2019ರಲ್ಲಿ ತೆರೆಕಂಡ ದೇಶಭಕ್ತಿ ಆಧಾರಿತ ಚಿತ್ರಗಳು!

Mon, 23 Dec 2019-12:37 pm,

ಜನವರಿ 26 ರಂದು ತೆರೆಕಂಡ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಚಿತ್ರ ಉರಿ ದಾಳಿಯ ನಂತರ ನಡೆದ ಸರ್ಜಿಕಲ್ ಸ್ಟ್ರೈಕ್‌ನ ಕಥೆಯನ್ನು ಹೇಳುತ್ತದೆ. ಈ ಚಿತ್ರವು ಪ್ರೇಕ್ಷಕರಲ್ಲಿ ದೇಶಭಕ್ತಿಯ ಭಾವನೆಗಳನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಯಿತು ಮತ್ತು ಅದು ಭಾರತದಲ್ಲಿ 244 ಕೋಟಿ ಗಳಿಸಿತು. ವಿಕಿ ಕೌಶಲ್ ಕೂಡ ಈ ಚಿತ್ರದೊಂದಿಗೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಕಂಗನಾ ರನೌತ್ ಅವರ 'ಮಣಿಕರ್ಣಿಕಾ - ದಿ ಕ್ವೀನ್ ಆಫ್ ಝಾನ್ಸಿ' ಕೂಡ ಈ ವರ್ಷ ಬಹಳ ಚರ್ಚೆಗೆ ಗ್ರಾಸವಾದ ಚಿತ್ರಗಳಲ್ಲಿ ಒಂದು. ಈ ಚಿತ್ರ ಜನವರಿ 26 ರಂದು ಬಿಡುಗಡೆಯಾಯಿತು. ಕಂಗನಾ ರನೌತ್ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಈ ಚಿತ್ರವು ವಿಭಿನ್ನ ಕಾರಣಗಳಿಗಾಗಿ ವಿವಾದಗಳಲ್ಲಿ ಸಿಲುಕಿಕೊಂಡಿದ್ದರೂ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಮತ್ತು ಅವರು ಮೊದಲ ಬಾರಿಗೆ ಝಾನ್ಸಿಯ ಪ್ರಗತಿ ಸಾಧಿಸಿದ ರೀತಿಯನ್ನು ನೆನಪಿಸಿಕೊಂಡಿರುವ ರೀತಿ ಈ ಚಿತ್ರದಲ್ಲಿ ಬಹಳ ಮುಖ್ಯವಾಗಿದೆ ಎಂದು ಹೇಳಬಹುದು. ಗಲ್ಲಾಪೆಟ್ಟಿಗೆಯಲ್ಲಿ ಚಿತ್ರವು 90 ಕೋಟಿ ರೂ. ಗಳಿಸಿದೆ.  

ಅಕ್ಷಯ್ ಕುಮಾರ್ ಅವರ ಚಿತ್ರ 'ಕೇಸರಿ'  ಬಿಡುಗಡೆಯಾಯಿತು. ಈ ಚಿತ್ರವು ಸರಗರ್ಹಿ ಯುದ್ಧವನ್ನು ಆಧರಿಸಿದೆ. ಇದು ಬ್ರಿಟಿಷ್ ಭಾರತೀಯ ಸೇನೆ ಮತ್ತು ಅಫಘಾನ್ ಹೋರಾಟಗಾರರ ನಡುವೆ ನಡೆಯಿತು. ಈ ಚಿತ್ರವು ಸಿಖ್ ರೆಜಿಮೆಂಟ್‌ನ 21 ಸೈನಿಕರು ಬ್ರಿಟಿಷ್ ಸೈನ್ಯದ ಪರವಾಗಿ 1000 ದಾಳಿಕೋರರನ್ನು ಹೇಗೆ ಎದುರಿಸಿದರು ಎಂಬುದನ್ನು ಹೇಳುತ್ತದೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ಗಳಿಸಿತು.

ಸಲ್ಮಾನ್ ಖಾನ್ ಅವರ 'ಭಾರತ್' ಸ್ವಾತಂತ್ರ್ಯ ಮತ್ತು ನಂತರದ ಭಾರತದ ಕಥೆಯನ್ನು ಬಿಂಬಿಸುತ್ತದೆ. ಈ ಚಿತ್ರದಲ್ಲಿ, ಸಲ್ಮಾನ್ ಅವರು ಕತ್ರಿನಾ ಕೈಫ್ ಅವರೊಂದಿಗೆ ವಿಭಿನ್ನ ರೂಪಗಳಲ್ಲಿ ಕಾಣಿಸಿಕೊಂಡಿದ್ದಾರೆ, ಇದರಲ್ಲಿ ಕಂಡಿರುವ ಸಲ್ಮಾನ್ ಅವರನ್ನು ಹಿಂದೆಂದೂ ಹೀಗೆ ನೋಡಿಲ್ಲ. ಈ ಚಿತ್ರ ಸಹ ಬಾಕ್ಸ್ ಆಫೀಸ್ ನಲ್ಲಿ ಚಿತ್ರ 100 ಕೋಟಿ ಗಳಿಸಿದೆ.

ಆಯುಷ್ಮಾನ್ ಖುರಾನಾ ಅವರ 'ಆರ್ಟಿಕಲ್ 15' ಚಿತ್ರವು ಸಮಾನತೆಯ ಹಕ್ಕಿನ ಬಗ್ಗೆ ಮಾತನಾಡುತ್ತದೆ ಮತ್ತು ನಿರ್ದೇಶಕ ಅನುಭವ್ ಸಿನ್ಹಾ ಅವರು ಚಿತ್ರದಲ್ಲಿ ದಲಿತ ದೌರ್ಜನ್ಯದ ಬಗ್ಗೆ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ತಯಾರಿಸಿದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ 60 ಕೋಟಿ ರೂ. ಸಂಗ್ರಹಿಸಿ ಸೂಪರ್ ಹಿಟ್ ಆಯಿತು.

ಅಕ್ಷಯ್ ಕುಮಾರ್ ಅವರ 'ಮಿಷನ್ ಮಂಗಲ್' ಚಿತ್ರ ದೇಶದ 'ಮಾಮ್ ಮಾರ್ಸ್ ಆರ್ಬಿಟರ್ ಮಿಷನ್' ಕಥೆ ಆಧಾರಿತ ಚಿತ್ರ. ಅಕ್ಷಯ್ ಅವರು ಚಿತ್ರದಲ್ಲಿ ವಿದ್ಯಾ ಬಾಲನ್ ಮತ್ತು ತಾಪ್ಸಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿಗೂ ಹೆಚ್ಚು ಗಳಿಸಿದೆ.

ಜಾನ್ ಅಬ್ರಹಾಂ ಅವರ 'ಬಾಟ್ಲಾ ಹೌಸ್' ಚಿತ್ರ 2008 ರ ಆಪರೇಷನ್ ಬಟ್ಲಾ ಹೌಸ್ ಅನ್ನು ಆಧರಿಸಿದೆ. ಈ ಎನ್‌ಕೌಂಟರ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೊಲೀಸ್ ಅಧಿಕಾರಿ ಸಂಜೀವ್ ಕುಮಾರ್ ಯಾದವ್ ಅವರನ್ನು ಆಧರಿಸಿ ಸಂಜಯ್ ಕುಮಾರ್ ಅಬ್ರಹಾಂ ಪಾತ್ರ ನಿರ್ವಹಿಸಿದ್ದಾರೆ. ಇದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಭದ್ರತಾ ಸಿಬ್ಬಂದಿಗಳು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುವ ದೃಷ್ಟಿಕೋನವನ್ನು ಸಹ ಅದ್ಭುತವಾಗಿ ಪ್ರಸ್ತುತಪಡಿಸಿದೆ. ಈ ಚಿತ್ರವು ಬಾಕ್ಸ್ ಆಫೀಸ್ ಅಲ್ಲಿ 80 ಕೋಟಿ ರೂ. ಸಂಗ್ರಹಿಸಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link