ಈ ರಾಶಿಯವರು Attention Seeker, ಯಾರಾದರೂ ignore ಮಾಡಿದರೆ ಸಹಿಕೊಳ್ಳುವುದಿಲ್ಲವಂತೆ
ಕರ್ಕ ರಾಶಿಯವರಲ್ಲಿ ಅಟೆಂನ್ಶನ್ ಸೀಕಿಂಗ್ ಗುಣ ಹೆಚ್ಚು. ತನ್ನ ಹೆಚ್ಚುಗಾರಿಕೆ ಹೇಳಿಕೊಳ್ಳುವುದೆಂದರೆ ಅವರಿಗೆ ಅಪರಿಮಿತ ಆಸಕ್ತಿ. ಇದೇ ವೇಳೆ ಅವರು ಬಯಸಿದ್ದಅಟೆಂನ್ಶನ್ ಸಿಗದೇ ಹೋದರೆ ಬಹು ಬೇಗಅವರಿಗೆ ಕೆಟ್ಟದನ್ನಿಸಿ ಬಿಡುತ್ತದೆ. ತನ್ನ ಸಂಗಾತಿ ಕೇವಲ ತನ್ನ ಬಗ್ಗೆಯೇ ಮಾತಾಡುತ್ತಿರಬೇಕು ಎಂದು ಈ ರಾಶಿಯವರು ಬಯಸುತ್ತಾರೆ. ಅವರು ಕೂಡಾ ತನ್ನ ಸಂಗಾತಿ ಬಗ್ಗೆ ಇದೇ ಭಾವನೆ ವ್ಯಕ್ತ ಪಡಿಸುತ್ತಾರೆ.
ಸಿಂಹ ರಾಶಿಯವರು ಅತಿದೊಡ್ಡ Attention Seeker. ಅಟೆನ್ಶನ್ ಪಡೆಯುವ ಇವರಅಭ್ಯಾಸ ಕೇವಲ ಮನೆ-ಕಚೇರಿಗೆ ಅಷ್ಟೇ ಸೀಮಿತವಾಗಿರುವುದಿಲ್ಲ. ಸಾಮಾಜಿಕ ಮಟ್ಟದಲ್ಲಿಯೂ ಅದನ್ನೇ ಅವರು ಬಯಸುತ್ತಾರೆ. ಇವರು ಸಾಮಾನ್ಯವಾಗಿ ಸಾಕಷ್ಟು ಜನರೊಂದಿಗೆ ಬೆರೆಯುತ್ತಾರೆ. ಸಾಕಷ್ಟು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಒಂದು ವೇಳೆ ಅವರನ್ನು ಜನ ಗುರುತಿಸದೇ ಹೋದರೆ ಸಾಕಷ್ಟು ಅವಮಾನದ ಭಾವನೆ ಅವರಿಗಾಗುತ್ತದೆ. ಇವರಿಗೆ ತಮ್ಮ ಹೊಗಳಿಗೆ ಕೇಳುತ್ತಲೇ ಇರಬೇಕು. ಇವರನ್ನು ಖುಷಿ ಪಡಿಸಬೇಕು ಅಂದರೆ ಸಿಕ್ಕಾಪಟ್ಟೆ ಹೊಗಳಬೇಕು ಅಷ್ಟೇ..
ತುಲಾ ರಾಶಿಯವರು ಹೆಚ್ಚಿಗೆ ವಿಷಯದಲ್ಲಿ ಸಂತುಲಿತರಾಗಿರುತ್ತಾರೆ. ಅಟೆಂನ್ಶನ್ ವಿಷಯದಲ್ಲೂ ಕೂಡಾ ಅಷ್ಟೇ. ಇವರು ತಮ್ಮ ಸಂಗಾತಿ ಬಗ್ಗೆ ಎಷ್ಟು ನಿಗಾ ವಹಿಸುತ್ತಾರೋ, ಅದೇ ರೀತಿಯಲ್ಲೂ ಸಂಗಾತಿ ಕೂಡಾ ತಮ್ಮ ಬಗ್ಗೆ ನಿಗಾ ವಹಿಸಬೇಕು ಎಂದು ಇವರು ಬಯಸುತ್ತಾರೆ. ಒಂದು ವೇಳೆ ಹೀಗಾಗದೇ ಹೋದರೆ ತೀರಾ ಕೆಟ್ಟದನಿಸುತ್ತದೆ. ಸುಳ್ಳು ಹೊಗಳಿಕೆ ಇವರಿಗೆ ಇಷ್ಟ ಆಗುವುದಿಲ್ಲ.ಅಸಲಿ ಹೊಗಳಿಕೆಗಾಗಿ ಇವರು ಕಾರ್ಯ ತತ್ಪರರಾಗಿರುತ್ತಾರೆ.
ವಶ್ಚಿಕ ರಾಶಿಯವರು ತಮ್ಮ ಸಂಗಾತಿಯ ವಿಚಾರದಲ್ಲಿ ತುಂಬಾ ಸೆನ್ಸೆಟಿವ್. ಅವರಿಗೆ ಸಂಗಾತಿಯಿಂದ ಬೆಲೆ ಸಿಗದೇ ಹೋದರೆ ಅವರು ಆ ಸಂಗಾತಿ ಜೊತೆ ತುಂಬಾ ಹೊತ್ತು ಇರಲ್ಲ. ಮನೆಯ ಹೊರಗೆ ಕೂಡಾ ಯಾರದರೂ ಇವರನ್ನು ಕಡೆಗಣಿಸಿದರೆ ಇವರಿಂದ ಅದನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಗೊತ್ತಿರಲಿ. ಈ ಲೇಖನದಲ್ಲಿರುವ ಮಾಹಿತಿಗಳು ಸಾಮಾನ್ಯ ಮಾಹಿತಿ ಮೇಲೆ ಅವಲಂಬಿತವಾಗಿದೆ. ಜೀಹಿಂದೂಸ್ತಾನ್ ಕನ್ನಡ ಇದನ್ನು ಪುಷ್ಟೀಕರಿಸುವುದಿಲ್ಲ