ಮನೆ ಮುಂದೆಯೇ ಸಿಗುವ ಈ ಹೂವಿನಿಂದ ಬೇರುಗಳಿಂದಲೂ ಕಪ್ಪಾಗುತ್ತೆ ಬಿಳಿ ಕೂದಲು...
ಆಧುನಿಕ ವೇಗದ ಜೀವನ ಶೈಲಿಯಲ್ಲಿ ಅತಿಯಾದ ಒತ್ತಡ, ಸ್ವಯಂ ನಿರೋಧಕ ಕಾಯಿಲೆಗಳು, ಥೈರಾಯ್ಡ್, ವಿಟಮಿನ್ ಗಳ ಕೊರತೆ, ಯುವಿ ಕಿರಣಗಳಿಂದ ಉಂಟಾಗುವ ಹಾನಿ ಮತ್ತು ಮಾಲಿನ್ಯದಿಂದ ಬಿಳಿ ಕೂದಲಿನ ಸಮಸ್ಯೆ ಹೆಚ್ಚಾಗಿದೆ.
ಪುರುಷರೇ ಇರಲಿ ಅಥವಾ ಸ್ತ್ರೀ ಆಗಿರಲಿ ಮನೆ ಮುಂದೆ ಸುಲಭವಾಗಿ ಲಭ್ಯವಿರುವ ಒಂದೇ ಒಂದು 'ಹೂವು' ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬಲ್ಲದು.
ಮನೆ ಮುಂದೆ ಸೊಂಪಾಗಿ ಬೆಳೆಯುವ ಪಾರಿಜಾತ ಹೂವುಗಳನ್ನು ಬಳಸಿ ನೈಸರ್ಗಿಕವಾಗಿ ಬಿಳಿ ಕೂದಲನ್ನು ಬುಡದಿಂದಲೂ ಗಾಢ ಕಪ್ಪಾಗಿಸಬಹುದು.
ಎರಡು ಕಪ್ ನೀರು, 2 ಸ್ಪೂನ್ ಟೀ ಸೊಪ್ಪನ್ನು ಚೆನ್ನಾಗಿ ಕುದಿಸಿ ಸ್ಟೌ ಆಫ್ ಮಾಡಿ. ನೀರನ್ನು ಜರಡಿಯಾಡಿ ಬೆಂದ ಟೀ ಸೊಪ್ಪಿನಲ್ಲಿ ಒಂದು ಹಿಡಿ ಪಾರಿಜಾತ ಹೂವು, ಮತ್ತದರ ಎಲೆಗಳನ್ನು ಹಾಕಿ ಮಿಕ್ಸಿ ಮಾಡಿ. ಬಳಿಕ ಪೇಸ್ಟ್ ಅನ್ನು ಕಬ್ಬಿಣದ ಬಾಣಲೆಗೆ ಹಾಕಿ 1 ಸ್ಪೂನ್ ಕಾಫಿ ಪುಡಿ, ಸೋಸಿಟ್ಟ ನೀರನ್ನು ಬೆರೆಸಿ ಗಾಢವಾದ ಪೇಸ್ಟ್ ತಯಾರಿಸಿ ಮೂರ್ನಾಲ್ಕು ಗಂಟೆಗಳ ಕಾಲ ಹಾಗೆ ಇಡಿ.
ಬಿಳಿ ಕೂದಲಿಗಾಗಿ ತಯಾರಿಸಿಟ್ಟ ನೈಸರ್ಗಿಕ ಹೇರ್ ಡೈ ಅನ್ನು ನಾಲ್ಕು ಗಂಟೆಗಳ ಬಳಿಕ ಕೂದಲಿಗೆ ಬುಡದಿಂದಲೂ ಹಚ್ಚಿ. ಅದು ಡ್ರೈ ಆದ ಬಳಿಕ ಸೌಮ್ಯ ಶಾಂಪೂವಿನಿಂದ ತಲೆ ತೊಳೆಯಿರಿ. ಇದರಿಂದ ಬೇರುಗಳಿಂದ ಗಾಢವಾದ ಕಪ್ಪು ಕೂದಲನ್ನು ಹೊಂದಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.