ಸೂರ್ಯ ಗ್ರಹಣ 2018: ಆಗಸ್ಟ್ 11 ರ ಸೂರ್ಯ ಗ್ರಹಣವು ಈ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತದೆ

Sat, 11 Aug 2018-11:57 am,

ವರ್ಷದ ಮೂರನೇ ಮತ್ತು ಅಂತಿಮ ಸೂರ್ಯಗ್ರಹಣ 11 ಆಗಸ್ಟ್, 2018 ರಂದು ನಡೆಯಲಿದೆ. ಇದಕ್ಕೆ ಮೊದಲು, ಫೆಬ್ರವರಿ 15 ಮತ್ತು ಜುಲೈ 13 ರಂದು ಎರಡು ಸೌರ ಗ್ರಹಣಗಳನ್ನು ಈ ವರ್ಷ ನಾವು ನೋಡಿದ್ದೇವೆ. ಆಗಸ್ಟ್ 11 ರಂದು ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ವಿಜ್ಞಾನಿಗಳ ಪ್ರಕಾರ, ಉತ್ತರ ಅಮೇರಿಕ, ವಾಯುವ್ಯ ಏಷ್ಯಾ, ದಕ್ಷಿಣ ಕೊರಿಯಾ, ಮಾಸ್ಕೋ ಮತ್ತು ಚೀನಾಗಳಲ್ಲಿ ಈ ವರ್ಷದ ಕೊನೆಯ ಸೂರ್ಯ ಗ್ರಹಣವು ಗೋಚರಿಸುತ್ತದೆ.

ಸೂರ್ಯ ಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ01:32 ನಿಮಿಷಕ್ಕೆ ಪ್ರಾರಂಭಗೊಂದು ಸಂಜೆ 05:00 ಗಂಟೆಗೆ ಕೊನೆಗೊಳ್ಳುತ್ತದೆ. ಆದಾಗ್ಯೂ, ಅಂತರಾಷ್ಟ್ರೀಯ ಸಮಯದ ಪ್ರಕಾರ ಭಾಗಶಃ ಸೌರ ಗ್ರಹಣವು ಬೆಳಿಗ್ಗೆ 08:02 ನಿಮಿಷದಿಂದ 11:30 ಕ್ಕೆ ಕೊನೆಗೊಳ್ಳುತ್ತದೆ.

ಈ ಸಮಯದಲ್ಲಿ ಭಾಗಶಃ ಸೌರ ಗ್ರಹಣ ಇರುತ್ತದೆ, ಇದು ಉತ್ತರ ಉತ್ತರಾರ್ಧ ಗೋಳದಲ್ಲಿ ಅಂದರೆ ಉತ್ತರ ಯುರೋಪ್ನಿಂದ ಪೂರ್ವ ಏಷ್ಯಾ ಮತ್ತು ರಷ್ಯಾಕ್ಕೆ ಕಾಣುತ್ತದೆ. ಭಾರತದಲ್ಲಿ, ಈ ವರ್ಷದ ಕೊನೆಯ ಸೌರ ಗ್ರಹಣವು ಗೋಚರವಾಗುವುದಿಲ್ಲ. ನಾಸಾ ಪ್ರಕಾರ, ಈ ಪ್ರದೇಶಗಳಲ್ಲಿ ವಾಸಿಸುವ 65 ಪ್ರತಿಶತದಷ್ಟು ಜನರು ಭಾಗಶಃ ಸೌರ ಗ್ರಹಣವನ್ನು ಕಾಣಲು ಸಾಧ್ಯವಾಗುತ್ತದೆ. ಉತ್ತರ ಅಮೇರಿಕ, ವಾಯವ್ಯ ಏಷ್ಯಾ, ದಕ್ಷಿಣ ಕೊರಿಯಾ, ಮಾಸ್ಕೋ, ಚೀನಾ ಮತ್ತು ಲಂಡನ್ಗಳಲ್ಲಿ ಸೌರ ಗ್ರಹಣವು ಕಾಣಿಸಿಕೊಳ್ಳುತ್ತದೆ. ಈ ದೇಶಗಳಲ್ಲಿ, ಸೌರ ಗ್ರಹಣವನ್ನು ಬೆಳಿಗ್ಗೆ 09:00 ಗಂಟೆಯಿಂದ 09:30 ರವರೆಗೆ ವೀಕ್ಷಿಸಬಹುದು.

ಪಂಡಿತರ ಪ್ರಕಾರ 2019ರಲ್ಲೂ ಕೂಡ ಮೂರು ಸೂರ್ಯ ಗ್ರಹಣ ಕಾಣಿಸಿಕೊಳ್ಳುತ್ತದೆ. ಗ್ರಹಣವನ್ನು ಧಾರ್ಮಿಕವಾಗಿ ದೋಷ ಎಂದು ಪರಿಗಣಿಸಲಾಗುತ್ತದೆ. 

ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ, ಅದು ಸಂಪೂರ್ಣವಾಗಿ ಗಾಢವಾಗಿದ್ದು, ಚಂದ್ರನು ಸಂಪೂರ್ಣವಾಗಿ ಸೂರ್ಯನನ್ನು ಮುಚ್ಚಿದೆ ಎಂದರ್ಥ. ಇದನ್ನು ಪೂರ್ಣ ಸೂರ್ಯ ಗ್ರಹಣ ಎಂದು ಕರೆಯಲಾಗುತ್ತದೆ. ಭಾಗಶಃ ಸೂರ್ಯ ಗ್ರಹಣದಲ್ಲಿ, ಸೂರ್ಯನು ಸಂಪೂರ್ಣವಾಗಿ ಚಂದ್ರನನ್ನು ಒಳಗೊಳ್ಳುವುದಿಲ್ಲ, ಅಂತಹ ಸ್ಥಿತಿಯನ್ನು ಭಾಗಶಃ ಅಥವಾ ವಿಭಾಗ ಗ್ರಹಣ ಎಂದು ಕರೆಯಲಾಗುತ್ತದೆ. ಭಾಗಶಃ ಚಂದ್ರ ಗ್ರಹಣವು ಪ್ರತಿ ಆರು ತಿಂಗಳಿಗೊಮ್ಮೆ ಸಂಭವಿಸುತ್ತದೆ.

ಗ್ರಹಣ ಸಮಯದಲ್ಲಿ, ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ. ಈ ಸಮಯದಲ್ಲಿ ಆಹಾರ ಸೇವೆನೆಯನ್ನು ನಿಷೇಧಿಸಲಾಗಿದೆ. ಹಿಂದೂ ನಂಬಿಕೆಗಳ ಪ್ರಕಾರ, ಗ್ರಹಣ ಅವಧಿಯ ಅಂತ್ಯದ ನಂತರ ಪವಿತ್ರ ನದಿಗಳಲ್ಲಿ ಸ್ನಾನ ಮಾಡಬೇಕು. ಗ್ರಹಣ ಅವಧಿಯ ನಂತರ ಬಡವರಿಗೆ ಮತ್ತು ಬ್ರಾಹ್ಮಣರಿಗೆ ದಾನ ನೀಡುವುದು ಪ್ರತೀತಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link