2023 ರಲ್ಲಿ ತೂಕ ನಷ್ಟಕ್ಕಾಗಿ ಜನ ಅತಿ ಹೆಚ್ಚು ಸೇವಿಸಿದ್ದು ಇದೇ ವಸ್ತುವನ್ನು !
ಆಹಾರದ ಸಹಾಯದಿಂದ ಚಯಾಪಚಯವನ್ನು ಹೆಚ್ಚಿಸಲು ಪ್ರಯತ್ನಿಸುವುದು ತೂಕ ನಷ್ಟಕ್ಕೆ ಮುಖ್ಯವಾಗಿ ಬೇಕಾಗಿರುತ್ತದೆ. ಚಯಾಪಚಯವನ್ನು ಹೆಚ್ಚಿಸುವುದರ ಜೊತೆಗೆ, ಈ ಆಹಾರಗಳು ಕೊಬ್ಬನ್ನು ಬರ್ನ್ ಮಾಡುವ ಪ್ರಕ್ರಿಯೆಯನ್ನು ಕೂಡಾ ಹೆಚ್ಚಿಸುತ್ತದೆ.
ಗ್ರೀನ್ ಟೀ ಯಾವಾಗಲೂ ತೂಕ ಇಳಿಸುವ ಪ್ರಮುಖ ಪಾನೀಯವಾಗಿದೆ. 2023 ರಲ್ಲಿ, ಗ್ರೀನ್ ಟೀ ಜೊತೆಗೆ, ತುಳಸಿ ಚಹಾ ಮತ್ತು ಪುದೀನ ಚಹಾದಂತಹ ಗಿಡಮೂಲಿಕೆ ಪಾನೀಯಗಳನ್ನು ಜನರು ಹೆಚ್ಚಾಗಿ ಇಷ್ಟಪಟ್ಟಿದ್ದರು ಎನ್ನಲಾಗಿದೆ.
ಫೈಬರ್ ತೂಕ ನಷ್ಟಕ್ಕೆ ಬಹಳ ಸಹಾಯಕವಾಗಿದೆ. ಫೈಬರ್ ನಲ್ಲಿ ಸಮೃದ್ಧವಾಗಿರುವ ತರಕಾರಿಗಳು ಮತ್ತು ಹಣ್ಣುಗಳನ್ನು ಕೂಡಾ ಜನರು ಬಹಳವಾಗಿ ಇಷ್ಟಪಟ್ಟಿದ್ದಾರೆ.
ಉಗುರುಬೆಚ್ಚಗಿನ ನೀರಿಗೆ ನಿಂಬೆರಸ ಬೆರೆಸಿ ಕುಡಿದು ತೂಕ ಇಳಿಸಿಕೊಳ್ಳಲು ಅನೇಕ ಮಂದಿ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಕರಿಮೆಣಸು ಚಳಿಗಾಲದಲ್ಲಿ ದೇಹಕ್ಕೆ ಉಷ್ಣತೆಯನ್ನು ನೀಡುವ ಕೆಲಸ ಮಾಡುತ್ತದೆ. ಇದಲ್ಲದೆ, ಇದರಲ್ಲಿರುವ ಪ್ಯಾಪರಿನ್ ಎಂಬ ಅಂಶವು ದೇಹದ ಚಯಾಪಚಯ ದರವನ್ನು ಹೆಚ್ಚಿಸುತ್ತದೆ ಮತ್ತು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ.
ಈ ಕಪ್ಪು ಬೀಜಗಳು ಜೀರ್ಣ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಚಯಾಪಚಯ ದರವನ್ನು ಕೂಡಾ ಹೆಚ್ಚಿಸುತ್ತದೆ.