ಸ್ನಾನ ಮಾಡೋವಾಗ ಬಾತ್‌ರೂಮ್‌ಗೆ ನುಗ್ಗುತ್ತಿದ್ರು.. ಮಲಗಿದ್ರೆ ಅಲ್ಲೂ ಬರೋರು.. ಮುಟ್ಟಬಾರದ ಜಾಗ ಮುಟ್ಟುತ್ತಿದ್ರು.. ಖ್ಯಾತ ಕನ್ನಡ ಸಿರೀಯಲ್ ನಟಿ ಸೆನ್ಸೇಷನಲ್ ಕಾಮೆಂಟ್!!
![](https://kannada.cdn.zeenews.com/kannada/sites/default/files/2024/09/05/440753-sitara-tara-1.jpg?im=FitAndFill=(500,286))
ಕನ್ನಡದ ಪಾರು ಸಿರೀಯಲ್‌ನ ಮೂಲಕ ಎಲ್ಲರ ಗಮನ ಸೆಳೆದ ನಟಿ ಸಿತಾರಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ನಟಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಇದೀಗ ಬಣ್ಣದ ಲೋಕದಲ್ಲಿ ನೆಲೆಯೂರಿದ್ದಾರೆ. ಜೀವನದಲ್ಲಿ ಕರಾಳ ದಿನಗಳನ್ನು ನೋಡಿರುವ ಸಿತಾರಾ ಅವರ ಬದುಕಿನಲ್ಲಿಯೂ ಕೆಲವು ಕಹಿ ಮತ್ತು ಅಹಿತಕರ ಘಟನೆಗಳೂ ನಡೆದಿವೆ.
![](https://kannada.cdn.zeenews.com/kannada/sites/default/files/2024/09/05/440752-sitara-tara-7.jpg?im=FitAndFill=(500,286))
ರಂಗಭೂಮಿಯಿಂದಲೇ ನಟನೆಗೆ ಪಾದಾರ್ಪಣೆ ಮಾಡಿದ ನಟಿ ಸಿತಾರಾ. ಅದೇ ರಂಗಭೂಮಿಯಲ್ಲಿದ್ದಾಗ ಆದ ಕೆಟ್ಟ ಅನುಭವಗಳು ಯಾವ ಹೆಣ್ಣಿಗೂ ಆಗಬಾರದು. ನನಗೆ ಬಂದ ಈ ಕಷ್ಟ ಯಾರಿಗೂ ಬರಬಾರದು ಎಂದು ನಟಿ ಇಂದಿಗೂ ಕಣ್ಣೀರು ಹಾಕುತ್ತಿದ್ದಾರೆ.
![](https://kannada.cdn.zeenews.com/kannada/sites/default/files/2024/09/05/440751-sitara-tara-6.jpg?im=FitAndFill=(500,286))
ಹಾಗಾದರೆ ಇಷ್ಟು ಸಿತಾರಾ ಇಷ್ಟು ದುಃಖಿತರಾಗಲು ಕಾರಣವೇನು..? ಅವರ ಬಾಳಲ್ಲಿ ಎದುರಾದ ಆ ಸಮಸ್ಯೆ ಎಂಥದ್ದು? ಎನ್ನುವುದರ ಕುರಿತು ತಾವೇ ಸ್ವತಃ ಹೇಳಿಕೊಂಡಿದ್ದಾರೆ. ಅಪ್ಪ ಅಮ್ಮನ ಪ್ರೀತಿ ಇಲ್ಲದೇ ಅನಾಥವಾಗಿ ಮಠದಲ್ಲಿ ಬೆಳೆದ ಸಿತಾರಾ ಆ ಮಠ ಬಿಟ್ಟು ಹೊರಬಂದ ಮೇಲೆ ಸಿತಾರಾ ಅನುಭವಿಸಿದ ನೋವು, ಸಂಕಟದ ಆ ದಿನಗಳ ಬಗ್ಗೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
"ನಿಮ್ಮನ್ನು ನೀವು ನಂಬುವುದಾದರೇ ಮಾತ್ರ ಮನೆ ಬಿಟ್ಟು ಹೊರಬನ್ನಿ..ಯಾರನ್ನೋ ಅವಲಂಬಿಸಿ ಹೊರಬಂದರೆ, ನನ್ನ ಥರ ಕಣ್ಣೀರು ಹಾಕಬೇಕಾಗುತ್ತದೆ. ಸಾಣೆಹಳ್ಳಿ ಮಠ ಬಿಟ್ಟು ಬಂದು ನಾನು ತಪ್ಪು ಮಾಡಿದ್ದೆ. ಕೆಲಸ ಅರಸಿ ನೀನಾಸಂಗೆ ಹೋದೆ. ಮೊದಲೇ ಮನೆ ಇರಲಿಲ್ಲ.. ತಿರುಗಾಟವೇ ನನ್ನ ಜೀವನವಾಗಿತ್ತು.
ತಿರುಗಾಟದ ಸಮಸ್ಯೆಯಲ್ಲಿ ಸಾಕಷ್ಟು ಸಮಸ್ಯೆಯನ್ನು ಎದುರಿಇದ್ದೇನ. ಕೆಲವು ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲು ಪ್ರಯತ್ನಿಸಿದರು. ಹಿಂದೆ ಮುಂದೆ ಯಾರು ಇಲ್ಲ ಎಂದು ತಿಳಿದಾಕ್ಷಣ ಅವರ ವರ್ತನೆ ನಿಜಕ್ಕೂ ಅಹಿತಕರವಾಗಿರುತ್ತಿತ್ತು. ಇದೀಗ ನನ್ನ ಜೀವನದಲ್ಲಿ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡವರ ಹೆಸರು ಹೇಳಿದರೆ ಅವರ ಕುಟುಂಬವೇ ಬೀದಿಗೆ ಬರುತ್ತೆ.
ಇನ್ನು ನನ್ನ ಜತೆಗಿದ್ದ ಸ್ನೇಹಿತರೇ ನಾಟಕದ ವೇದಿಕೆ ಮೇಲೆ ನನಗೆ ಕಿರುಕುಳ ಕೊಟ್ಟಿದ್ದಾರೆ. ಹೇಳಿಕೊಳ್ಳೊಕೆ ಯಾರು ಇಲ್ಲ..ಮುಖವಾಡವನ್ನು ಧರಿಸಿ ಬದುಕುತ್ತಿದ್ದ ಅವರು ತಪ್ಪು ಮಾಡಿದ್ದಾರೆಂದು ಹೇಳಿದರೂ ಯಾರು ನಂಬುತ್ತಿರಲಿಲ್ಲ. ಸ್ನಾನ ಮಾಡೋವಾಗ ಬಾತ್ ರೂಮ್‌ಗೆ ಬರ್ತಿದ್ರು..ಮಲ್ಕೋಂಡ್ರೆ ಅಲ್ಲೂ ಬರ್ತಿದ್ರು..ಎಲ್ಲೆಲ್ಲೋ ಕೈ ಹಾಕುತ್ತಿದ್ದರು, ಮುಟ್ಟಬಾರದ ಜಾಗವನ್ನೆಲ್ಲ ಮುಟ್ಟುತ್ತಿದ್ದರು, ಅವರೆಲ್ಲ ನನ್ನ ಜತೆಗಿದ್ದವರೇ.
ರಂಗಭೂಮಿಯಲ್ಲಿ ಆಗಿನ ಸ್ಥಿತಿ ಹಾಗಿತ್ತು. ಆದರೆ ಈಗ ಹೇಗಿದೆಯೋ ನನಗೆ ಗೊತ್ತಿಲ್ಲ..ಆದರೆ ನಾನು ಮಾತ್ರ ನನ್ನ ಸಂಸ್ಥೆಯಲ್ಲಿರುವ ಎಲ್ಲರನ್ನು ನನ್ನ ಮಕ್ಕಳೆಂದೇ ನೋಡಿಕೊಳ್ಳುತ್ತೇನೆ" ಎಂದು ಸಿತಾರಾ ತಮ್ಮ ಜೀವನದ ಕರಾಳ ದಿನಗಳನ್ನು ಮೆಲುಕು ಹಾಕಿದ್ದಾರೆ.