Almond Side Effects: ಈ ಸಮಸ್ಯೆ ಇರುವವರು ಮರೆತೂ ಬಾದಾಮಿ ತಿನ್ನಬೇಡಿ
ಕಿಡ್ನಿ ಸ್ಟೋನ್: ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಬಾದಾಮಿ ಸೇವನೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಬಾದಾಮಿಯಲ್ಲಿ ಆಕ್ಸಲೇಟ್ ಉತ್ತಮ ಪ್ರಮಾಣದಲ್ಲಿರುತ್ತದೆ. ಇದು ಕಿಡ್ನಿಯಲ್ಲಿ ಸಂಗ್ರಹವಾಗಿ ಸ್ಟೋನ್ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ, ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಬಾದಾಮಿ ಸೇವನೆ ಒಳ್ಳೆಯದಲ್ಲ.
ಅಲರ್ಜಿ: ಕೆಲವರಿ ಬಾದಾಮಿ ಸೇವನೆಯಿಂದ ಅಲರ್ಜಿ ಸಮಸ್ಯೆ ಉಂಟಾಗಬಹುದು. ಇದರಲ್ಲಿರುವ ಅಮಾಂಡಿನ್ ಎಂಬ ಪ್ರೋಟೀನ್ ಅಲರ್ಜಿ ಸಮಸ್ಯೆ ಉಂಟುಮಾಡುತ್ತದೆ. ನಿಮಗೆ ಮೊದಲೇ ಅಲರ್ಜಿ ಸಮಸ್ಯೆ ಇದ್ದರೆ ಬಾದಾಮಿ ಸೇವನೆ ತಪ್ಪಿಸಿ.
ಜೀರ್ಣಕಾರಿ ಸಮಸ್ಯೆ: ಬಾದಾಮಿ ಸೇವನೆಯು ಕೆಲವರಿಗೆ ಜೀರ್ಣಕಾರಿ ಸಮಸ್ಯೆ ಉಂಟು ಮಾಡಬಹುದು. ಅಧಿಕ ಬಾದಾಮಿ ಸೇವನೆಯಿಂದ ಮಲಬದ್ಧತೆ ಸಮಸ್ಯೆಯೂ ಉಂಟಾಗಬಹುದು.
ಉಸಿರಾಟದ ಸಮಸ್ಯೆ: ಬಾದಾಮಿಯಲ್ಲಿ ಹೈಡ್ರೋಸಯಾನಿಕ್ ಆಸಿಡ್ ಇರುವುದರಿಂದ ಉಸಿರಾಟದ ಸಮಸ್ಯೆ ಇರುವವರಿಗೆ ಇದು ಅಪಾಯಕಾರಿ ಎಂದು ಸಾಬೀತುಪಡಿಸಬಹುದು.
ಬಾದಾಮಿ ತಿನ್ನಲು ಸರಿಯಾದ ಮಾರ್ಗ ಯಾವುದು? ನಮ್ಮಲ್ಲಿ ಬಹುತೇಕ ಮಂದಿ ಬಾದಾಮಿಯನ್ನು ಸಿಪ್ಪೆ ತೆಗೆದು ತಿನ್ನುತ್ತಾರೆ. ಬಾದಾಮಿ ಸಿಪ್ಪೆಯಲ್ಲಿ ಪಾಲಿಫಿನಾಲ್ ಮತ್ತು ಫೈಬರ್ ಇರುತ್ತದೆ. ಸಿಪ್ಪೆ ಇಲ್ಲದೆ ಬಾದಾಮಿ ಸೇವಿಸುವುದರಿಂದ ಪೌಷ್ಟಿಕಾಮ್ಶವು ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುವುದಿಲ್ಲ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಇದನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.