ಪವನ್ ಕಲ್ಯಾಣ್ ಚಿಕನ್ ತಿನ್ನುತ್ತಾರಾ? ವೈರಲ್ ಆಗುತ್ತಿದೆ ಈ ಫೋಟೋ.. ನಟನ ಅವತಾರ ಕಂಡು ಶಾಕ್ ಆದ ಫ್ಯಾನ್ಸ್ !!
ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ತಮ್ಮ ನಟನೆಯಿಂದ ಮಿಂಚಿದ್ದ ಪವನ್ ಕಲ್ಯಾಣ್ ಈಗ ರಾಜಕೀಯಕ್ಕೆ ಧುಮುಕಿದ್ದಾರೆ. ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದ ವಿವಾದದ ಬಳಿಕ ಪವನ್ ಕಲ್ಯಾಣ್ ಫುಲ್ ಟ್ರೆಂಡಿಂಗ್ ಅಲ್ಲಿದ್ದಾರೆ.
ಪವನ್ ಕಲ್ಯಾಣ್ ಅವರ ಆಹಾರದ ಬಗ್ಗೆ ಸುದ್ದಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪವನ್ ಕಲ್ಯಾಣ್ ಅವರ ನೆಚ್ಚಿನ ಆಹಾರ ಯಾವುದು? ಪವನ್ ಕಲ್ಯಾಣ್ ಚಿಕನ್ ತಿನ್ನುತ್ತಾರೆಯೇ? ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪವನ್ ಕಲ್ಯಾಣ್ ಅವರ ತಾಯಿ ಅಂಜನಾ ದೇವಿಗೆ ಚಿಕನ್ ಪಲಾವ್ ಅಂದರೆ ತುಂಬಾ ಇಷ್ಟ. ಪವನ್ ಕಲ್ಯಾಣ್ ಸಂದರ್ಶನವೊಂದರಲ್ಲಿ ಇದನ್ನೆಲ್ಲಾ ಹೇಳಿಕೊಂಡಿದ್ದೂ ಇದೆ. ಅಷ್ಟೇ ಅಲ್ಲ ಪವನ್ ಕಲ್ಯಾಣ್ ಗೆ ಸಿಗಡಿ ಅಥವಾ ಪ್ರಾನ್ಸ್ ಎಂದರೆ ತುಂಬಾ ಇಷ್ಟ ಎಂದು ಹೇಳಲಾಗಿದೆ.
ಪವನ್ ಕಲ್ಯಾಣ್ ಅವರಿಗೆ ಎಲ್ಲಾ ರೀತಿಯ ನಾನ್ ವೆಜ್ ಫುಡ್ ಇಷ್ಟ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಪವನ್ ಕಲ್ಯಾಣ್ ಅವರ ನೆಚ್ಚಿನ ಆಹಾರ ನಾಟಿಕೋಳಿ ಮತ್ತು ಸೀಫುಡ್. ಅದರಲ್ಲೂ ಮೀನು ಸಾರು ಎಂದರೆ ಪವನ್ ಕಲ್ಯಾಣ್ ಅವರಿಗೆ ಪಂಚಪ್ರಾಣ ಎನ್ನಲಾಗಿದೆ.
ಕೆಲವು ವರದಿಗಳ ಪ್ರಕಾರ, ನಟ ಪವನ್ ಕಲ್ಯಾಣ್ ಇತ್ತೀಚೆಗೆ ಕಟ್ಟುನಿಟ್ಟಾದ ಸಸ್ಯಾಹಾರಿ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸಿನಿಮಾವೊಂದರ ಪಾತ್ರಕ್ಕಾಗಿ ಈ ಬದಲಾವಣೆ ಮಾಡಿಕೊಂಡಿದ್ದ ಪವನ್ ಕಲ್ಯಾಣ್ ಇದೀಗ ಮಾಂಸಾಹಾರದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.