Angry Zodiac: ಈ ರಾಶಿಯ ಜನರು ಎಂದಿಗೂ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ, ನಿಮ್ಮ ರಾಶಿ ಇದೆಯಾ ಪರಿಶೀಲಿಸಿ
1. ಕುಂಭ (Aquarius) - ಕುಂಭ ರಾಶಿಯ ಜನರು ಜೀವನದಲ್ಲಿ ಸಂಘರ್ಷ ಹಾಗೂ ಸವಾಲುಗಳನ್ನೂ ಇಷ್ಟಪಡುತ್ತಾರೆ. ತಮ್ಮ ಪರಿಶ್ರಮದ ಸಹಾಯದಿಂದ ಈ ರಾಶಿಯ ಜನರು ಜೀವನದಲ್ಲಿ ಬಹಳಷ್ಟು ಸಾಧಿಸುತ್ತಾರೆ. ಹೀಗಿರುವಾಗ, ತಾವು ಜೀವನದಲ್ಲಿ ಮಾಡುತ್ತಿರುವುದೆಲ್ಲವೂ ಕೂಡ ಸರಿ ಎಂದು ಅವರು ಭಾವಿಸುತ್ತಾರೆ. ಈ ರಾಶಿಯ ಯಾವುದೇ ವ್ಯಕ್ತಿ ತಪ್ಪು ಮಾಡಿದರೆ ಮತ್ತು ಅದನ್ನು ಬೇರೆಯವರು ಎತ್ತಿ ತೋರಿಸಿದರೆ ಅವರು ಸಹಿಸುವುದಿಲ್ಲ. ಇದಲ್ಲದೆ ಹೋರಾಟಕ್ಕೂ ಕೂಡ ಮುಂದಾಗುತ್ತಾರೆ. ಆದರೆ, ಅವರ ಕೋಪ ಕಮ್ಮಿಯಾದಾಗ ಅವರು ಪಶ್ಚಾತಾಪ ಪಡುತ್ತಾರೆ. ಆದರೆ, ತಾವು ಮಾಡಿರುವ ತಪ್ಪನ್ನು ಇತರರ ಮುಂದೆ ಬಹಿರಂಗಪಡಿಸುವುದಿಲ್ಲ.
2. ಮೇಷ (Aries) - ಮೇಷ ರಾಶಿಯ ಜನರು ಹಾಗೆ ನೋಡಿದರೆ ತುಂಬಾ ಬುದ್ಧಿಶಾಲಿಯಾಗಿರುತ್ತಾರೆ. ಆದರೆ, ಇವರಿಗೆ ತಮ್ಮ ಬುದ್ಧಿಯ ಕುರಿತು ಗರ್ವಪಡುತ್ತಾರೆ. ತಾವು ಮಾಡುದೆಲ್ಲವು ಸರಿಯಾಗಿದೆ ಎಂಬುದು ಇವರ ಅಭಿಪ್ರಾಯ. ಇವರು ಮಾಡುವ ಕೆಲಸದಲ್ಲಿ ಇತರರ ಹಸ್ತಕ್ಷೇಪವನ್ನು ಇವರು ಸಹಿಸುವುದಿಲ್ಲ. ಅಷ್ಟೇ ಯಾಕೆ ಇವರು ತಮ್ಮ ತಪ್ಪನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ.
3. ಸಿಂಹ (Leo) - ಸಿಂಹ ರಾಶಿಯ ಜನರು ಯಾವುದೇ ನಿರ್ಧಾರವನ್ನು ತುಂಬಾ ಅವಸರದಲ್ಲಿ ತೆಗೆದುಕೊಳ್ಳುತ್ತಾರೆ. ತಾಳ್ಮೆಯ ಕೆಲಸವನ್ನು ಮಾಡುವಲ್ಲಿ ಇವರು ಇತರರಿಗಿಂತ ಹಿಂದುಳಿದಿರುತ್ತಾರೆ. ಇವರು ತಮ್ಮ ಸ್ವಂತ ಇಚ್ಛೆಯ ಯಾವುದೇ ಕೆಲಸವನ್ನು ಮಾಡಲು ಇಷ್ಟಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಕೆಲಸದಲ್ಲಿ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ಇದಲ್ಲದೆ, ಯಾರಾದರೂ ತಮ್ಮ ತಪ್ಪನ್ನು ತೋರಿಸಿದರೆ, ಇವರು ಸಿಡಿಮಿಡಿಗೋಳ್ಳುತ್ತಾರೆ.
4. ಜೋತಿಷ್ಯ ಶಾಸ್ತ್ರ ಏನು? - ಜ್ಯೋತಿಷ್ಯ ಶಾಸ್ತ್ರ ಒಂದು ಪ್ರಾಚೀನ ವಿದ್ಯೆಯಾಗಿದೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಯಿಂದ ವ್ಯಕ್ತಿಯ ಭವಿಷ್ಯವನ್ನು ಇದರಲ್ಲಿ ಅಧ್ಯಯನ ಮಾಡಲಾಗುತ್ತದೆ. ಇದನ್ನು ವೇದದ ಭಾಗವೆಂದು ಪರಿಗಣಿಸಲಾಗಿದೆ.
5. ಜೋತಿಷ್ಯ ಶಾಸ್ತ್ರ - ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾನವನ ಚಟುವಟಿಕೆಗಳ ಅಧ್ಯಯನದಿಂದ ಭವಿಷ್ಯವನ್ನು ಹೇಳಲಾಗುತ್ತದೆ. ಜಾತಕದಲ್ಲಿನ ಗ್ರಹಗಳ ಸ್ಥಾನಗಳು ಜೀವನದಲ್ಲಿನ ಏರಿಳಿತಗಳನ್ನು ಬಹಿರಂಗಪಡಿಸುತ್ತವೆ.