ಮಧುಮೇಹಕ್ಕೆ ಮನೆ ಮುಂದೆ ಇರುವ ಈ ಹೂವೇ ಪರಿಹಾರ !ಬೆಳಿಗ್ಗೆ ಒಂದು ಹೂವನ್ನು ಸೇವಿಸಿದರೆ ಸಾಕು ಹೈ ಬ್ಲಡ್ ಶುಗರ್ ನಾರ್ಮಲ್ ಆಗುವುದು !
ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದರೆ ನಿತ್ಯ ಔಷಧಿ ಸೇವಿಸಬೇಕು. ಆದರೆ ಈ ಔಷಧಿ ಕೂಡಾ ಬೇರೆಯೇ ರೀತಿಯ ಸಮಸ್ಯೆಗಳನ್ನು ತಂದೊಡ್ಡಬಹುದು.
ಮಧುಮೇಹ ತಡೆಗೆ ಕೆಲವು ನೈಸರ್ಗಿಕ ಔಷಧಿಗಳನ್ನು ಕೂಡಾ ಸೇವಿಸಬಹುದು. ಇವುಗಳು ಯಾವುದೇ ಅಡ್ಡ ಪರಿಣಾಮವಿಲ್ಲದೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದು.
ಇದೊಂದು ಹೂವನ್ನು ನಿತ್ಯ ಮುಂಜಾನೆ ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ಸಂಪೂರ್ಣವಾಗಿ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು. ಈ ಹೂವು ಮಧುಮೇಹ ರೋಗಿಗಳಿಗೆ ಅಮೃತ ಇದ್ದ ಹಾಗೆ.
ಸದಾ ಪುಷ್ಪದ ಹೂವುಗಳು ಮಧುಮೇಹ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಹೂಗಳನ್ನು ಸೇವಿಸುವುದರಿಂದ ಮೇದೋಜೀರಕ ಗ್ರಂಥಿಯ ಬೀಟಾ ಕೋಶಗಳು ಕ್ರಿಯಾಶೀಲವಾಗುತ್ತವೆ.ಇದು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ.
ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಸರಿಯಾಗಿದ್ದರೆ, ರಕ್ತದಲ್ಲಿನ ಸಕ್ಕರೆಯನ್ನು ಬಹಳ ಸುಲಭವಾಗಿ ನಿಯಂತ್ರಿಸಬಹುದು. ಹಾಗಾಗಿ ಸದಾ ಪುಷ್ಪ ಮಧುಮೇಹ ರೋಗಿಗಳಿಗೆ ಬಹಳ ಪರಿಣಾಮಕಾರಿ ಮನೆ ಮದ್ದು.
ಇನ್ನು ಈ ಹೂವುಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗುವುದು. ಇದನ್ನು ಚಹಾದ ರೂಪದಲ್ಲಿ ಮಾತ್ರ ಸೇವಿಸಬೇಕು.
1 ರಿಂದ 2 ಕಪ್ ನೀರು ತೆಗೆದುಕೊಂಡು ಅದರಲ್ಲಿ ಹೂವುಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ನೀರು ಅರ್ಧದಷ್ಟಾದ ಮೇಲೆ ಗ್ಯಾಸ್ ನಿಂದ ಇಳಿಸಿ ಫಿಲ್ಟರ್ ಮಾಡಿ ಕುಡಿಯಿರಿ. ಅಗತ್ಯ ಎನಿಸಿದರೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಬಹುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.