ಯಾವುದೇ ವ್ಯಾಪಾರ ಆರಂಭಿಸಿದರೂ ಯಶಸ್ಸು ಪಡೆಯುತ್ತಾರೆ ಈ ರಾಶಿಯವರು
ಮೇಷ: ಮೇಷ ರಾಶಿಯ ಅಧಿಪತಿ ಮಂಗಳ. ಈ ರಾಶಿಯವರು ಧೈರ್ಯ ಮತ್ತು ಉತ್ಸಾಹದಿಂದ ತುಂಬಿರುತ್ತಾರೆ. ತಾವು ಸಾಧಿಸಬೇಕಾದ ಗುರಿಗಳ ಬಗ್ಗೆ ಸ್ಪಷ್ಟತೆ ಹೊಂದಿರುತ್ತಾರೆ. ಅವರು ಹಣ ಸಂಪಾದಿಸಲು ಮತ್ತು ಸಿರಿವಂತರಾಗಲು ಬೇರೆ ಬೇರೆ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಏನೇ ಸಮಸ್ಯೆಗಳು ಎದುರಾದರೂ ಸೋಲೊಪ್ಪಿಕೊಳ್ಳುವುದಿಲ್ಲ.
ವೃಷಭ: ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ. ಶುಕ್ರನು ಸಂಪತ್ತು-ಐಷಾರಾಮಿ, ಸೌಂದರ್ಯ, ಖ್ಯಾತಿ, ಪ್ರೀತಿ, ಪ್ರಣಯ, ಕಲೆಯ ಒಡೆಯ. ವೃಷಭ ರಾಶಿಯವರಿಗೆ ಐಷಾರಾಮಿ ಜೀವನ ನಡೆಸುವ ಬಯಕೆ ಇರುತ್ತದೆ. ಅವರು ತಮ್ಮ ವೃತ್ತಿಜೀವನವನ್ನು ಎತ್ತರಕ್ಕೆ ಕೊಂಡೊಯ್ಯಲು ತುಂಬಾ ಶ್ರಮಿಸುತ್ತಾರೆ. ಇದರ ಫಲವಾಗಿ ಈ ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಮತ್ತು ಸಾಕಷ್ಟು ಖ್ಯಾತಿಯನ್ನು ಗಳಿಸುತ್ತಾರೆ.
ಮಿಥುನ: ಮಿಥುನ ರಾಶಿಯ ಅಧಿಪತಿ ಬುಧ. ಇದು ಬುದ್ಧಿವಂತಿಕೆ, ಸಂವಹನ, ವ್ಯವಹಾರದ ಅಂಶವಾಗಿದೆ. ಈ ರಾಶಿಯವರು ಯಾವುದೇ ಕೆಲಸ ಮಾಡುವಾಗಲೂ ಬಹಳ ಎಚ್ಚರಿಕೆಯಿಂದ ಮಾಡುತ್ತಾರೆ. ಯಾವುದೇ ವ್ಯಾಪಾರ ಮಾಡಿದರೂ ಅದರಲ್ಲಿ ಸಾಕಷ್ಟು ಲಾಭ ಗಳಿಸುತ್ತಾರೆ. ಈ ರಾಶಿಯ ಜನರು ಸಾಮಾಜಿಕ ಕಾರ್ಯಗಳಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಾರೆ.
ಮಕರ : ಮಕರ ರಾಶಿಯ ಅಧಿಪತಿ ಶನಿ ದೇವ. ಈ ರಾಶಿಯವರು ಕಠಿಣ ಪರಿಶ್ರಮ, ಪ್ರತಿಷ್ಠೆ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವವನ್ನು ಹೊಂದಿರುತ್ತಾರೆ. ಇವರು ಶ್ರಮಜೀವಿಗಳು. ಆದ್ದರಿಂದಲೇ ಬಡ ಕುಟುಂಬದಲ್ಲಿ ಜನಿಸಿದರೂ ಬಹಳ ಎತ್ತರಕ್ಕೆ ಬೆಳೆಯುತ್ತಾರೆ. ಜೀವದಲ್ಲಿ ಉತ್ತಮ ಸ್ಥಾನ, ಹಣ ಮತ್ತು ಪ್ರತಿಷ್ಠೆಯನ್ನು ಪಡೆಯುತ್ತಾರೆ.
ಕುಂಭ : ಶನಿಯು ಕುಂಭ ರಾಶಿಯ ಅಧಿಪತಿಯೂ ಹೌದು. ಈ ರಾಶಿಯವರು ಪ್ರಾಮಾಣಿಕರು, ಕರ್ತವ್ಯನಿಷ್ಠರು ಮತ್ತು ಉತ್ತಮ ಇಮೇಜ್ ಹೊಂದಿರುತ್ತಾರೆ. ಅವರು ನಿಖರವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಅದರ ಸಂಪೂರ್ಣ ಲಾಭವನ್ನು ಪಡೆಯುತ್ತಾರೆ. ಹಣ ಸಂಪಾದಿಸಲು ಹೊಸ ಹೊಸ ಆಯ್ಕೆಗಳನ್ನು ಹುಡುಕುವ ಅದ್ಭುತ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದ್ದರಿಂದ ಅವರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)