ಈ ಎಲೆಯನ್ನು ಹಿಸುಕಿ ರಸ ತೆಗೆದು ಸೇವಿಸಿದರೆ ಗಂಟುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗುವುದು !ಕಿಡ್ನಿ ಸ್ಟೋನಿಗೂ ಇದೇ ಶಾಶ್ವತ ಪರಿಹಾರ !
ಯೂರಿಕ್ ಆಸಿಡ್ ಗೆ ಶಾಶ್ವತ ಪರಿಹಾರ ಯೂರಿಕ್ ಆಸಿಡ್ ಹೆಚ್ಚಾದಾಗ ಕಾಣಿಸಿಕೊಳ್ಳುವ ವಿಪರೀತ ನೋವನ್ನು ಕಡಿಮೆ ಮಾಡಲು ಔಷಧಿಯ ಬದಲಾಗಿ ಕೆಲವು ನೈಸರ್ಗಿಕ ಪದಾರ್ಥಗಳನ್ನೇ ಬಳಸಬಹುದು.ಇವು ಪರಿಣಾಮಕಾರಿಯಾಗಿ ಇರುವುದಲ್ಲದೆ ಅಡ್ಡ ಪರಿಣಾಮವನ್ನು ಬೀರುವುದೂ ಇಲ್ಲ.
ಯೂರಿಕ್ ಆಸಿಡ್ ಗೆ ಶಾಶ್ವತ ಪರಿಹಾರ ಹಾಗೆಯೇ ಕಳೆ ಗಿಡದಂತೆ ಕಾಣಿಸಿಕೊಳ್ಳುವ ಈ ಗಿಡದ ಎಲೆ ಔಷಧೀಯ ಗುಣಗಳ ಭಂಡಾರ. ಈ ಎಲೆಯನ್ನು ಹಾಗೆಯೇ ಹಿಸುಕಿ ಅದರ ರಸ ತೆಗೆದು ಸೇವಿಸಿದರೆ ಯೂರಿಕ್ ಆಸಿಡ್ ಕರಗಲು ಶುರುವಾಗುತ್ತದೆ.
ಈ ಸೊಪ್ಪಿನ ಗಿಡ ಗದ್ದೆ ಅಂಚು,ಬೇಲಿ,ಗುಡ್ಡ ಬೆಟ್ಟಗಳ ತಪ್ಪಲಿನಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಇದನ್ನು ಅಖೋರ್ ಮೊರನು, ಮಿತಲಾ, ಮಿಟ್ಲಿ ,ಮರಳು ಕಾಗದ ಮರ, ಸ್ಯಾಂಡ್ ಪೇಪರ್ ಟ್ರೀ ಎಂದು ಕರೆಯಲಾಗುತ್ತದೆ.
ಈ ಎಲೆಯನ್ನು ಒಂದು ಪಾತ್ರೆ ನೀರಿನಲ್ಲಿ ಹಾಕಿ ಚೆನ್ನಾಗಿ ಹಿಸುಕಬೇಕು.ಆಗ ಎಲೆಯಿಂದ ಒಂದು ರೀತಿ ಕಡು ಬಣ್ಣದ ರಸ ಬರುತ್ತದೆ.ಈಗ ಇದಕ್ಕೆ ಜೀರಿಗೆ ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಮುಚ್ಚಿಡಿ.ನಂತರ ಅದಕ್ಕೆ ಸ್ವಲ್ಪ ನಿಂಬೆರಸ ಬೆರೆಸಿ ಕುಡಿಯಿರಿ.
ಈ ನೀರನ್ನು ಕುಡಿಯುತ್ತಾ ಬಂದರೆ ಯೂರಿಕ್ ಆಸಿಡ್ ಕೂಡಾ ಕರಗುವುದು.ಅಲ್ಲದೆ ಕಿಡ್ನಿ ಸ್ಟೋನ್ ಕರಗುತ್ತಾ ಕರಗುತ್ತಾ ಗಾತ್ರದಲ್ಲಿ ಪುಟ್ಟದಾಗಿ ಮೂತ್ರದ ಮೂಲಕವೇ ಕಿಡ್ನಿಯಿಂದ ಹೊರ ಹೋಗುವುದು.
ಈ ನೀರು ಕೀಲು, ಗಂಟು ನೋವು ಮತ್ತು ಕಿಡ್ನಿ ಸ್ಟೋನ್ ನಿಂದ ಉಂಟಾಗುವ ನೋವುನಿಂದಲೂ ಪರಿಹಾರ ನೀಡುತ್ತದೆ. ಒಟ್ಟಿನಲ್ಲಿ ಯೂರಿಕ್ ಆಸಿಡ್ ಮತ್ತು ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಇದು ದಿವ್ಯೌಷಧವೆ ಸರಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ