Peanut Butter ಸೇವನೆಯಿಂದ ಬ್ರೈನ್ ಡ್ಯಾಮೇಜ್ : 220 ಕೋಟಿ ಪರಿಹಾರ ನೀಡಿದ ಕೋರ್ಟ್

Wed, 14 Apr 2021-2:02 pm,

ಅಮೆರಿಕನ್ ಲಾಸ್ ವೇಗಾಸ್ ನ್ಯಾಯಾಲಯವು ನಟಿ ಮತ್ತು ರೂಪದರ್ಶಿ ಶಾಂಟೆಲ್ ಜಿಯಾಕಲೋನ್‌ಗೆ 220 ಕೋಟಿ ರೂ ಪರಿಹಾರ ಪ್ರಕಟಿಸಿದೆ. ಕಳೆದ 8 ವರ್ಷಗಳಿಂದ ಶಾಂಟೆಲ್ ಜಿಯಾಕಲೋನ್ ಪಾರ್ಶ್ವವಾಯುವಿಗೆ ಒಳಗಾಗಿದ್ದು, ಹಾಸಿಗೆಯ ಮೇಲೆ ಜೀವನವನ್ನು ಕಳೆಯುತ್ತಿದ್ದಾರೆ.

ಫಾಕ್ಸ್ ನ್ಯೂಸ್‌ನ ಸುದ್ದಿಯ ಪ್ರಕಾರ, Peanut Butter ಬಿಸ್ಕೆಟ್ ತಿಂದ ನಂತರ ಶಾಂಟೆಲ್ ಜಿಯಾಕಲೋನ್ ಮೆದುಳಿಗೆ ಹಾನಿಯಾಗಿದೆ. ಶಾಂಟೆಲ್ ಸಹವರ್ತಿ ಮಾಡೆಲ್ ಅವರಿಗೆ ಈ ಬಿಸ್ಕೆಟ್ ನೀಡಿದ್ದರು. ಆದರೆ ಈ ಬಿಸ್ಕೆಟ್ ನಲ್ಲಿ Peanut Butter ಬೆರೆಸಲಾಗಿತ್ತು. ಈ ಘಟನೆ 2013 ರಲ್ಲಿ ನಡೆದಿದೆ.  ಆ ಸಮಯದಲ್ಲಿ ಲಾಸ್ ವೇಗಾಸ್ ನಗರದಲ್ಲಿ ನಡೆದ ಮ್ಯಾಜಿಕ್ ಫ್ಯಾಶನ್ ಟ್ರೇಡ್ ಶೋನಲ್ಲಿ ಶಾಂಟೆಲ್ ಮಾಡೆಲಿಂಗ್ ಮಾಡುತ್ತಿದ್ದರು.

ಶಾಂಟೆಲ್ ಜಿಯಾಕಲೋನ್ ಗೆ Peanut Butter  ಅಲರ್ಜಿ ಇತ್ತು. ಈ ಕಾರಣದಿಂದಾಗಿ ಬಿಸ್ಕೆಟ್ ತಿಂದ ನಂತರ ಅವರು, ಅನಾಫಿಲ್ಯಾಕ್ಟಿಕ್ ಶಾಕ್ ಗೆ ಒಳಗಾಗಿದ್ದರು. ಯಾವ ವ್ಯಕ್ತಿಗೆ ಈ ಅಲರ್ಜಿ ಇರುತ್ತದೆಯೋ ಅವರು ಪೀನಟ್ ಬಟರ್ ತಿಂದರೆ ಅನಾಫಿಲ್ಯಾಕ್ಟಿಕ್ ಶಾಕ್ ಗೆ ಒಳಗಾಗುತ್ತಾರೆ. ಇದು ಅಪರೂಪದ ಪ್ರಕರಣವಾಗಿದ್ದು, ಇದಕ್ಕೆ ಎಲ್ಲಾ ಚಿಕಿತ್ಸೆ ಸಿಗುವುದಿಲ್ಲ.  ರೋಗಿಗೆ epinephrine ಎಂಬ ಔಷಧಿಯನ್ನು ನೀಡಬೇಕಾಗುತ್ತದೆ. ಆದರೆ ಶಾಂಟೆಲ್ಗೆ ತಕ್ಷಣಕ್ಕೆ ನೀಡಲು ಆ ಔಷಧಿ ಲಭ್ಯವಿರಲಿಲ್ಲ. 

ಶಾಂಟೆಲ್ ಸಮಯಕ್ಕೆ ಸರಿಯಾಗಿ ಔಷಧಿಗಳು ಮತ್ತು ವೈದ್ಯಕೀಯ ಸೌಲಭ್ಯಗಳು ಸಿಗದ ಕಾರಣ ಅವರು 8 ವರ್ಷಗಳವರೆಗೆ ಹಾಸಿಗೆಯಲ್ಲೇ ತಮ್ಮ ಜೀವನ ಕಳೆಯಬೇಕಾಯಿತು ಎಂಬ ವಕೀಲರ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿತು. ಈ ಪರಿಹಾರದ ಹಣದಿಂದ, ಶಾಂಟೆಲ್ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗಬಹುದು ಎನ್ನುವುದು ಶಾಂಟೆಲ್ ಹೆತ್ತವರ ಆಶಯ. 

ಶಾಂಟೆಲ್ ಎದುರಿಸಿದ ಅಲರ್ಜಿ ರಿಯಾಕ್ಷನ್ ನಂತರ ತುರಿಕೆ ಮತ್ತು ಮೂಗಿನ ಸ್ರವಿಸುವಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಈ ಕಾರಣದಿಂದಾಗಿ, ಅನಾಫಿಲ್ಯಾಕ್ಸಿಸ್ ಸಹ ಕೆಲವೊಮ್ಮೆ ಸಂಭವಿಸಬಹುದು. ಇದರಲ್ಲಿ ರಕ್ತದೊತ್ತಡ ಹೆಚ್ಚುತ್ತದೆ. ದೇಹದಲ್ಲಿನ ಆಕ್ಸಿಜನ್ ಲೆವೆಲ್ ಕಡಿಮೆಯಾಗುತ್ತದೆ ಮತ್ತು ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಈ ಪರಿಸ್ಥಿತಿಯಲ್ಲಿ ಕೆಲವರ ಸಾವು ಕೂಡಾ ಸಂಭವಿಸುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link