ಈ 5 ಆರೋಗ್ಯ ಸಮಸ್ಯೆಗಳಿರುವವರು ಎಂದಿಗೂ ಬದನೆ ಕಾಯಿಯನ್ನು ತಿನ್ನಬೇಡಿ..! ಅಪ್ಪಿ ತಪ್ಪಿ ತಿಂದ್ರೆ...

Fri, 20 Sep 2024-8:02 pm,

ಬದನೆ ಅನೇಕ ಜನರು ಇಷ್ಟಪಡುವ ತರಕಾರಿಗಳಲ್ಲಿ ಒಂದು. ಆದರೆ ಬದನೆ ಕೆಲವು ಜನರಿಗೆ ವಿಷದಷ್ಟೇ ಹಾನಿಕಾರಕ ಅಂತ ಕೆಲವರಿಗೆ ಗೊತ್ತಿಲ್ಲ.. ಈ ಕೆಳಗೆ ನೀಡಿರುವ ಐದು ಸಮಸ್ಯೆಗಳಿರುವ ಜನರು ಎಂದಿಗೂ ಬದನೆಯನ್ನು ತಿನ್ನಬಾರದು.. ಏಕೆಂದರೆ ಬದನೆ ತಿನ್ನುವುದರಿಂದ ಅವರಿಗೆ ಗಂಭೀರ ಹಾನಿಯಾಗುತ್ತದೆ. 

ಜೀರ್ಣಕ್ರಿಯೆ ಸಮಸ್ಯೆ : ಗ್ಯಾಸ್, ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆ ಇರುವವರು ಬದನೆ ತಿನ್ನಬಾರದು. ಇಂತಹ ಪರಿಸ್ಥಿತಿಯಲ್ಲಿ ಬದನೆಕಾಯಿಯನ್ನು ತಿನ್ನುವುದರಿಂದ ಜೀರ್ಣಕ್ರಿಯೆಯ ತೊಂದರೆಗಳು ಹೆಚ್ಚಾಗಬಹುದು. ಆದ್ದರಿಂದ ಕಳಪೆ ಜೀರ್ಣಕ್ರಿಯೆ ಅಥವಾ ಗ್ಯಾಸ್ ಇಲ್ಲವೆ ಆಮ್ಲೀಯತೆ ಹೊಂದಿರುವ ಜನರು ಈ ತರಕಾರಿಯನ್ನ ತಿನ್ನಬೇಡಿ.. 

ರಕ್ತಹೀನತೆ : ರಕ್ತದ ಕೊರತೆಯಿಂದ ಬಳಲುತ್ತಿರುವವರು ಅಂದರೆ ರಕ್ತಹೀನತೆಯಿಂದ ಬಳಲುತ್ತಿರುವವರು ಬದನೆಕಾಯಿಯನ್ನು ತ್ಯಜಿಸಬೇಕು. ಆರೋಗ್ಯ ತಜ್ಞರ ಪ್ರಕಾರ, ಬದನೆಕಾಯಿ ದೇಹದಲ್ಲಿ ಕಬ್ಬಿಣಾಂಶವನ್ನು ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುವ ಅಂಶಗಳನ್ನು ಒಳಗೊಂಡಿದೆ. ಇದರಿಂದಾಗಿ ರಕ್ತದ ಕೊರತೆ ಇನ್ನಷ್ಟು ಗಂಭೀರವಾಗಬಹುದು.  

ಕಿಡ್ನಿಯಲ್ಲಿ ಕಲ್ಲು  : ಮೂತ್ರಪಿಂಡದ ಕಾಯಿಲೆ ಅಥವಾ ಕಲ್ಲು ಇರುವವರು ಬದನೆ ತಿನ್ನುವುದನ್ನು ತಪ್ಪಿಸಬೇಕು. ಬದನೆಕಾಯಿಯಲ್ಲಿ ಆಕ್ಸಲೈಟ್ ಎಂಬ ಅಂಶವಿದೆ. ಕಿಡ್ನಿ ಕಲ್ಲುಗಳು ಮತ್ತು ಕಲ್ಲುಗಳ ರಚನೆಗೆ ಇದು ಮುಖ್ಯ ಕಾರಣ. ಕಲ್ಲಿನ ಸಮಸ್ಯೆ ಇರುವವರು ಬದನೆಕಾಯಿಯನ್ನು ತಮ್ಮ ಆಹಾರದಿಂದ ದೂರವಿಡಬೇಕು.   

ಕೀಲು ನೋವು : ಕೀಲು ನೋವಿನ ಸಮಸ್ಯೆ ಇರುವವರು ಬದನೆಯನ್ನು ಸೇವಿಸಬಾರದು. ಆರೋಗ್ಯ ತಜ್ಞರ ಪ್ರಕಾರ, ಬದನೆಯಲ್ಲಿ ಸೋಲಾನಿಲ್ ಎಂಬ ಅಂಶವಿದೆ. ಈ ಕಾರಣದಿಂದಾಗಿ, ದೇಹದ ಊತ ಮತ್ತು ಕೀಲು ನೋವು ಹೆಚ್ಚಾಗಬಹುದು. 

ಅಲರ್ಜಿಗಳು : ಅನೇಕ ಸಂದರ್ಭಗಳಲ್ಲಿ, ಬದನೆಯನ್ನು ತಿನ್ನುವುದು ಅಲರ್ಜಿಗೆ ಕಾರಣವಾಗುತ್ತದೆ. ಬದನೆ ತಿಂದ ನಂತರ ಇದು ಅನುಭವಕ್ಕೆ ಬರುತ್ತದೆ. ಇಂತಹ ವೇಳೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮತ್ತು ನಂತರ ಬದನೆ ತಿನ್ನುವುದನ್ನು ನಿಲ್ಲಿಸಿ.

(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. Zee Kannada News ಇದನ್ನು ಅನುಮೋದಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link