Parijat Plant Importance: ಮನೆಯ ಈ ದಿಕ್ಕಿನಲ್ಲಿ ಈ ಗಿಡವಿರಲಿ, ಸಾಕ್ಷಾತ್ ಲಕ್ಷ್ಮಿಯೇ ಬಂದು ನೆಲೆಸುತ್ತಾಳೆ
1. ತಾಯಿ ಲಕ್ಷ್ಮಿಯ ವಾಸ -ಪಾರಿಜಾತದ ಗಿಡ ತಾಯಿ ಲಕ್ಷ್ಮಿಗೆ ತುಂಬಾ ಪ್ರಿಯವಾದುದು ಎನ್ನಲಾಗುತ್ತದೆ. ಈ ಗಿಡದ ಹೂವುಗಳು ಸುತ್ತಮುತ್ತಲು ಸುವಾಸನೆಯ ಕಂಪನ್ನು ಹರಡುತ್ತವೆ ಮತ್ತು ತನ್ನಷ್ಟಕ್ಕೆ ತಾನೇ ಮರದಿಂದ ಉದುರುತ್ತವೆ. ಈ ಅಲೌಕಿಕ ಪುಷ್ಪಗಳು ಕೇವಲ ರಾತ್ರಿಯ ಹೊತ್ತು ಮಾತ್ರ ಅರಳುತ್ತವೆ. ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಶಾಂತಿಯವಾತಾವರಣ ನೆಲೆಸುತ್ತದೆ.
2. ಒತ್ತಡದಿಂದ ಮುಕ್ತಿ ನೀಡುತ್ತದೆ - ಹರಸಿಂಗಾರ ಅಥವಾ ಪಾರಿಜಾತದ ಹೂವಿನ ಪರಿಮಳದಲ್ಲಿ ಒತ್ತಡ ದೂರಗೊಳಿಸುವ ಶಕ್ತಿ ಇರುತ್ತದೆ. ಜೀವನದಿಂದ ಮಾನಸಿಕ ಸಂಕಷ್ಟಗಳು ದೂರಾಗಿ ಜೀವನದಲ್ಲಿ ಖುಷಿಗಳ ಆಗಮನವಾಗುತ್ತದೆ. ಮನೆಯ ಅಕ್ಕಪಕ್ಕದಲ್ಲಿಯೂ ಕೂಡ ಈ ಗಿಡವಿದ್ದರೆ, ಅದು ಮನಸ್ಸನ್ನು ಶಾಂತಗೊಳಿಸುತ್ತದೆ.
3. ಮನೆಯ ಈ ದಿಕ್ಕಿನಲ್ಲಿ ಪಾರಿಜಾತದ ಗಿಡವಿರಲಿ -ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ತೊಲಗಿಸಲು ಮತ್ತು ಸಕಾರಾತ್ಮಕ ಶಕ್ತಿಯ ಸಂಚಾರವನ್ನು ಹೆಚ್ಚಿಸಲು ಪಾರಿಜಾತದ ಗಿಡವನ್ನು ಮನೆಯ ಉತ್ತರ ಅಥವಾ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಇದರಿಂದ ಮನೆಯಲ್ಲಿ ವಾದ-ವಿವಾದಗಳು ಕೊನೆಗೊಳ್ಳುತ್ತವೆ. ಕುಟುಂಬದಲ್ಲಿ ಸದಸ್ಯರ ಪ್ರಗತಿಯಾಗುತ್ತದೆ.
4. ಆರೋಗ್ಯ ಲಾಭ - ಧಾರ್ಮಿಕ ನಂಬಿಕೆಗಳ ಪ್ರಕಾರ ಮನೆಯಲ್ಲಿ ಪಾರಿಜಾತದ ಗಿಡವಿದ್ದರೆ, ಆರೋಗ್ಯ ಲಾಭ ಕೂಡ ಲಭಿಸುತ್ತದೆ ಮತ್ತು ತಾಯಿ ಲಕ್ಷ್ಮಿಯ ಕೃಪೆಯಿಂದ ದೀರ್ಘಾಯು ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಧಾರ್ಮಿಕ ಮಹತ್ವದ ಜೊತೆಗೆ ಆಯುರ್ವೇದದ ದೃಷ್ಟಿಯಿಂದಲೂ ಕೂಡ ಪಾರಿಜಾತ ಲಾಭಕಾರಿಯಾಗಿದೆ. ಇದರ ಸೇವನೆಯಿಂದ ಹಲವು ರೋಗಗಳು ನಿವಾರಣೆಯಾಗುತ್ತವೆ.
5. ಪುರಾಣಗಳಲ್ಲಿ ಪಾರಿಜಾತ ಗಿಡದ ಮಹತ್ವ - ಧಾರ್ಮಿಕ ಪುರಾಣಗಳ ಪ್ರಕಾರ, ಸಮುದ್ರ ಮಂಥನ ವೇಳೆ ಪಾರಿಜಾತ ಗಿಡದ ಉತ್ಪತ್ತಿಯಾಗಿದೆ ಎನ್ನಲಾಗಿದೆ. ಬಳಿಕ ಇಂದ್ರದೇವ ತನ್ನ ನಂದನವನದಲ್ಲಿ ಈ ಗಿಡವನ್ನು ನೆಡುತ್ತಾನೆ. ನಂತರ ಶ್ರೀ ಕೃಷ್ಣ ಭೂಮಿಗೆ ಈ ಗಿಡವನ್ನು ತರುತ್ತಾನೆ. ನರಕಾಸುರನ ವಧೆಯ ನಂತರ ಇಂದ್ರ ದೇವ ಶ್ರೀಕೃಷ್ಣನಿಗೆ ಈ ಗಿಡದ ಹೂವನ್ನು ಕಾಣಿಕೆಯಾಗಿ ನೀಡುತ್ತಾನೆ. ಆ ಹೂವನ್ನು ಕೃಷ್ಣ ದೇವಿ ರುಕ್ಮಿಣಿಗೆ ನೀಡುತ್ತಾನೆ. ಇದರಿಂದ ಅವಳಿಗೆ ದೀರ್ಘಾಯು ಪ್ರಾಪ್ತಿಯಾಯಿತು. ಇದನ್ನು ಗಮನಿಸಿದ ಸತ್ಯಭಾಮೆ ಶ್ರೀಕೃಷ್ಣನಿಗೆ ತನಗೆ ಇಡೀ ಪಾರಿಜಾತದ ಗಿಡವೇ ಬೇಕು ಎಂಬ ಬೇಡಿಕೆಯನ್ನಿಡುತ್ತಾಳೆ. ಇದೇ ಗಿಡದ ಕಾರಣ ದೇವೇಂದ್ರ ಹಾಗೂ ಶ್ರೀಕೃಷ್ಣನ ನಡುವೆ ಯುದ್ಧ ನಡೆಯುತ್ತದೆ ಮತ್ತು ಸೋಲಿನ ಬಳಿಕ ಇಂದ್ರ ದೇವ ಈ ಗಿಡವನ್ನು ಶ್ರೀಕೃಷ್ಣನಿಗೆ ನೀಡುತ್ತಾನೆ ಹೀಗಾಗಿ ಅದು ಭೂಮಿಗೆ ಬಂತು ಎನ್ನಲಾಗುತ್ತದೆ.