ಗ್ಯಾಸ್ ಸ್ಟೌವ್ ಈ ದಿಕ್ಕಿನಲ್ಲಿದ್ದರೆ ಅನ್ನಕ್ಕೆ ಬರಲ್ಲ ಕುತ್ತು! ಆಗುವುದೇ ಇಲ್ಲ ಒಂದೇ ಒಂದು ರೂಪಾಯಿ ಸಾಲ! ಮನೆಯಲ್ಲಿ ಶಾಶ್ವತವಾಗಿ ನೆಲೆಯೂರುತ್ತಾಳೆ ಧನ ಧಾನ್ಯ ಲಕ್ಷ್ಮೀ
ಮನೆಯ ಅಡುಗೆ ಮನೆಗೆ ವಿಶೇಷ ಸ್ಥಾನ. ಇಲ್ಲಿ ಎಲ್ಲವೂ ಸರಿಯಾಗಿದ್ದರೆ ಜೀವನದಲ್ಲಿ ನಾವು ಗೆದ್ದ ಹಾಗೆಯೇ. ಅಡುಗೆ ಕೋಣೆ ಆಗ್ನೇಯ ಮೂಲೆಯಲ್ಲಿಯೇ ಇರಬೇಕು. ಯಾಕೆಂದರೆ ಇದು ಅಗ್ನಿ ಮೂಲೆ. ವಾಯುವ್ಯ ದಿಕ್ಕು ಕೂಡಾ ಅಡುಗೆ ಕೋಣೆಗೆ ಸೂಕ್ತ.
ಅಡುಗೆ ಮನೆಯ ಒಲೆ ಯಾವ ದಿಕ್ಕಿನಲ್ಲಿ ಇರಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಅಡುಗೆ ಮನೆಯ ಒಲೆ ಎಲ್ಲಿ ಇಟ್ಟಿದ್ದೇವೆ ಎನ್ನುವುದರ ಮೇಲೆ ಇಡೀ ಮನೆಯ ಅರ್ಥ ವ್ಯವಸ್ಥೆ ನಿಂತಿರುತ್ತದೆಯಂತೆ. ಬೆಂಕಿಯ ಅಂಶ ಆಗ್ನೇಯ ದಿಕ್ಕನ್ನು ನಿಯಂತ್ರಿಸುವ ಕಾರಣ ಒಲೆ ಯಾವಾಗಲೂ ಆ ದಿಕ್ಕಿನಲ್ಲೇ ಇರಬೇಕು.
ಇನ್ನು ಮನೆಯಲ್ಲಿ ಇರುವ ಸ್ಟೌವ್ ಎಷ್ಟು ಒಲೆಗಳದ್ದು ಎನ್ನುವುದು ಕೂಡಾ ಮುಖ್ಯ. ಮನೆಯಲ್ಲಿ ಮೂರು ಒಲೆಗಳ ಸ್ಟೌವ್ ಇದ್ದರೆ ಅದು ಒಳ್ಳೆಯದಲ್ಲ. ಯಾವಾಗಲೂ ಎರಡು, ನಾಲ್ಕು ಒಲೆಗಳ ಸ್ಟೌವ್ ಬಳಸಬೇಕು. ಅದರಲ್ಲಿಯೂ ಎರಡು ಒಲೆಗಳ ಸ್ಟೌವ್ ಇದ್ದರೆ ಶ್ರೇಯಸ್ಕರ.
ಇನ್ನು ಸ್ಟೌವ್ ಪಕ್ಕದಲ್ಲಿ ಯಾವತ್ತೂ ಸಿಂಕ್ ಇರಲೇ ಬಾರದು. ವಾಸ್ತು ಪ್ರಕಾರ ಅಡುಗೆಮನೆಯಲ್ಲಿ ಸಿಂಕ್ ಈಶಾನ್ಯ ದಿಕ್ಕಿನಲ್ಲಿರಬೇಕು. ವಿರುದ್ದ ಅಂಶಗಲಾಗಿರುವ ನೀರು ಮತ್ತು ಬೆಂಕಿ ಅಕ್ಕ ಪಕ್ಕ ಇರಲೇ ಬಾರದು.
ಅಡುಗೆ ಮನೆಯ ಕಿಟಕಿ ಪೂರ್ವ ದಿಕ್ಕಿನಲ್ಲಿ ಇರಬೇಕು. ಈ ದಿಕ್ಕಿನಲ್ಲಿ ಇರುವ ಕಿಟಕಿ ನಕಾರಾತ್ಮಕ ಶಕ್ತಿಯನ್ನು ಹೊರ ಹಾಕುತ್ತದೆ.
ಇನ್ನು ವಿದ್ಯುತ್ ಉಪಕರಣಗಳಾದ ಫ್ರಿಜ್,ಮೈಕ್ರೋವೇವ್ ಓವನ್, ಹೀಟರ್, ಮಿಕ್ಸರ್ ಮತ್ತು ಗ್ರೈಂಡರ್‌ಗಳಂತಹ ವಿದ್ಯುತ್ ಉಪಕರಣಗಳನ್ನು ಆಗ್ನೇಯ ದಿಕ್ಕಿನಲ್ಲಿ ಇರಿಸಿ.
ಸೂಚನೆ :ಮೇಲಿನ ಲೇಖನ ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.