ಇಹ ಲೋಕ ತ್ಯಜಿಸಿದ ಅಚ್ಚಕನ್ನಡ ನಿರೂಪಕಿ : ಅಪರ್ಣಾ ವೈಯಕ್ತಿಕ ಬದುಕಲ್ಲಿ ಇವೆಲ್ಲಾ ನಡೆದಿತ್ತು

Fri, 12 Jul 2024-11:25 am,

ಕ್ಯಾನ್ಸರ್ ಎನ್ನುವ ಮಹಾ ಮಾರಿ  ಅಚ್ಚ ಕನ್ನಡದ ನಿರೂಪಕಿ ಅಪರ್ಣಾ ಅವರನ್ನು ಬಾರದ ಲೋಕಕ್ಕೆ ಕರೆದೊಯ್ದಿದೆ.ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್ ನೊಂದಿಗೆ ಹೋರಾಡುತ್ತಿದ್ದ ಅಪರ್ಣಾ ಇಹ ಲೋಕ ತ್ಯಜಿಸಿದ್ದಾರೆ.   

ಅಪರ್ಣಾ 1984ರಲ್ಲಿ ಬಿಡುಗಡೆಯಾದ ಮಸಣದ ಹೂವು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು. ಪುಟ್ಟಣ್ಣ ಕಣಗಾಲ್ ಸಿನಿಮಾ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರೂ ಅವಕಾಶಗಳು ಇವರನ್ನು ಅರಸಿ ಬರಲಿಲ್ಲ. ಇವರು ನಟಿಸಿದ್ದು ಕೇವಲ 10 ಸಿನಿಮಾಗಳಲ್ಲಿ.

ಇನ್ನು ಇವರ ನಿರೂಪಣಾ ಶೈಲಿಯಲ್ಲಿ ಹುಡುಕಿದರೂ ಹುಳುಕು ಸಿಗದು.   ಕನ್ನಡ ಭಾಷೆಯನ್ನು ನಿರ್ಗಳವಾಗಿ ಮಾತನಾಡುತ್ತಿದ್ದ ಅಪರ್ಣಾ ಅಪಾರ ಅಭಿಮಾನಿ ಬಳವನ್ನ ಹೊಂದಿದ್ದರು.ಹಲವು ದಶಕಗಳ ಕಾಲ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನ ನಿರೂಪಿಸಿದ್ದರು.  

1998 ರಲ್ಲಿ ದೀಪಾವಳಿ ಕಾರ್ಯಕ್ರವೊಂದನ್ನು ಎಂಟು ಗಂಟೆಗಳ ನಿರೂಪಣೆ ಮಾಡಿದ ದಾಖಲೆ ಅಪರ್ಣಾ ಮುಡಿಯಲ್ಲಿದೆ.   

ದೊಡ್ಡ ಪರದೆಯಲ್ಲಿ ಸಿಗದ ಯಶಸ್ಸು ಇವರಿಗೆ ಕಿರು ತೆರೆ ತಂದು ಕೊಟ್ಟಿತು. ಕಿರು ತೆರೆ ಮೂಲಕ ರಾಜ್ಯದ ಮೂಳೆ ಮೂಲೆಗೂ ಇವರು ಚಿರಪರಿಚಿತ ಎನಿಸಿಕೊಂಡರು

ಇನ್ನು ಇವರು ಅನೇಕ ಧಾರವಾಹಿಗಳಲ್ಲಿ ಕೂಡಾ ನಟಿಸಿದ್ದಾರೆ. ಮುಕ್ತ’, ‘ಮೂಡಲಮನೆ’,‘ಇವಳು ಸುಜಾತ’ ಧಾರಾವಾಹಿಗಳಲ್ಲಿ ಅಪರ್ಣಾ ಕಾಣಿಸಿಕೊಂಡಿದ್ದರು.

‘ಬಿಗ್ ಬಾಸ್ ಕನ್ನಡ ಸೀಸನ್ 1’ ರಿಯಾಲಿಟಿ ಶೋನಲ್ಲಿಯೂ ಮಿಂಚಿದ್ದರು. ಇಲ್ಲಿ ಸುದೀಪ್ ಅಪರ್ಣಾ ಅವರನ್ನು ಬಿಗ್ ಮನೆಯ ಅನ್ನಪೂರ್ಣೆ ಎಂದೇ ಕರೆಯುತ್ತಿದ್ದರು. 

ಇನ್ನು ‘ಮಜಾ ಟಾಕೀಸ್’ ನಲ್ಲಿ ಹಾಸ್ಯ ಅಭಿನಯದ ಮೂಲಕವೂ ಮನೆ ಮಾತಾಗಿದ್ದರು. ಒನ್ ಅಂಡ್ ಓನ್ಲಿ ವರಲಕ್ಷಿಯಾಗಿ ಎಲ್ಲರ ಗಮನ ಸೆಳೆದಿದ್ದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link