ಪಾರ್ವತಮ್ಮ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತ ನಟಿಯರು ಇವರೇ
ಶಿಲ್ಪಾ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ನಟಿ. ಕನ್ನಡ ಚಿತ್ರರಂಗದಲ್ಲಿ ನೆಲೆ ಸಿಕ್ಕಿದ್ದು ಪಾರ್ವತಮ್ಮ ನಿರ್ಮಾಣದ ಜನುಮದ ಜೋಡಿ ಚಿತ್ರದ ಮೂಲಕ ಶಿಲ್ಪಾ ಹಿಟ್ ಆದರು.
ರಮ್ಯಾ ಅವರನ್ನು ಪುನೀತ್ ಅವರ ಎರಡನೇ ಚಿತ್ರ ಅಭಿಗೆ ಪಾರ್ವತಮ್ಮ ಆಯ್ಕೆ ಮಾಡಿದರು. ದಿವ್ಯಾ ಸ್ಪಂದನಾ ಎಂಬ ಹುಡುಗಿ ರಮ್ಯಾ ಎಂದು ಜನಪ್ರಿಯರಾದರು. ಪಾರ್ವತಮ್ಮ ರಾಜ್‌ಕುಮಾರ್ ಇಟ್ಟ ಹೆಸರು ರಮ್ಯಾ. ಕನ್ನಡಕ್ಕೆ ಪದಾರ್ಪಣೆ ಮಾಡಿದ ಒಂದೇ ವರ್ಷದಲ್ಲಿ ರಮ್ಯಾ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
ಆಶಾ ರಾಣಿ ಕನ್ನಡ, ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಆಶಾ ರಾಣಿ 1986 ರ ಕನ್ನಡ ಭಾಷೆಯ ಚಲನಚಿತ್ರದಲ್ಲಿ ತನ್ನ ಮೊದಲ ನಟನೆಯನ್ನು ಮಾಡಿದರು. ಇವರು ನಟ ಅರ್ಜುನ್ ಸರ್ಜಾ ಅವರ ಪತ್ನಿ, ಈಗ ನಿರ್ಮಾಪಕಿಯಾಗಿದ್ದಾರೆ.
ಸುಧಾರಾಣಿ ಕನ್ನಡದಲ್ಲಿ ಅವರು ಬಹುತೇಕ ಟಾಪ್ ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. ಅವರು ಎರಡು ರಾಜ್ಯ ಪ್ರಶಸ್ತಿಗಳು ಮತ್ತು ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆನಂದ್ ಸಿನಿಮಾದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು.
ಹೃದಯ ಹೃದಯ ಸಿನಿಮಾದ ಮೂಲಕ ಅನುಪ್ರಭಾಕರ್ ಸಿನಿ ಇಂಡಸ್ಟ್ರಿ ಪ್ರವೇಶಿಸಿದರು.
ಪ್ರೇಮಾ ಕನ್ನಡ ಚಿತ್ರರಂಗದ ನಟಿ. ಪ್ರೇಮಾ ಅವರು ಶಿವಣ್ಣನ ಸವ್ಯಸಾಚಿ ಸಿನಿಮಾದ ಮೂಲಕ ಸಿನಿರಂಗ ಪ್ರವೇಶವನ್ನು ಮಾಡಿದರು, ಅದು ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯಿತು.
ಪವರ್ ಸ್ಟಾರ್ ಪುನೀತ್ ಅವರ ಚೊಚ್ಚಲ ಚಿತ್ರ ಅಪ್ಪುಗೆ ರಕ್ಷಿತಾ ಅವರನ್ನು ನಾಯಕಿಯಾಗಿ ಪಾರ್ವತಮ್ಮ ಆಯ್ಕೆ ಮಾಡಿದರು. ಚೊಚ್ಚಲ ಚಿತ್ರದಲ್ಲಿನ ಅಭಿನಯಕ್ಕಾಗಿ ರಕ್ಷಿತಾ ಮೆಚ್ಚುಗೆ ಗಳಿಸಿದರು. ಆಕೆಯ ಅಭಿನಯದಿಂದ ಪ್ರಭಾವಿತರಾದ ನಿರ್ದೇಶಕ ಪೂರಿ ಜಗನ್ ಅವರು ಅಪ್ಪುವಿನ ತೆಲುಗು ರಿಮೇಕ್‌ನಲ್ಲಿ ಅವರನ್ನು ಆಯ್ಕೆ ಮಾಡಿದರು.
ನಂಜುಂಡಿ ಕಲ್ಯಾಣದ ಮೂಲಕ ಪಾರ್ವತಮ್ಮ ಮಾಲಾಶ್ರೀ ಯನ್ನು ಸ್ಯಾಂಡಲ್‌ವುಡ್‌ಗೆ ಲಾಂಚ್ ಮಾಡಿದರು, ಇದು ಇನ್ನೂ ಕನ್ನಡ ಚಲನಚಿತ್ರೋದ್ಯಮ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರ ವೃತ್ತಿಜೀವನದ ಅತಿದೊಡ್ಡ ಹಿಟ್‌ಗಳಲ್ಲಿ ಒಂದಾಗಿದೆ. ಮಾಲಾಶ್ರೀ ನಂತರ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಪಡೆದರು.