ಕಿರಾಣಿ ಅಂಗಡಿ ಮಾಲೀಕನ ಪುತ್ರಿ ಪವಿತ್ರ ಗೌಡ ಇವತ್ತು ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?

Mon, 17 Jun 2024-8:07 pm,
Pavitra Gowda Net Worth

ಇದೀಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟಿ ಪವಿತ್ರಾ ಗೌಡ ಸೇರಿದಂತೆ ಸುಮಾರು 18 ಮಂದಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇವರ ವಿಚಾರಣೆ ಮುಂದುವರೆದಿದೆ.

Pavitra Gowda Net Worth

ನಾವಿಂದು ಈ ವರದಿಯಲ್ಲಿ ಪವಿತ್ರಾ ಗೌಡ ಆಸ್ತಿ ಪಾಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇವೆ.

Pavitra Gowda Net Worth

ನಟಿ ಪವಿತ್ರಾ ಗೌಡ ಕನ್ನಡ ಸಿನಿರಂಗದಲ್ಲಿ ಹೇಳಿಕೊಳ್ಳುವಂತಹ ಸಾಧನೆ ಏನು ಮಾಡಿಲ್ಲ. ದರ್ಶನ್ ಜೊತೆಗಿನ ಒಡನಾಟದಿಂದಲೇ ಸುದ್ದಿಯಾಗಿರುವ ಈಕೆ ಇದೀಗ ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ಹೊಂದಿದ್ಆರೆ ಎಂದು ಹೇಳಲಾಗುತ್ತಿದೆ.

"ಚತ್ರಿಗಳು ಸಾರ್ ಚತ್ರಿಗಳು," "ಅಗಮ್ಯ," ಮತ್ತು "ಪ್ರೀತಿ ಕಿತಾಬು" ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು 2016ರಲ್ಲಿ ‘54321’ ಚಿತ್ರದ ಮೂಲಕ ಕಾಲಿವುಡ್‌’ಗೆ ಲಗ್ಗೆ ಇಟ್ಟರು.  

ನಟನಾ ವೃತ್ತಿಜೀವನದ ಜೊತೆಗೆ ಪವಿತ್ರಾ ಮಾಡೆಲ್ ಕೂಡ ಹೌದು. 'ರೆಡ್ ಕಾರ್ಪೆಟ್ ಸ್ಟುಡಿಯೋ 777' ಹೆಸರಿನ ಶಾಪ್ ಕೂಡ ಈಕೆ ಹೆಸರಲ್ಲಿದೆ.

ಇನ್ನು ಈ ಫ್ಯಾಷನ್ ಬುಟಿಕ್ ತೆರೆಯಲು ದರ್ಶನ್ ಅವರೇ ಹಣ ಸಹಾಯ ಮಾಡಿದ್ದಾರೆ ಎಂದು ಸಹ ಹೇಳಲಾಗುತ್ತದೆ. ಇನ್ನೊಂದೆಡೆ ಈ ಬುಟಿಕ್’ಗೆ ಸಿನಿತಾರೆಯರು ಭೇಟಿ ಕೊಡುವುದಲ್ಲದೆ, ಮಾಡೆಲ್’ಗಳಾಗಿಯೂ ಸಾಥ್ ನೀಡುತ್ತಿದ್ದಾರೆ.

''ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋದ ಒಡತಿಯಷ್ಟೇ ಅಲ್ಲ, ಮೂರು ಫ್ಲೋರ್‌’ನ ಡ್ಯೂಪ್ಲೆಕ್ಸ್ ಮನೆ ಜೊತೆ ಪವಿತ್ರಾ ಬಳಿ ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್ ಕಾರುಗಳಿವೆ. ಕಿರಾಣಿ ಅಂಗಡಿ ಮಾಲೀಕನ ಪುತ್ರಿ ಇಷ್ಟೆಲ್ಲಾ ಹಣ ಗಳಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುವುದು ಸಹಜ.

ಇನ್ನೂ ಈ ಡಿಸೈನರ್ ಸ್ಟುಡಿಯೋದಲ್ಲಿ ಡಿಸೈನ್ ಮಾಡಿರುವ ಕಾಸ್ಟ್ಯೂಮ್ಸ್ ಧರಿಸಿ ಮೇಘಾ ಶೆಟ್ಟಿ, ಸೋನಲ್ ಮಂಥೆರೋ ಸೇರಿದಂತೆ ಕೆಲ ನಟಿಯರು ಫೋಟೊಶೂಟ್‌ ಕೂಡ ಮಾಡಿಸಿದ್ದರು. ಈ ಮೂಲಕ ಪವಿತ್ರಾ ಗೌಡಳ ಸ್ಟುಡಿಯೋದ ಪ್ರಚಾರವನ್ನೂ ಮಾಡಿದ್ದರು.

ಇನ್ನು ಪವಿತ್ರ ಗೌಡ ಈ ಎಲ್ಲಾ ವ್ಯಾಪಾರ ವಹಿವಾಟಿನ ಹಿಂದೆ ನಟ ದರ್ಶನ್ ಬೆಂಬಲದ ಜೊತೆ ಹಣ ಸಹಾಯವೂ ಇದೆ ಎಂದು ಅನೇಕರ ಮಾತು. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಸ್ಪಷ್ಟತೆಗೆ ಸಿಗದ ವಿಷಯ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link