ತು ಕ್ರಮೇಣ ಕೂದಲು ಉದುರುವಿಕೆಯ ಸಮಸ್ಯೆಯೂ ಕಡಿಮೆಯಾಗುತ್ತದೆ. (ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.)