ರಾಘವ್ ಚಡ್ಡಾ ನಟಿ ಪರಿಣಿತಿ ಚೋಪ್ರಾ ಎರಡನೇ ಪತ್ನಿ! ಮದುವೆಯಾಗಿ ಮಕ್ಕಳಿರೋ ವಿಚಾರ ಗೊತ್ತಿರಲಿಲ್ವಾ?

Wed, 01 May 2024-10:42 am,

ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಲವ್ ಸ್ಟೋರಿ ತುಂಬಾ ಇಂಟರೆಸ್ಟಿಂಗ್‌ ಆಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ಪರಿಣಿತಿ, ರಾಘವ್‌ ಬಗ್ಗೆ ಹೇಳಿದ ಕೆಲವು ಮಾತುಗಳನ್ನು ಒಂದಷ್ಟು ಜನ ತಪ್ಪಾಗಿ ಬಿಂಬಿಸುತ್ತಿದ್ದಾರೆ.

ಅವನಿಗೆ ಈಗಾಗಲೇ ಮದ್ವೆಯಾಗಿದೆಯೋ ಮಕ್ಕಳಿದ್ದಾರೋ ಅವನ ವಯಸ್ಸು ಎಷ್ಟಿರಬಹುದು ಇದೇನೂ ನನಗೆ ಗೊತ್ತಿರಲಿಲ್ಲ. ಆತ ನನ್ನ ಕುಳಿತಿದ್ದರೆ ನಾನು ಅವನನ್ನೇ ನೋಡುತ್ತಿದ್ದೆ ಎಂದು ಪರಿಣಿತಿ ಚೋಪ್ರಾ ಹೇಳಿದ್ದಾರೆ.

ನಾವಿಬ್ಬರು ಲಂಡನ್‌ನಲ್ಲಿ ಮೊದಲ ಬಾರಿ ಭೇಟಿಯಾದೆವು. ನನಗೆ ಆತ ಯಾರು ಏನು ಮಾಡುತ್ತಿದ್ದಾನೆ ಯಾವುದೂ ಗೊತ್ತಿರಲಿಲ್ಲ. ನಾನು ಇವನನ್ನೇ ಮದುವೆಯಾಗುತ್ತೇನೆ ಎಂದು ನನ್ನ ಮನಸ್ಸು ಹೇಳುತ್ತಿತ್ತು ಎಂದಿದ್ದಾರೆ.

ಮದ್ವೆಯಾಗಿದೆಯೋ ಮಕ್ಕಳಿದ್ದಾರೋ -  ಈ ಶಬ್ದಗಳು ಕೆಲವು ಅನುಮಾನಕ್ಕೆ ದಾರಿಯಾಗಿವೆ. ರಾಘವ್‌ ಚಡ್ಡಾ ಅವರು ಪರಿಣಿತಿ ಜೊತೆ ಎರಡನೇ ಮದುವೆಯಾದ್ರಾ? ಎಂದು ಅನೇಕರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ 24 ರಂದು ಪರಿಣಿತಿ ಮತ್ತು ರಾಘವ್ ಚಡ್ಡಾ ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ಮದುವೆಯಾದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link