ನಟಿ ಪಾರ್ವತಿ ಮೆನನ್ ಮದುವೆ ಫೋಟೋಸ್‌ ವೈರಲ್.. ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರೇ ಮಿಲನಾ ಚಿತ್ರದ ನಟಿ!?

Mon, 03 Jun 2024-3:08 pm,

ಪುನೀತ್‌ ರಾಜ್‌ಕುಮಾರ್‌ ಜೊತೆ ಮಿಲನಾ ಸಿನಿಮಾದಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ಪಾರ್ವತಿ ತಿರುವೋತ್ತು ಅಲಿಯಾಸ್ ಪಾರ್ವತಿ ಮೆನನ್ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಮಳೆ ಬರಲಿ ಮಂಜೂ ಇರಲಿ, ಪೃಥ್ವಿ ಮತ್ತು 'ಅಂದರ್ ಬಾಹರ್‌ ಚಿತ್ರಗಳಲ್ಲಿ ನಟಿಸಿದರು. ಕನ್ನಡಿಗರ ಹೃದಯವನ್ನೂ ಗೆದ್ದರು.

ಮಾಲಿವುಡ್‌ ಚೆಲುವೆ ತಮ್ಮ ಸೌಂದರ್ಯ ಮತ್ತು ಅಭಿನಯದಿಂದ ಜನರ ಮನಗೆದ್ದಿದ್ದಾರೆ. ಪಾರ್ವತಿ ಮೆನನ್ ಸದ್ದಿಲ್ಲದೇ ಮದುವೆಯಾದರಾ ಎಂಬ ಪ್ರಶ್ನೆ ಕೆಲವೊಂದಷ್ಟು ಜನರನ್ನು ಕಾಡುತ್ತಿದೆ.

ಪಾರ್ವತಿ ಮೆನನ್ ಅವರಿಗೆ ಈಗ 36 ವರ್ಷ ವಯಸ್ಸು. ಆದರೆ ಇನ್ನೂ ಮದುವೆಯಾಗಿಲ್ಲ. ಆದರೆ ಕೆಲವು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. 

ಈ ನಡುವೆ ಪಾರ್ವತಿ ಮೆನನ್ ಗುಟ್ಟಾಗಿ ಮದುವೆಯಾಗಿದ್ದಾರಾ ಎಂಬ ಗುಲ್ಲು ಹಬ್ಬಿದೆ.   

ಪಾರ್ವತಿ ಮೆನನ್ ಮದುವೆಯ ಫೋಟೋಗಳು ಖಾಸಗಿ ಬದುಕಿನದ್ದಲ್ಲ ಬದಲಿಗೆ ಸಿನಿಮಾಗೆ ಸಂಬಂಧಿಸಿದ್ದಾಗಿವೆ ಎನ್ನಲಾಗಿದೆ.

ಉಲ್ಲೋಜುಕ್ಕು ಎಂಬ ಚಿತ್ರವೊಂದರಲ್ಲಿ ಪಾರ್ವತಿ ಮೆನನ್ ನಟಿಸಿದ್ದಾರೆ. ಪ್ರಶಾಂತ್ ಮುರಳಿ ಈ ಸಿನಿಮಾದಲ್ಲಿ ನಾಯಕ ನಟನಾಗಿದ್ದಾರೆ. 

ಕ್ರಿಸ್ಟೋ ಟಾಮಿ ನಿರ್ದೇಶನದ ಉಲ್ಲೋಜುಕ್ಕು ಚಿತ್ರದ 45 ಸೆಕೆಂಡ್‌ ಪ್ರೋಮೋ ರಿಲೀಸ್‌ ಆಗಿದೆ. 

ಈ ಪ್ರೋಮೋದಲ್ಲಿ ಪಾರ್ವತಿ ಮೆನನ್ ಮತ್ತು ಪ್ರಶಾಂತ್ ಮುರಳಿ ನವ ದಂಪತಿಗಳ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link