ಸಾಕ್ಷಾತ್ ಮಾತೆ ಪಾರ್ವತಿ ಜನಿಸಿದ ರಾಶಿಯಿದು… 2024ರಲ್ಲಿ ಈ ಜನರು ಮುಟ್ಟಿದ್ದರೆ ಮಣ್ಣು ಕೂಡ ಬಂಗಾರವಾಗುತ್ತೆ!
ಶಿವನ ಮನದನ್ನೆ ಮಾತೆ ಪಾರ್ವತಿಯನ್ನು ಪೂಜಿಸುವುದರಿಂದ ಆಕೆಯ ವಿಶೇಷ ಅನುಗ್ರಹವನ್ನು ಪಡೆಯಬಹುದು. ಅಂದಹಾಗೆ ಮಾತೆ ಪಾರ್ವತಿ ಜನಿಸಿರುವುದು ಕನ್ಯಾರಾಶಿಯಲ್ಲಿ. ಈ ರಾಶಿಯವರನ್ನು ಸೇರಿಸಿ ಒಟ್ಟು 4 ರಾಶಿಯವರೆಂದರೆ ತಾಯಿಗೆ ಅಪಾರ ಪ್ರೀತಿ.
ಅದರಲ್ಲೂ 2024ರಲ್ಲಿ ಈ ರಾಶಿಯನ್ನು ಸ್ವತಃ ತಾಯಿ ಪಾರ್ವತಿಯೇ ಆಳ್ವಿಕೆ ಮಾಡುತ್ತಾಳೆ ಎಂದು ಹೇಳಲಾಗುತ್ತಿದೆ. ಅಂತಹ ಅದೃಷ್ಟಶಾಲಿ ರಾಶಿಗಳು ಯಾವುವು ಎಂದು ತಿಳಿಯೋಣ.
ವೃಷಭ ರಾಶಿ: ಜ್ಯೋತಿಷ್ಯದ ಪ್ರಕಾರ, ವೃಷಭ ರಾಶಿಯು ತಾಯಿ ಪಾರ್ವತಿ ದೇವಿಯ ನೆಚ್ಚಿನ ರಾಶಿಗಳಲ್ಲಿ ಒಂದಾಗಿದೆ. ದೇವಿಯ ಅನುಗ್ರಹದಿಂದ ಈ ಜನರ ಜೀವನದಲ್ಲಿ ಕಷ್ಟಗಳಿಗೆ ನೆಲೆ ಇರುವುದಿಲ್ಲ. ಬಂದರೂ ದೇವಿಯ ಕೃಪೆಯಿಂದ ದೂರವಾಗುತ್ತದೆ.
ಕರ್ಕಾಟಕ ರಾಶಿ: ಈ ರಾಶಿಯವರಿಗೆ ತಾಯಿ ಪಾರ್ವತಿಯ ವಿಶೇಷ ಆಶೀರ್ವಾದವಿರುತ್ತದೆ ಎಂಬುದು ನಂಬಿಕೆ. ಇವರಿಗೆ ಎಂದಿಗೂ ಆರ್ಥಿಕ ಬಿಕ್ಕಟ್ಟನ್ನು ಎದುರಾಗುವುದಿಲ್ಲ. ತಮ್ಮ ಜೀವನದಲ್ಲಿ ಎಂದೆಂದೂ ಒಂದು ಹೆಜ್ಜೆ ಮುಂದೆಯೇ ಇರುತ್ತಾರೆ.
ಸಿಂಹ: ತಾಯಿ ಪಾರ್ವತಿಯ ಕೃಪೆಯಿಂದ ಸಿಂಹ ರಾಶಿಯ ಜನರು ತಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಕಠಿಣ ಪರಿಶ್ರಮದ ಆಧಾರದ ಮೇಲೆ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸಿನ ಶಿಖರವೇರುತ್ತಾರೆ. ಆರ್ಥಿಕ ಸ್ಥಿತಿಯೂ ಗಟ್ಟಿಯಾಗಿರುತ್ತದೆ.
ಕನ್ಯಾ ರಾಶಿ: ಇದು ಸಾಕ್ಷಾತ್ ಪಾರ್ವತಿ ದೇವಿಯೇ ಜನಿಸಿದ ರಾಶಿ ಎಂದು ಹೇಳಲಾಗುತ್ತದೆ. ಇದೇ ಕಾರಣದಿಂದ ಈ ಜನರು ಕಠಿಣ ಪರಿಶ್ರಮದಿಂದ ಹಿಂದೆ ಸರಿಯುವುದಿಲ್ಲ. ಸಂಪತ್ತಿನ ದೇವನಾದ ಕುಬೇರ ಮತ್ತು ಲಕ್ಷ್ಮಿ ದೇವಿಯು ಎಂದೆಂದೂ ಜೊತೆ ಇರುತ್ತಾರೆ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ)