UPI Payment ಮಾಡುವಾಗ ಈ ವಿಷಯಗಳ ಬಗ್ಗೆ ವಿಶೇಷ ಗಮನಹರಿಸಿ, ಇಲ್ಲದಿದ್ದರೆ ನಷ್ಟ

Wed, 14 Jun 2023-11:18 am,

ಆನ್‌ಲೈನ್ ಪೇಮೆಂಟ್:  ಪ್ರಸ್ತುತ, ಎಲ್ಲೆಡೆ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಆನ್‌ಲೈನ್ ಪಾವತಿಗೆ ಅತ್ಯಂತ ಜನಪ್ರಿಯ ವಿಧಾನಗಳಲ್ಲಿ ಒಂದಾಗಿದೆ. ಬಹಳ ಸುಲಭ ವಿಧಾನದಿಂದ ಬಳಸ ಬಹುದಾದ್ದರಿಂದ ಹೆಚ್ಚಿನ ಜನ ಇದನ್ನು ಬಳಸುತ್ತಾರೆ. ಆದರೆ, ಯುಪಿಐ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಅದರ ವಂಚನೆಗಳ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ, ಯುಪಿಐ ಬಳಕೆದಾರರನ್ನು ಬಳಸಿಕೊಳ್ಳುವ ವಂಚನೆಗಳ ಹಲವಾರು ಘಟನೆಗಳು ಮುಂಚೂಣಿಗೆ ಬಂದಿವೆ.

ಯಾವುದೇ ಬ್ಯಾಂಕ್ ಆಗಲಿ ಗ್ರಾಹಕ ಆರೈಕೆ ಕರೆಗಳು ಅಥವಾ ಸಂದೇಶಗಳೊಂದಿಗೆ ನಿಮ್ಮ UPI ಮತ್ತು PIN ಅನ್ನು ಎಂದಿಗೂ ಕೇಳುವುದಿಲ್ಲ. ಹಾಗಾಗಿ, ಯುಪಿಐ ಪಿನ್ ಅನ್ನು ಎಂದಿಗೂ ಕೂಡ ಯಾರ ಜೊತೆಗೂ ಹಂಚಿಕೊಳ್ಳಬೇಡಿ. ಒಂದೊಮ್ಮೆ ನಿಮ್ಮ ಯುಪಿಐ ಅಥವಾ ಕಾರ್ಡ್ ಪಿನ್ ಸಂಖ್ಯೆಯನ್ನು ಕೇಳಿದರೆ ಈ ಬಗ್ಗೆ ಎಚ್ಚರದಿಂದಿರಿ. ಅವರು ವಂಚಕರು ಎಂಬುದನ್ನೂ ಅರ್ಥ ಮಾಡಿಕೊಳ್ಳಿ. 

ಬ್ಯಾಂಕ್ ಇಲ್ಲವೇ ಅಪ್ಲಿಕೇಶನ್ ಖಾತೆಯಲ್ಲಿ ಕೆಲವು ಪ್ರಮುಖ ಸೆಟ್ಟಿಂಗ್‌ಗಳನ್ನು ಅಪ್‌ಡೇಟ್ ಮಾಡಲು ಅಥವಾ ನಿಮ್ಮ ಕೆವೈಸಿ ಅನ್ನು ಅಪ್ಡೇಟ್ ಮಾಡುವುದು ತುಂಬಾ ಅವಶ್ಯಕ. ಆದರೆ, ಈ ಕೆಲಸಗಳಿಗಾಗಿ ಎಂದಿಗೂ ಕೂಡ ಗ್ರಾಹಕ ಆರೈಕೆ ಪ್ರತಿನಿಧಿಗಳಿಗೆ ನಿಮ್ಮ ಮೊಬೈಲ್/ಕಂಪ್ಯೂಟರ್ ನಿಯಂತ್ರಣಕ್ಕೆ ಪ್ರವೇಶವನ್ನು ಅನುಮತಿಸಬೇಡಿ. ಇದೂ ಕೂಡ ನಿಮ್ಮನ್ನು ವಂಚನೆಗೆ ಬಲಿಯಾಗುವಂತೆ ಮಾಡಬಹುದು.   

ಇತ್ತೀಚಿನ ದಿನಗಳಲ್ಲಿ ಬಹುಮಾನಗಳು, ಕ್ಯಾಶ್‌ಬ್ಯಾಕ್ ನಂತಹ ಹತ್ತು ಹಲವು ಆಫರ್ ಗಳ ಬಗ್ಗೆ ಆಗಾಗ್ಗೆ ಸಂದೇಶಗಳು, ಕರೆಗಳು ಬರುತ್ತಲೇ ಇರುತ್ತವೆ. ಆದರೆ, ಈ ರೀತಿಯ ಆಸೆಗೆ ಬಲಿಯಾದರೆ ನಿಮ್ಮ ಖಾತೆಯೂ ಖಾಲಿಯಾಗಬಹುದು ಎಚ್ಚರ. 

ಇನ್ನೊಂದು ಪ್ರಮುಖವಾದ ವಿಷಯವೆಂದರೆ ಒಂದೇ ಯುಪಿಐ ಪಿನ್ ಅನ್ನು ದೀರ್ಘ ಸಮಯದವರೆಗೆ ಬಳಸಬೇಡಿ. ನೀವು ಆಗಾಗ್ಗೆ ನಿಮ್ಮ ಯುಪಿಐ ಪಿನ್ ಅನ್ನು ಬದಲಾಯಿಸಿ. ಇದು ನಿಮ್ಮ ಖಾತೆಯನ್ನು ಹೆಚ್ಚು ಸುರಕ್ಷಿತವಾಗಿರಿಸಲು ಉತ್ತಮ ಅಭ್ಯಾಸವಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link