ನಿತ್ಯ ಈ ಹೂವನ್ನು ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣ ನಿಯಂತ್ರಣಕ್ಕೆ ಬರುವುದು ! ಅಪ್ಪಿ ತಪ್ಪಿಯೂ ಏರುವುದಿಲ್ಲ ಬ್ಲಡ್ ಶುಗರ್
ಕೊಲೆಸ್ಟ್ರಾಲ್ ಮತ್ತು ಮಧುಮೇಹ ತಡೆಗೆ ಕೆಲವು ನೈಸರ್ಗಿಕ ಪರಿಹಾರವಿದೆ. ಅವುಗಳಲ್ಲಿ ಒಂದು ಈ ಹೂವು ಮತ್ತು ಅದರ ಎಲೆ. ಹೌದು ನಾವಿಲ್ಲಿ ಹೇಳುತ್ತಿರುವುದು ಸದಾಪುಷ್ಟ ಹೂವು ಮತ್ತು ಅದರ ಎಲೆಗಳ ಬಗ್ಗೆ.
ಇದು ವರ್ಷವಿಡೀ ಬಿಡುವ ಹೂವಾಗಿದೆ. ಈ ಹೂವು ಗುಲಾಬಿ,ಕೆಂಪು,ನೇರಳೆ ಮತ್ತು ಬಿಳಿ ಬಣ್ಣದ್ದಾಗಿರುತ್ತದೆ.ಈ ಸಸ್ಯಕ್ಕೆ ಹೆಚ್ಚಿನ ಕಾಳಜಿ ಅಗತ್ಯವಿಲ್ಲ ಇದು ಎಲ್ಲಿ ಬೇಕಾದರೂ ಸುಲಭವಾಗಿ ಬೆಳೆಯುತ್ತದೆ.
ಸದಾಪುಷ್ಟ ಹೂವುಗಳು ಮತ್ತು ಅದರ ಎಲೆಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಈ ಹೂವು ಮತ್ತು ಎಲೆಗಳ ರಸವನ್ನು ಕುಡಿಯುವುದು ಮಧುಮೇಹವನ್ನು ತಕ್ಷಣ ನಿಯಂತ್ರಿಸಬಹುದು.
ಅಲ್ಲದೆ ಸದಾ ಪುಷ್ಟದ ಸೇವನೆಯು ದೇಹದಲ್ಲಿ ಸಂಗ್ರಹವಾದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಕೂಡಾ ಸಹಾಯ ಮಾಡುತ್ತದೆ .
ಈ ಹೂವಿನಲ್ಲಿ ಆಲ್ಕಲಾಯ್ಡ್‌ಗಳು ಮತ್ತು ಟ್ಯಾನಿನ್‌ಗಳಂತಹ ಸಕ್ರಿಯ ಸಂಯುಕ್ತಗಳು ಸದಾ ಪುಷ್ಪ ಹೂವು ಮತ್ತು ಎಲೆಗಳಲ್ಲಿ ಕಂಡುಬರುತ್ತವೆ.ಈ ಎರಡೂ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.
ಸದಾಪುಷ್ಟ ಹೂವು ಮತ್ತು ಅದರ ಎಲೆಗಳನ್ನು ತೆಗೆದುಕೊಳ್ಳಿ. ಸ್ವಲ್ಪ ನೀರು ಹಾಕಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಅರ್ಧ ಲೋಟ ನೀರಿನಲ್ಲಿ ಬೆರೆಸಿ ಕುಡಿಯಿರಿ. ನಂತರ ಫಿಲ್ಟರ್ ಮಾಡಿ ಕುಡಿಯಿರಿ.
ಸದಾ ಪುಷ್ಟ ಹೂವಿನ 3-4 ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿ.ಈ ಎಲೆಗಳನ್ನು ಜಗಿದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿ.ನಂತರ ನೀರು ಕುಡಿಯಿರಿ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.