Personality by Zodiac Sign: ಈ 5 ರಾಶಿಗಳ ಜನರು ಹೆಚ್ಚು ಸಂಪಾದಿಸಿದರೂ ಬಡವರಾಗಿರುತ್ತಾರೆ, ನೀವೂ ಇದ್ದೀರಾ ನೋಡಿ?
ಮಿಥುನ ರಾಶಿಯ ಜನರು ದುಬಾರಿ ಮತ್ತು ಕೆಲವೊಮ್ಮೆ ಅವರು ಕೆಟ್ಟ ಸಂದರ್ಭಗಳು ಎದುರಾದಾಗ ಬಹಳಷ್ಟು ಹಣ ಖರ್ಚು ಮಾಡುತ್ತಾರೆ. ಈ ಜನರು ತಮ್ಮ ಜೀವನ ಪರಿಸ್ಥಿತಿಗಳಿಗೆ ಯೋಗ್ಯವಾಗಿ ಹಣವನ್ನು ಖರ್ಚು ಮಾಡುತ್ತಾರೆ. ಅದಕ್ಕೇ ಅವರ ಕೈಯಲ್ಲಿ ಸಾಕಷ್ಟು ಹಣವೇ ಇರುವುದಿಲ್ಲ.
ಸಿಂಹ ರಾಶಿಯವರು ತಮ್ಮ ಹಾಗೂ ಇತರರಿಗಾಗಿ ಸಾಕಷ್ಟು ಹಣವನ್ನು ವ್ಯಯಿಸುತ್ತಾರೆ. ಈ ವಿಚಾರದಲ್ಲಿ ಹಲವು ಬಾರಿ ಅವರೇ ಹಣದ ಸಮಸ್ಯೆ ಎದುರಿಸುತ್ತಾರೆ. ಈ ಜನರು ಶಾಪಿಂಗ್ ಮಾಡಲು ತುಂಬಾ ಇಷ್ಟಪಡುತ್ತಾರೆ, ಇವರು ಅನೇಕ ಬಾರಿ ಅನುಪಯುಕ್ತ ವಸ್ತುಗಳನ್ನು ಖರೀದಿಸುತ್ತಾರೆ.
ತುಲಾ ರಾಶಿಯ ಜನರು ಪ್ರತಿಯೊಂದು ವಿಷಯದಲ್ಲೂ ಬಹಳ ಸಮತೋಲಿತರಾಗಿರುತ್ತಾರೆ. ಆದರೆ ಅವರು ಹಣವನ್ನು ನಿರ್ವಹಿಸುವಲ್ಲಿ ಹಿಂದುಳಿದಿರುತ್ತಾರೆ. ಕೈತುಂಬಾ ದುಡ್ಡು ಸಂಪಾದಿಸಿದರೂ ಇವರಿಗೆ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಸ್ವಲ್ಪ ಎಚ್ಚರಿಕೆ ವಹಿಸಿದರೆ ಅವರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದಾಗಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಿದರೆ ಇವರ ಬದುಕು ಬಂಗಾರವಾಗುತ್ತದೆ.
ವೃಶ್ಚಿಕ ರಾಶಿಯವರು ತಮ್ಮ ಜೀವನಶೈಲಿಯಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಆದರೆ ಇತರರಿಗೆ ಖರ್ಚು ಮಾಡುವಲ್ಲಿಇವರು ತುಂಬಾ ಜಿಪುಣರು. ಈ ಜನರು ಭವಿಷ್ಯಕ್ಕಾಗಿ ಉಳಿಸುವ ಬದಲು ಇಂದೇ ನಮ್ಮ ಜೀವನ ಅಂತಾ ದುಂದುವೆಚ್ಚ ಮಾಡುತ್ತಾರೆ. ಐಷಾರಾಮಿಯಾಗಿ ಬದುಕಲು ಬಯಸುವ ಇವರ ಕೈಯಲ್ಲಿ ಹೆಚ್ಚು ದುಡಿದರೂ ಹಣ ನಿಲ್ಲುವುದಿಲ್ಲ.
ಕುಂಭ ರಾಶಿಯವರು ಹಣ ಖರ್ಚು ಮಾಡಿ ವಸ್ತುಗಳ ಖರೀದಿಯಲ್ಲಿ ಸಂತೋಷವನ್ನು ಕಾಣುತ್ತಾರೆ. ಇದಕ್ಕಾಗಿಯೇ ಅವನು ಏನನ್ನಾದರೂ ಖರೀದಿಸುತ್ತಲೇ ಇರುತ್ತಾರೆ. ಇವರು ಹಣ ಉಳಿಸಲು ಪ್ರಯತ್ನಿಸಿದರೂ ಅದು ಸಫಲವಾಗುವುದಿಲ್ಲ. ದುಂದುವೆಚ್ಚ ಮಾಡುವ ಇವರ ಜೀವನದಲ್ಲಿ ಆರ್ಥಿಕ ಸಮಸ್ಯೆ ಸಾಮಾನ್ಯವಾಗಿರುತ್ತದೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)