ಪುದೀನ ಎಣ್ಣೆಯಿಂದ ನಿಮ್ಮ ಕೂದಲನ್ನು ಇನ್ನೂ ಸುಂದರವಾಗಿಸಬಹುದು! ಇಲ್ಲಿದೆ ಸರಳ ಟಿಪ್ಸ್
ಪುದೀನಾ ಎಣ್ಣೆಯ ಬಳಕೆಯಿಂದ ನೆತ್ತಿಯ ಆರೋಗ್ಯ ಸುಧಾರಿಸುವುದರ ಜೊತೆಗೆ ಆರೋಗ್ಯಕರ ಕೂದಲನ್ನು ಹೊಂದಬಹುದು. ಪುದೀನಾ ಎಣ್ಣೆಯ ಪ್ರಯೋಜನಗಳೆಂದರೆ...
ಪುಡಿಯಾನ ಎಣ್ಣೆಯ ಬಳಕೆಯಿಂದ ಇದು ನೆತ್ತಿಯಿಂದ ಅಧಿಕ ತೈಲ ಉತ್ಪಾದನೆಯನ್ನು ಕಡಿಮೆ ಮಾಡುವುದರೊಂದಿಗೆ ನೆತ್ತಿಯ ಪಿಹೆಚ್ ಮಟ್ಟವನ್ನು ನಿಯಂತ್ರಿಸುತ್ತದೆ.
ಪುದೀನಾ ಎಣ್ಣೆಯು ನೆತ್ತಿಯನ್ನಷ್ಟೇ ಅಲ್ಲದೆ, ಅದು ಕೂದಲಿನ ಕೋಶಕವನ್ನು ಉತ್ತೇಜಿಸಿ ಕೂದಲಿಗೆ ಅಗತ್ಯ ಆಮ್ಲಜನಕವನ್ನು ಪೂರೈಸುವಲ್ಲಿ ಪರಿಣಾಮಕಾರಿ ಆಗಿದೆ.
ಪುದೀನಾ ಎಣ್ಣೆಯಿಂದ ನೆಟ್ಟಿಗೆ ಅಗತ್ಯ ಆಮ್ಲಜನಕ ಪೂರೈಕೆ ಆಗುವುದರಿಂದ ಇದು ಕೂದಲನ್ನು ಬೇರುಗಳಿಂದ ಗಟ್ಟಿಗೊಳಿಸಿ, ಕೂದಲ ಬೆಳವಣಿಗೆಗೆ ಸಹಕಾರಿ ಆಗಲಿದೆ.
ಬಾದಾಮಿ ಅಥವಾ ಆಲೀವ್ ಎಣ್ಣೆಯೊಂದಿಗೆ ಪುದೀನಾ ಎಣ್ಣೆಯನ್ನು ಬೆರೆಸಿ ಹಚ್ಚುವುದರಿಂದ ಇದು ಕೂದಲನ್ನು ಪೋಷಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.