ಮಧುಮೇಹ ನಿಯಂತ್ರಣಕ್ಕೆ ಈ ಪುಟ್ಟ ಹಣ್ಣು ಸಾಕು ! ಯಾವ ಹೊತ್ತಾಲ್ಲಾದರೂ ಸರಿ ದಿನಕ್ಕೊಮ್ಮೆ ಸೇವಿಸಿ !
ಒಂದು ಸಣ್ಣ ತಪ್ಪು ಕೂಡಾ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಅಂಥದ್ದರಲ್ಲಿ ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವೆಂದು ಪರಿಗಣಿಸಲ್ಪಟ್ಟಿದೆ.
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಈ ಅದ್ಭುತ ಹಣ್ಣಿನ ಹೆಸರು ಕೃಷ್ಣ ಫಲ. ಇದನ್ನು ಫ್ಯಾಷನ್ ಫ್ರುಟ್ ಎಂದು ಕೂಡಾ ಕರೆಯುತ್ತಾರೆ.ಈ ಹಣ್ಣು ರುಚಿಯಲ್ಲಿ ಸಿಹಿ ಮತ್ತು ಹುಳಿ ಮಿಶ್ರಿತವಾಗಿದೆ.ಇದು ತಿನ್ನುವುದಕ್ಕೂ ಬಹಳ ರುಚಿಯಾಗಿರುತ್ತದೆ.
ಕೃಷ್ಣ ಫಲದ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆಯಾಗಿರುತ್ತದೆ. ಇದರಿಂದಾಗಿ ಈ ಹಣ್ಣು ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಲು ಬಿಡುವುದಿಲ್ಲ.
ಕೃಷ್ಣ ಫಲದ ಸಿಪ್ಪೆಯಲ್ಲಿ ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳು ಹೇರಳವಾಗಿವೆ. ಹಾಗಾಗಿ ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.