ಹರಳಿನಂತೆ ಗಟ್ಟಿಕಟ್ಟಿರುವ ಯೂರಿಕ್ ಆಸಿಡ್ ಅನ್ನು ಕರಗಿಸಲು ಅರ್ಧ ಚಮಚ ಅರಶಿನದೊಂದಿಗೆ ಈ ಕಾಳಿನ ಪುಡಿ ಸೇವಿಸಿ! ನೋವು ಕೂಡಾ ಥಟ್ಟನೆ ಕಡಿಮೆಯಾಗುವುದು!
ದೀರ್ಘಕಾಲದ ಅಧಿಕ ಯೂರಿಕ್ ಆಸಿಡ್ ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್ ನಂಥಹ ಸಮಸ್ಯೆಗಳನ್ನು ಉಂಟುಮಾಡಬಹುದು.ಯೂರಿಕ್ ಆಸಿಡ್ ಸಮಸ್ಯೆಯನ್ನು ಕೆಲವು ಮನೆಮದ್ದುಗಳ ಸಹಾಯದಿಂದ ನಿವಾರಿಸಬಹುದು.
ಯೂರಿಕ್ ಆಸಿಡ್ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಬಳಸುವ ಮನೆಮದ್ದುಗಳಲ್ಲಿ ಅರಶಿನ ಬಹಳ ಮುಖ್ಯವಾದುದು.ಅರಿಶಿನದ ಬಳಕೆಯು ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅರಿಶಿನದಲ್ಲಿ ಆ್ಯಂಟಿ ಬಯೋಟಿಕ್ ಮತ್ತು ಉರಿಯೂತ ನಿವಾರಕ ಗುಣಗಳಿದ್ದು, ಇದು ದೇಹವನ್ನು ಹಲವು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅರಿಶಿನದಲ್ಲಿ ಕರ್ಕ್ಯುಮಿನ್ ಕಂಡುಬರುತ್ತದೆ,ಇದು ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ದೇಹದಲ್ಲಿ ಹೆಚ್ಚಿದ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಲು,ಅರಿಶಿನ ಹಾಲನ್ನು ಕುಡಿಯಬಹುದು. ಇದಕ್ಕಾಗಿ ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ಅರಿಶಿನ ಪುಡಿಯನ್ನು ಬೆರೆಸಬೇಕು. ಜೊತೆಗೆ ಇದಕ್ಕೆ ಚಿಟಿಕೆ ಕರಿಮೆಣಸಿನ ಪುಡಿಯನ್ನು ಬೆರೆಸುವುದನ್ನು ಮರೆಯಬೇಡಿ. ಇವೆರಡನ್ನೂ ಬೆರೆಸಿದ ಹಾಲನ್ನು ಸೇವಿಸುವುದರಿಂದ ಯೂರಿಕ್ ಆಸಿಡ್ ಮತ್ತು ಅದರಿಂದ ಕಾಣಿಸಿಕೊಳ್ಳುವ ನೋವು ಸಂಪೂರ್ಣವಾಗಿ ಕಡಿಮೆಯಾಗುವುದು.
ಅರಿಶಿನ ಮತ್ತು ಕರಿಮೆಣಸು ಸಂಧಿವಾತ ಮತ್ತು ಆಸ್ಟಿಯೊಪೊರೋಸಿಸ್‌ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಕೂಡಾ ಕಡಿಮೆ ಮಾಡುತ್ತದೆ. (ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು.Zee Kannada News ಅದನ್ನು ಅನುಮೋದಿಸುವುದಿಲ್ಲ.)