Zodiac Signs: ಹಗೆತನದ ವಿಷಯದಲ್ಲಿ ಈ ರಾಶಿಯವರಿಂದ ಅಂತರ ಕಾಯ್ದುಕೊಂಡರೆ ಒಳಿತು
ಮೇಷ ರಾಶಿಯ ಜನರು ಬೆಂಕಿಯ ಅಂಶವನ್ನು ಹೊಂದಿದ್ದು ಇವರು ಅಹಂ ಭಾವವನ್ನು ಹೊಂದಿರುತ್ತಾರೆ. ಅವರೊಂದಿಗೆ ಸ್ನೇಹ ಬೆಳೆಸುವುದು ತುಂಬಾ ಒಳ್ಳೆಯದು ಆದರೆ ದ್ವೇಷ ಬೆಳೆಸುವುದು ಅಷ್ಟೇ ನಷ್ಟವನ್ನು ಉಂಟುಮಾಡಬಹುದು. ಈ ಜನರು ತಮ್ಮ ಶತ್ರುಗಳನ್ನು ಸೋಲಿಸಲು ಯಾವುದೇ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ ಮತ್ತು ಕ್ಷಮೆ ಎಂಬುದು ಅವರ ನಿಘಂಟಿನಲ್ಲಿಯೇ ಇಲ್ಲ.
ಸಿಂಹ ರಾಶಿಯ ಜನರ ಪ್ರಾಬಲ್ಯವನ್ನು ಪ್ರಶ್ನಿಸುವುದು ಅವರೊಂದಿಗೆ ದ್ವೇಷವನ್ನು ಕಟ್ಟು ಕೊಂಡಂತೆಯೇ ಲೆಕ್ಕ. ಇವರು ಶತ್ರುವನ್ನು ಸೋಲಿಸುವ ನಿಟ್ಟಿನಲ್ಲಿ ಒಮ್ಮೆ ಮಾಡಿದ ನಿರ್ಧಾರವನ್ನು ಸ್ವತಃ ತಾವೇ ಇಚ್ಚಿಸಿದರೂ ಬದಲಾಯಿಸುವುದು ಕಷ್ಟ ಎಂದು ಹೇಳಲಾಗುತ್ತದೆ.
ವೃಶ್ಚಿಕ ರಾಶಿಯ ಜನರು ದ್ವೇಷವನ್ನು ಇಷ್ಟಪಡದಿದ್ದರೂ, ಅವರು ತಮಗೆ ಮೋಸ ಮಾಡಿದವರು ಅಷ್ಟು ಸುಲಭವಾಗಿ ಕ್ಶಮಿಸಲಾರರು. ಅವರ ಜೀವನದಲ್ಲಿ ಯಾರ ಹಸ್ತಕ್ಷೇಪವೂ ಅವರಿಗೆ ಇಷ್ಟವಾಗುವುದಿಲ್ಲ.
ಇದನ್ನೂ ಓದಿ- Mangal Rashi Parivartan: ಮಂಗಳನ ರಾಶಿ ಪರಿವರ್ತನೆ ಯಾವ ರಾಶಿಗೆ ಏನು ಫಲ
ಈ ರಾಶಿಚಕ್ರದ ಜನರು ಯಾವುದೇ ಕೆಲಸದಲ್ಲಿ ಅನಗತ್ಯವಾಗಿ ವಿಳಂಬ ಮಾಡಲು ಅಥವಾ ಸಮಯ ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ. ಅಂತೆಯೇ ಅವರು ಸೇಡು ತೀರಿಸಿಕೊಳ್ಳಲು ಸಹ ವಿಳಂಬ ಮಾಡುವುದಿಲ್ಲ.
ಇದನ್ನೂ ಓದಿ- Zodiac Signs: ಈ ರಾಶಿಯ ಹೆಣ್ಣು ಮಕ್ಕಳು ಸದಾ ಮೆಚ್ಚುಗೆ, ಗೌರವಕ್ಕೆ ಪಾತ್ರರಾಗುತ್ತಾರಂತೆ!
ಕುಂಭ ರಾಶಿಯ ಜನರ ಮೇಲೆ ವೈಯಕ್ತಿಕ ದಾಳಿ ಮಾಡುವುದರಿಂದ ಅವರ ಶತ್ರುತ್ವಕ್ಕೆ ಕಾರಣವಾಗಬಹುದು. ಇವರು ಶತ್ರುಗಳನ್ನು ನೆಮ್ಮದಿಯಾಗಿ ಇರಲು ಬಿಡುವುದಿಲ್ಲ. ವಿಶೇಷವೆಂದರೆ ಅವರು ಈ ಕೆಲಸವನ್ನು ಬಹಳ ಬುದ್ಧಿವಂತಿಕೆಯಿಂದ ನಿಭಾಯಿಸುತ್ತಾರೆ ಎಂದು ಹೇಳಲಾಗುತ್ತದೆ.
(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಝೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)