Parineethi Chopra: ಮದುವೆಯ ಬಳಿಕ ಮೊದಲ ಕರ್ವ ಚೌತ್ ಆಚರಿಸಿದ ಬಾಲಿವುಡ್ ನಟಿ
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಎಎಪಿ ಮುಖಂಡ ರಾಘವ್ ಚಡ್ಡಾಇಬ್ಬರು ಅದ್ಧೂರಿಯಾಗಿ ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಸೆ.24ರಂದು ಸಪ್ತಪದಿ ತುಳಿದಿದ್ದಾರೆ.
ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಜೋಡಿ, ಉತ್ತರ ಭಾರತದ ಸಂಪ್ರದಾಯದದಂತೆ ನವದೆಹಲಿಯಲ್ಲಿ ತಮ್ಮ ಮೊದಲ ಕರ್ವ ಚೌತ್ ಆಚರಿಸಿಕೊಂಡರು.
ಕರ್ವ ಚೌತ್ ದಿನದಂದು ಪರಿಣಿತ ರೆಡ್ ಕಲರ್ ವಿತ್ ವೈಟ್ ಸ್ಟೋನ್ ಡಿಸೈನ್ ಚೂಡಿದಾರ್ ಧರಿಸಿದರು. ಹಾಗೆ ಡ್ರೆಸ್ಗೆ ಮ್ಯಾಚಿಂಗ್ ವೈಟ್ ಸ್ಟೋನ್ ಆಭರಣ ಹಾಗೂ ಸ್ಲಿಪ್ಪರ್ ಹಾಕಿಕೊಂಡಿದ್ದರು.
ರಾಘವ್ ಚಡ್ಡಾ, ಕರ್ವ ಚೌತ್ ದಿನ ಸರಳವಾಗಿ ವೈಟ್ ಪ್ಯಾಂಟ್, ಎಲ್ಲೋ ಶರ್ಟ್ ಹಾಗೂ ಬ್ರೌನ್ ಬ್ಲೇಜರ್ ಧರಿಸುವುದರ ಜೊತೆಗೆ ಬ್ರೌನ್ ಶೂಸ್ ಹಾಕಿಕೊಂಡಿದ್ದರು.
ಈ ಫೋಟೋಗಳನ್ನು ಪರಿಣಿತ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ʼಹ್ಯಾಪಿ ಫಸ್ಟ್ ಕರ್ವ ಚೌತ್ ಮೈ ಲವ್ʼ ಅಂತ ಬರೆದುಕೊಂಡಿದ್ದಾರೆ.
ಪರಿಣಿತ ನಟಿಸರುವ ʼಮಿಷನ್ ರಾಣಿಗಂಜ್ʼ ಸಿನಿಮಾ ಬಿಡುಗಡೆಯಾಗದೆ, ಮುಂದಿನ ವರ್ಷ ʼಅಮರ್ ಸಿಂಗ್ ಚಮ್ಕಿಲಾʼ ಶೂಟಿಂಗ್ ಕಂಪ್ಲೀಟ್ ಆಗಿ ಮುಂದಿನ ವರ್ಷ ತೆರೆಕಾಣಲು ಸಜ್ಜಾಗುತ್ತಿದ್ದರೆ, ಇನ್ನೊಂದು ಕಡೆ ರಾಘವ್ ತಮ್ಮ ರಾಜಕೀಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.