Parineethi Chopra: ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ತಮ್ಮ ಪತಿಯಂತೆ ರಾಜಕೀಯ ಸೇರುತ್ತಾರಂತೆ? ಬಿ-ಟೌನ್‌ ಬೆಡಗಿ ಹೇಳಿದ್ದೇನು ಗೊತ್ತಾ?

Sun, 10 Dec 2023-5:22 pm,

ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಜೋಡಿ ವಿವಾಹದ ಪೂರ್ವ ಸಮಾರಂಭಗಳು ದೆಹಲಿಯಲ್ಲಿ ಕ್ರಿಕೆಟ್ ಪಂದ್ಯದೊಂದಿಗೆ ಪ್ರಾರಂಭವಾದವು, ನಂತರ ದಂಪತಿಗಳು ಉದಯಪುರಕ್ಕೆ ಪ್ರಯಾಣ ಬೆಳೆಸಿ, ಅಲ್ಲಿ ಅವರ ಅರಿಶಿಣ ಶಾಸ್ತ್ರ ಮತ್ತು ಮೆಹೆಂದಿ ಸಮಾರಂಭಗಳು ನಡೆದವು. ಇಬ್ಬರ  ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆ ನಿಶ್ಚಯವಾಗಿ ಮಾಡಿ, ಇದೇ ವರ್ಷ ಸೆಪ್ಟೆಂಬರ್ 24 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇಂದು ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ಪರಿಣಿತಾಗೆ, ನಿಮಗೆ ರಾಜಕೀಯದಲ್ಲಿ ಆಸಕ್ತಿ ಇದೆಯೇ ಎಂದು ಕೇಳಿದಾಗ, ಈಕೆ ಮುಗುಳ್ನಕ್ಕು, "ನಾನು ನಿಮಗೆ ಯಶಸ್ವಿ ದಾಂಪತ್ಯದ ರಹಸ್ಯವನ್ನು ಹೇಳುತ್ತೇನೆ! ನಾನು ಒಬ್ಬಳು ನಟಿ, ನನ್ನ ಪತಿ ರಾಜಕಾರಣಿ. ಅವರಿಗೆ ಬಾಲಿವುಡ್ ಬಗ್ಗೆ ಏನೂ ಗೊತ್ತಿಲ್ಲಾ, ನನಗೆ ರಾಜಕೀಯ ಬಗ್ಗೆ ಏನು ಗೊತ್ತಿಲ್ಲಾ. ಆದರಿಂದ ನಮ್ಮ ದಾಂಪತ್ಯ ಚೆನ್ನಾಗಿದೆ" ಎಂದು ಹೇಳಿದರು.  

ಇತ್ತೀಚೆಗೆ, ನಟಿ ತನ್ನ ಮೊದಲ ದೀಪಾವಳಿಯನ್ನು ಪತಿ ರಾಘವ್ ಚಡ್ಡಾ ಅವರೊಂದಿಗೆ ಆಚರಿಸಿದ ಪೋಟೋಗಳನ್ನು  ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.   

ನಟಿ ಪರಿಣಿತ ನಾವು ನಮ್ಮ ಸರಿಯಾದ ಕೆಲಸ-ಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದಿದ್ದಾರೆ.  

ಪರಿಣಿತಿ ಚೋಪ್ರಾ, ಭಾರತದಲ್ಲಿ, ಜನರು ಕೆಲಸದಲ್ಲಿ ನಿರತರಾಗಿದ್ದರಿಂದ ಸಮಯಕ್ಕೆ ಸರಿಯಾಗಿ ತಿನ್ನುವುದಿಲ್ಲ ಅಥವಾ ಮಲಗಲಿಲ್ಲ ಎಂದು ಹೆಮ್ಮೆಯಿಂದ ಮಾತನಾಡುವುದನ್ನು ನಾವು  ನೋಡಿದ್ದೇವೆ. ಅವರು ಇದನ್ನು ಗೌರವದ ವಿಷಯದಂತೆ ಹೇಳಿಕೊಳ್ಳುತ್ತಾರೆ. ಆದರೆ ವೈಯಕ್ತಿಕವಾಗಿ ನನಗೆ ಜೀವನ ನಡೆಸಲು ಇದು ಸರಿಯಾದ ಮಾರ್ಗ ಎಂದು ಭಾವಿಸುವುದಿಲ್ಲ ಎಂದು ಹೇಳಿದ್ದಾರೆ.  

ನಟಿ ಪರಿಣಿತಿ ನಾನು  ಕಷ್ಟಪಟ್ಟು ಕೆಲಸ ಮಾಡುವುದನ್ನು ನಂಬುತ್ತೇನೆ, ಆದರೆ ನಾನು ರಜಾದಿನಗಳಲ್ಲಿ ಹೋಗಲು ಹಾಗೂ ನನ್ನ ಸ್ನೇಹಿತರನ್ನು ಭೇಟಿ ಮಾಡಲು  ಇಷ್ಟಪಡುತ್ತೇನೆ ಎಂದಿದ್ದಾರೆ.  

ಪರಿಣಿತಿ ಚೋಪ್ರಾ, ನಾನು 85 ಅಥವಾ 90 ವರ್ಷ ವಯಸ್ಸಿನವಳಾಗಿದ್ದಾಗ, ನಾನು ಹಿಂತಿರುಗಿ ನೋಡಿದಾಗ,  ನಾನು ನನ್ನ ಜೀವನವನ್ನು ಹೇಗೆ ಬದುಕಬೇಕೋ ಅಂತ ಅಂದುಕೊಂಡಿದ್ದೆ ಹಾಗೆ ಬದುಕಿದ್ದೇನೆ ಎಂದು ಅನಿಸಬೇಕು ಎಂದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link