ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಪ್ರೇಯಸಿಗೆ ಮಿಸ್ʼಕಾಲ್ ನೀಡಿ ಸಿಕ್ಕಿಬಿದ್ದ ಗೌತಮ್ ಗಂಭೀರ್!? ಸ್ವತಃ ಆ ನಟಿಯೇ ರೀವಿಲ್ ಮಾಡಿದ ಶಾಕಿಂಗ್ ಸಂಗತಿ
ಪಾಯಲ್ ಘೋಷ್ ಬೋಲ್ಡ್ ನಟಿಯರಲ್ಲಿ ಒಬ್ಬರು. ಈಕೆ ಅನೇಕ ಚಲನಚಿತ್ರಗಳು, ವೆಬ್ ಸಿರೀಸ್ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಪಾರ ಸ್ಟಾರ್ ಡಮ್ ಹೊರತಾಗಿ, ಈಕೆ ಅದೆಷ್ಟೋ ವಿವಾದಾತ್ಮಕ ಹೇಳಿಕೆಗಳಿಂದ ಹೆಚ್ಚು ಗಮನ ಸೆಳೆದಿರುವುದು ಗಮನಿಸಬೇಕಾದ ಸಂಗತಿ.
ಐದು ವರ್ಷಗಳ ಕಾಲ ಇರ್ಫಾನ್ ಪಠಾಣ್ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುವುದರಿಂದ ಹಿಡಿದು ಮೊಹಮ್ಮದ್ ಶಮಿಯನ್ನು ಮದುವೆಯಾಗುವ ಮತ್ತು ಅವರ ಎರಡನೇ ಹೆಂಡತಿಯಾಗುವ ಬಯಕೆಯನ್ನು ವ್ಯಕ್ತಪಡಿಸುವವರೆಗೆ ಪಾಯಲ್ ತನ್ನ ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದರು.
ಇದಲ್ಲದೆ, ಮತ್ತೊಂದು ಆಘಾತಕಾರಿ ಹೇಳಿಕೆ ನೀಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದು, ಆ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಪಾಯಲ್ ಘೋಷ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ʼನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಅದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಇರ್ಫಾನ್ ಪಠಾಣ್ ಜೊತೆ ಡೇಟಿಂಗ್ ಮಾಡುತ್ತಿದ್ದ ಸಮಯದಲ್ಲಿ ಗೌತಮ್ ಗಂಭೀರ್ ಅವರಿಗೆ ಮಿಸ್ಡ್ ಕಾಲ್ ನೀಡುತ್ತಿದ್ದರು ಎಂದು ಹೇಳಿದ್ದರು.
ಗೌತಮ್ ಗಂಭೀರ್ ಮೇಲೆ ಪಾಯಲ್ ಘೋಷ್ ಆರೋಪ ಮಾಡಿದ್ದು, 'ಗೌತಮ್ ಗಂಭೀರ್ ನನಗೆ ಪ್ರತಿದಿನ ಮಿಸ್ಡ್ ಕಾಲ್ ನೀಡುತ್ತಿದ್ದರು, ಇರ್ಫಾನ್ ಅವರಿಗೆ ಇದು ಚೆನ್ನಾಗಿ ಗೊತ್ತಿತ್ತು, ಅವರು ನನ್ನ ಎಲ್ಲಾ ಕರೆಗಳನ್ನು ಪರಿಶೀಲಿಸುತ್ತಿದ್ದರು. ಇದನ್ನು ಅವರು ಯೂಸುಫ್ ಭಾಯ್, ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಅವರಿಗೆ ಹೇಳಿದ್ದರು. ನಾನು ಪುಣೆಯಲ್ಲಿ ಇರ್ಫಾನ್ ಅವರನ್ನು ಭೇಟಿಯಾಗಲು ಹೋದಾಗ ನಾನು ಇದನ್ನು ಹೇಳಿದ್ದೆ. ಆ ಸಮಯದಲ್ಲಿ ಬರೋಡಾದಲ್ಲಿ ಪಂದ್ಯವಿತ್ತು" ಎಂದಿದ್ದಾರೆ.
ಮತ್ತೊಂದು ಪೋಸ್ಟ್ʼನಲ್ಲಿ, ಪಾಯಲ್ ಇರ್ಫಾನ್ ಪಠಾಣ್ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. "ಅವನಿಂದ ಬೇರ್ಪಟ್ಟ ನಂತರ ತಾನು ಅನಾರೋಗ್ಯಕ್ಕೆ ಒಳಗಾಗಿದ್ದೇನೆ" ಎಂದು ಬಹಿರಂಗಪಡಿಸಿದ್ದರು.
ಇನ್ನು ಪಾಯಲ್ ಘೋಷ್ ಮತ್ತು ಇರ್ಫಾನ್ ಪಠಾಣ್ ಬ್ರೇಕಪ್ ಮಾಡಿಕೊಂಡಿದ್ದಾರೆ. ಇರ್ಫಾನ್ ಇದೀಗ ಬೇರೊಬ್ಬಳನ್ನು ಮದುವೆಯಾಗಿ ಸುಖೀಜೀವನ ನಡೆಸುತ್ತಿದ್ದು, ಪಾಯಲ್ ಘೋಷ್ ಮಾತ್ರ ಆಗಾಗ್ಗೆ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ.