ಚುನಾವಣಾ ಪ್ರಚಾರಕ್ಕೆ ಪವರ್ ಸ್ಟಾರ್ ರೆಡಿ : ರಾಜಕೀಯ ರಣರಂಗಕ್ಕೆ ಪವನ್ ಕಲ್ಯಾಣ್ ʼವಾರಾಹಿʼ ಎಂಟ್ರಿ
ಹೌದು.. ಆಂಧ್ರಪ್ರದೇಶ ಚುನಾವಣಾ ಕಣ ರಣರಂಗವಾಗಿ ಹೊರಹೊಮ್ಮುತ್ತಿದೆ. ಅಧಿಕಾರ ಗದ್ದುಗೆ ಏರಲು ಪವನ್ ಕಲ್ಯಾಣ್ ಸಿದ್ಧರಾಗಿದ್ದು, ಅಬ್ಬರದ ಪ್ರಚಾರ ಕಾರ್ಯಕೈಗೊಳ್ಳಲು ಸಿದ್ದರಾಗಿದ್ದಾರೆ.
ಈ ನಿಟ್ಟಿನಲ್ಲಿ ಅವರು ಇಂದು ಹೈದರಾಬಾದ್‌ನಲ್ಲಿ ಸಿದ್ಧಪಡಿಸಿದ ನೂತನ ವಾಹನವನ್ನು ಪರಿಶೀಲಿಸಿ ಟ್ರಯಲ್ ನೋಡಿದರು. ಅಲ್ಲದೆ, ವಾಹನದ ವಿಡಿಯೋ ಮತ್ತು ಫೋಟೋಗಳನ್ನು ಪವನ್ ಕಲ್ಯಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ವಾಹನಕ್ಕೆ ʼವಾರಾಹಿʼ ಎಂದು ಹೆಸರಿಡಲಾಗಿದೆ, ಚುನಾವಣಾ ಸಮರಕ್ಕೆ ವಾರಾಹಿ ಸಿದ್ಧವಾಗಿದೆ ಎಂದು ಸ್ವತಃ ಪವನ್ ಕಲ್ಯಾಣ್ ಘೋಷಿಸಿದ್ದಾರೆ.
ದಸರಾ ಹಬ್ಬದ ನಂತರ ಪವನ್ ಕಲ್ಯಾಣ್ ಅವರು ರಾಜ್ಯಾದ್ಯಂತ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ 2023ಕ್ಕೆ ಮುಂದೂಡಲಾದೆ ಎಂದು ಜನಸೇನಾ ಪಕ್ಷದ ಮೂಲಗಳು ತಿಳಿಸಿವೆ.
ವಿಶೇಷ ವಾಹನಕ್ಕೆ ಇಟ್ಟ ಹೆಸರು ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ವಾರಾಹಿ ಅರ್ಥ ಹುಡುಕಾಡುತ್ತಿದ್ದಾರೆ. ವಾರಾಹಿ ಅಂದ್ರೆ ದುರ್ಗಾ ಮಾತೆಯ ಏಳನೇ ಅವತಾರವಾಗಿದೆ.
ವಾರಾಹಿ ವಿಶೇಷ ಭದ್ರತಾ ವ್ಯವಸ್ಥೆಯನ್ನು ಒಳಗೊಂಡಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. ಇತ್ತೀಚಿಗೆ ವಿಶಾಖಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೀದಿ ದೀಪಗಳನ್ನು ಸ್ವಿಚ್ ಆಫ್ ಆದ ಘಟನೆಯ ಬಳಿಕ ʼವಾರಾಹಿʼ ವಾಹನದಲ್ಲಿ ವಿಶೇಷ ಬೆಳಕಿನ ವ್ಯವಸ್ಥೆಯನ್ನೂ ಸಹ ಅಳವಡಿಸಲಾಗಿದೆ.
ಆಧುನಿಕ ಸೌಂಡ್ ಸಿಸ್ಟಮ್, ಸಿಸಿಟಿವಿ ಕ್ಯಾಮೆರಾ, ವಾಹನದೊಳಗೆ ಪವನ್ ಕಲ್ಯಾಣ್ ಮತ್ತು ಇಬ್ಬರು ಕುಳಿತುಕೊಂಡು ಚರ್ಚಿಸಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಹೈಡ್ರಾಲಿಕ್ ಮೆಟ್ಟಿಲುಗಳಿವೆ.
2008 ರಿಂದ ಇಲ್ಲಿಯವರೆಗೆ ಪವನ್ ಪ್ರವಾಸದ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.