2025ರಲ್ಲಿ ಈ ರಾಶಿಯ ಜನರು ವಿವಾಹ ಭಾಗ್ಯವನ್ನ ಹೊಂದುತ್ತಾರೆ: ನಿಮ್ಮ ರಾಶಿಯೂ ಇದೆಯೇ ನೋಡಿ!!
ಮೇಷ ರಾಶಿಯವರು 2025ರ ಮೇ 15ರೊಳಗೆ ಮದುವೆ ಆಗುವುದು ತುಂಬಾ ಒಳ್ಳೆಯದು. ಮದುವೆ ಅಲ್ಲದಿದ್ರೆ ನಿಶ್ಚಿತಾರ್ಥನಾದರೂ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಮೇ 15 ದಾಟಿತು ಅಂದರೆ ನಿಮಗೆ ಗುರುಬಲ ಮುಗಿದು ಹೋಗುತ್ತದೆ. ನಂತರ ವಿವಾಹದ ವಿಚಾರದಲ್ಲಿ ನಿಮಗೆ ತುಂಬಾ ಕಷ್ಟವಾಗುತ್ತದೆ. ಒಂದು ಕಡೆ ಶನಿಯ ಸಾಡೇ ಸಾತಿ ಶುರುವಾದರೆ, ಇನ್ನೊಂದು ಕಡೆ ಗುರುಬಲ ಮುಗಿಯುತ್ತದೆ. ಹೀಗಾಗಿ ಮೇಷ ರಾಶಿಯವರು ಎಚ್ಚರಿಕೆ ವಹಿಸಿ ಬೇಗ ನೀವು ಮದುವೆ ಫಿಕ್ಸ್ ಮಾಡಿಕೊಳ್ಳಬೇಕು. ಏಕೆಂದರೆ ಮೇ 15ರ ನಂತರ ನಿಮಗೆ ಗುರುಬಲ ಇರುವುದಿಲ್ಲ.
ವೃಷಭ ರಾಶಿಯವರಿಗೆ ಬಹಳ ಪ್ರಮುಖವಾಗಿ ಗುರುಬಲ ಶುರುವಾಗುವುದು ಮೇ 15ರ ನಂತರ. ಹೀಗಾಗಿ ನೀವು ಜನವರಿಯಿಂದಲೇ ಹುಡುಗ ಅಥವಾ ಹುಡುಗಿಯನ್ನ ಹುಡುಕಬಹುದು. ಮೇ 15ರ ನಂತರ ಗುರುಬಲ ಬಂದಮೇಲೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಸಹ ಆಗಬಹುದು.
ಮಿಥುನ ರಾಶಿಯವರಿಗೆ ಈ ವರ್ಷ ಅಂದ್ರೆ 2020-25ನೇ ಇಸವಿಯಲ್ಲಿ ವಿವಾಹದ ವಿಚಾರವಾಗಿ ಗುರುಬಲ ಅನ್ನುವಂತದ್ದು ಇಲ್ಲ. ನಿಮ್ಮ ರಾಶಿಗೆ ಗುರು ಪ್ರವೇಶ ಆಗುವುದು ಮೇ 15ರ ನಂತರ. ಗುರು ಸಪ್ತಮಕ್ಕೆ ಪೂರ್ಣ ದೃಷ್ಟಿ ಇರುತ್ತದೆ. ಹೀಗಾಗಿ ನೀವು ಮೇ ನಂತರ ಜೂನ್ ತಿಂಗಳಿನಿಂದ ಆಚೆಗೆ ಸ್ವಲ್ಪ ಪ್ರಯತ್ನ ಮಾಡಿದ್ರೆ ವಿವಾಹದ ವಿಚಾರದಲ್ಲಿ ಅನುಕೂಲವಾಗಲಿದೆ. ಏನೇ ಆದ್ರೂ ನೀವು ಒಂದು ಸಾರಿ ನಿಮ್ಮ ಜಾತಕವನ್ನು ಪರಿಶೀಲನೆ ಮಾಡಿಸಿಕೊಳ್ಳಿ. ನಿಮ್ಮ ಜಾತಕದದಲ್ಲಿ ಯೋಗ ಫಲಗಳಿದ್ದರೆ ಖಂಡಿತ ನೀವು ಮದುವೆಯಾಗಬಹುದು.
ಕರ್ಕಾಟಕ ರಾಶಿಯವರಿಗೆ ಮದುವೆ ವಿಚಾರದಲ್ಲಿ ಹೈ ಅಲರ್ಟ್ ಆಗಿರಬೇಕು. ಯಾಕಂದ್ರೆ ನಿಮಗೆ ಇನ್ನು ಮದುವೆ ಆಗಿಲ್ಲ, ಮದುವೆಗೆ ಪ್ರಯತ್ನ ಮಾಡ್ತೀರಾ ಅಂದ್ರೆ ಬೇಗ ಬೇಗ ಶುಭಕಾರ್ಯಕ್ಕೆ ಸಜ್ಜಾಗಿರಿ. ಯಾಕಂದ್ರೆ ಮೇ ತಿಂಗಳು ದಾಟಿತು ಅಂದ್ರೆ ನಿಮಗೆ ಗುರುಬಲ ಮುಗಿದುಹೋಗುತ್ತದೆ. ಬರಿ ಮುಗಿದು ಹೋಗೋದಲ್ಲ 12ನೇ ಮನೆಯ ವ್ಯಯಸ್ಥಾನ ಲಾಸ್ಟ್ ಮನೆಗೆ ಗುರು ಬಂದುಬಿಡ್ತಾನೆ. ಬಟ್ ಶನಿಬಲ ನಿಮಗೆ ಕೊಂಚ ಹೆಲ್ಫ್ ಮಾಡಬಹುದು. ಇದನ್ನು ಹೊರತುಪಡಿಸಿದರೆ ನಿಮಗೆ ಗುರುಬಲ ಮುಗಿದು ಹೋಗಿರುತ್ತದೆ. ಹೀಗಾಗಿ ಮದುವೆಗೆ ಸಪೋರ್ಟ್ ಇರಲ್ಲ. ನಿಮ್ಮ ವೈಯಕ್ತಿಕ ಜಾತಕದಲ್ಲಿ ಏನಾದ್ರೂ ವಿವಾಹ ಫಲ ಬಂದ್ರೆ ನೀವು ನಿಶ್ಚಿಂತೆಯಿಂದ ಮದುವೆಯಾಗಬಹುದು.
ಸಿಂಹ ರಾಶಿಯವರಿಗೆ ಗುರುಬಲ ಶುರುವಾಗುತ್ತದೆ. ಲಾಭಸ್ಥಾನಕ್ಕೆ ಗುರು ಬರುವುದರಿಂದ ನೀವು ಮುಂಚಿತವಾಗಿ ಪ್ರಯತ್ನ ಮಾಡಬಹುದು. ಯಾಕಂದ್ರೆ ಸಪ್ತ ಅಧಿಪತಿಯಾಗಿ ಸಪ್ತಮದಲ್ಲಿ ಗುರು ಇರ್ತಾನೆ. ಸಿಂಹ ರಾಶಿಯವರು ಮುಂಚಿತವಾಗಿಯೇ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ಯಾಕೆಂದರೆ ಗುರುಬಲ ಬಂದಮೇಲೆ ಪ್ರಯತ್ನ ಬೇಡ, ಬರುವುದಕ್ಕಿಂತ ಮುನ್ನವೇ ಪ್ರಯತ್ನ ಮಾಡಿಕೊಳ್ಳಬೇಕು. ಗುರುಬಲ ಬಂದಮೇಲೆ ನಾನು ಹುಡುಗ-ಹುಡುಗಿ ಹುಡುಕುತ್ತೇನೆ ಅಂತಾ ಕುಳಿತರೆ ನಿಮಗೆ ಏಪ್ರಿಲ್ ಒಂದನೇ ತಾರೀಕಿಂದ ಅಷ್ಟಮ ಶನಿ ಶುರುವಾಗುತ್ತದೆ. ಹೀಗಾಗಿ ಈಗಿನಿಂದಲೇ ನೀವು ಮದುವೆ ಸಿದ್ಧತೆ ಮಾಡಿಕೊಳ್ಳಬೇಕು. ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ಒಳಗಡೆ ನೀವು ಹುಡುಗ ಅಥವಾ ಹುಡುಗಿಯನ್ನ ಫೈನಲ್ ಮಾಡಿಕೊಳ್ಳಬೇಕು. ಮೇ ನಂತರ ಬೇಕಾದರೆ ನೀವು ಮದುವೆಯಾದರೆ ಯಾವುದೇ ಸಮಸ್ಯೆ ಇಲ್ಲ.
ಕನ್ಯಾ ರಾಶಿಯವರು ಮದುವೆ ಆಗಬೇಕು ಅಂತಾ ಅನ್ಕೊಂಡಿದ್ರೆ ಕೂಡಲೇ ಸಿದ್ಧತೆ ಮಾಡಿಕೊಳ್ಳಿರಿ. ಯಾಕಂದ್ರೆ ನಿಮಗೆ ಗುರುಬಲ ಮುಗಿದು ಹೋಗ್ಬಿಡುತ್ತೆ. ಮೇ ನಂತರ ನಿಮಗೆ ಗುರುಬಲ ಇಲ್ಲ. ಯಾಕೆಂದರೆ ಸಂಚಾರಿ ಶನಿಯು ಏಳನೇ ಮನೆಗೆ ಬಂದುಬಿಡ್ತಾನೆ. ಹೀಗಾಗಿ ಜನವರಿ, ಫೆಬ್ರವರಿ ಮತ್ತು ಮಾರ್ಚ್ ಈ ಮೂರು ತಿಂಗಳ ಒಳಗಡೆ ನೀವು ಹುಡುಗಿ ಅಥವಾ ಹುಡುಗನನ್ನು ಫೈನಲೈಸ್ ಮಾಡಿಕೊಳ್ಳಬೇಕು.
ವಿವಾಹದ ವಿಚಾರಕ್ಕೆ ಬಂದ್ರೆ ತುಲಾ ರಾಶಿಯವರಿಗೆ ಗುರುಬಲ ಶುರುವಾಗುವುದೇ ಮೇ ತಿಂಗಳ ನಂತರ. ಆಮೇಲೆ ಪಂಚಮ ಶನಿ ಬೇರೆ ಇರುತ್ತದೆ. ಹೀಗಾಗಿ ನೀವು ಕನ್ಯೆ ಅಥವಾ ವರನನ್ನು ಹುಡುಕದೆ ಸದ್ಯಕ್ಕೆ ಸುಮ್ನಿದ್ದುಬಿಡಿ. ನೀವು ಮೇ 16ರ ನಂತರ ಹುಡುಗ ಅಥವಾ ಹುಡುಗಿನ ಹುಡುಕಲು ಶುರು ಮಾಡುವುದು ಉತ್ತಮ.