ನಿರೂಪಕಿ ಅನುಶ್ರೀ ಈ ಮಟ್ಟದ ಯಶಸ್ಸು ಪಡೆದಿರುವುದಕ್ಕೆ ಕಾರಣ ಈ ಒಬ್ಬ ವ್ಯಕ್ತಿ! ಇವರನ್ನು ಮುಂದಿಟ್ಟುಕೊಂಡೇ ತೆಗೆದುಕೊಳ್ಳುತ್ತಾರೆ ಪ್ರತಿ ನಿರ್ಧಾರ !

Wed, 17 Apr 2024-12:31 pm,

ಅನುಶ್ರೀ ಕರಾವಳಿ ಬೆಡಗಿ. ಮಂಗಳೂರಿನ ಈ ಸುಂದರಿ ಇಂದು ಕರ್ನಾಟಕದ ಮನೆ ಮಗಳಾಗಿ ಬೆರೆತು ಹೋಗಿದ್ದಾರೆ. ವೀಕೆಂಡ್ ಬಂದರೆ ಕರುನಾಡಿನ ಪ್ರತಿ ಮನೆಯಲ್ಲಿಯೂ ಈಕೆಯದ್ದೇ ಸದ್ದು. ಕೆಲವೊಂದು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ಇಂದು ಅನುಶ್ರೀ ಇಡೀ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿ ಎಂದು ಹೇಳಲಾಗುತ್ತದೆ. ಹಾಗಾಗಿ ಹಣ- ಖ್ಯಾತಿ ಎರಡನ್ನೂ ಹೊಂದಿರುವ ಅದ್ಭುತ ಪ್ರತಿಭೆ ಎಂದರೆ ತಪ್ಪಲ್ಲ. 

ಅಂದ ಹಾಗೆ ಅನುಶ್ರೀ ಸಿರಿವಂತಿಕೆಯೊಂದಿಗೆ ಬೆಳೆದು ಬಂದವರಲ್ಲ.ತನ್ನ ಬಾಲ್ಯದಿಂದಲೇ ಕಡು ಕಷ್ಟಗಳನ್ನು ಕಂಡು ಅನುಭವಿಸಿದ್ದಾರೆ.ಶಾಲೆಗೆ ಹೋಗುತ್ತಿದ್ದ ವೇಳೆಯೇ ಚಾಕ್ಲೆಟ್ ರ್ಯಾಪರ್ ಕಟ್ಟುವ ಕೆಲಸವನ್ನೂ ಮಾಡಿದ್ದರಂತೆ. 

ಆದರೆ ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಅನುಶ್ರೀ ಬೆಳೆದಿದ್ದಾರೆ. ಯಾವ ಕಾರ್ಯಕ್ರಮವೇ ಆಗಿರಲಿ ಅಲ್ಲಿ ಅನುಶ್ರೀ ನಿರೂಪಣೆ ಇದ್ದರೆ  ಆ ಕಾರ್ಯಕ್ರಮಕ್ಕೊಂದು ಕಳೆ.    

ಅನುಶ್ರೀಗೆ ಅವರ ತಾಯಿಯೇ ಎಲ್ಲಾ. ಹಾಗಾಗಿ ತಾಯಿಗೆ ಕಷ್ಟ ಸೋಕದಂತೆ ನೋಡಿಕೊಳ್ಳಬೇಕು ಎನ್ನುವ ಅವರ ಇರಾದೆಯೇ ಅವರನ್ನು ಇಂದು ಈ ಮಟ್ಟಕ್ಕೆ ಬೆಳೆಸಿದೆ. 

ತನ್ನ ಹಿಂದಿರುವ ಶಕ್ತಿ ತನ್ನ ತಾಯಿ ಎನ್ನುವುದನ್ನು ಅನುಶ್ರೀ ಬಹಳಷ್ಟು ಬಾರಿ ಹೇಳಿದ್ದಾರೆ. ತನ್ನ ತಾಯಿ ಮೇಲಿನ ಪ್ರೀತಿ, ತನ್ನಲ್ಲಿರುವ ಪ್ರತಿಭೆ ಇವೆರಡನ್ನೂ  ಮುಂದಿಟ್ಟುಕೊಂಡು ಮುನ್ನುಗ್ಗುತ್ತಿರುವ ಈ ಸುಂದರಿ ಇಂದು ಕರ್ನಾಟಕದ ಮಗಳಾಗಿ ಗುರತಿಸಿಕೊಂಡಿದ್ದಾರೆ.      

ZEENEWS TRENDING STORIES

By continuing to use the site, you agree to the use of cookies. You can find out more by Tapping this link