ದೇಶದ ಜನರಿಗೆ ಸಂತಸದ ಸುದ್ದಿ! ಸೆಪ್ಟೆಂಬರ್‌ 1 ರಿಂದ ಎಲ್‌ಪಿಜಿ ಸಿಲಿಂಡರ್‌, ಪೆಟ್ರೋಲ್‌, ಡಿಸೆಲ್‌ ಬೆಲೆಯಲ್ಲಿ ಭಾರಿ ಇಳಿಕೆ?

Sat, 31 Aug 2024-8:39 am,

ಸಿಲಿಂಡರ್‌, ಪೆಟ್ರೋಲ್‌ ಹಾಗೂ ಡಿಸೆಲ್‌ ಬೆಲೆಗಳು ಮಧ್ಯಮ ವರ್ಗದ ಜನರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಆಗಸ್ಟ್‌ನಲ್ಲಿ ಬೆಲೆ ಏರಿಕೆ ಜನರಲ್ಲಿ ತಲೆ ಬಿಸಿ ಮಾಡಿತ್ತು, ಆರೆ ಇದೀಗ ಸೆಪ್ಟೆಂಬರ್‌ ತಿಂಗಳ ಆರಂಭಕ್ಕೂ ಮುನ್ನವೇ ಸರ್ಕಾರ ಎಲ್‌ಪಿಜಿ ಸಿಲಿಂಡರ್‌, ಪೆಟ್ರೋಲ್‌ ಹಾಗೂ ಡಿಸೆಲ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ.

ಜನರ ಆಗರೋಗ್ಯವನ್ನು ನೆನಪಿನಲ್ಲಿಟ್ಟುಕೊಂಡು ಸರ್ಕಾರ ದೇಸದ ಜನತೆಗೆ ಶುಭ ಸುದ್ದಿ ನೀಡಲು ಮುಂದಾಗಿದೆ. ಮಧ್ಯಮ ವರ್ಗದವರ ಖರ್ಚು ವೆಚ್ಚಗಳ ಮೇಲೆ ಬೆಲೆ ಏರಿಕೆ ಬಿಸಿ ತಟ್ಟಿದ ಕಾರಣ, ಬೆಲೆಗಳನ್ನು ತಗ್ಗಿಸಲು ಕೇಂದ್ರ ಸರ್ಕಾರ ಹೊಸ ತಂತ್ರ ರೂಪಿಸಿದೆ.

ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಮಧ್ಯಮ ವರ್ಗದ ಜನರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಸೆಪ್ಟೆಂಬರ್ ತಿಂಗಳು ಎರಡು ದಿನಗಳಲ್ಲಿ ಪ್ರಾರಂಭವಾಗುತ್ತದೆ. ಹೊಸ ಮಾಸದ ಮೊದಲ ದಿನವೇ ಜನಸಾಮಾನ್ಯರಿಗೆ ಸರ್ಕಾರ ಶುಭ ಸುದ್ದಿ ನೀಡಲಿದೆ.  

ಸರ್ಕಾರವು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಗೃಹ ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಸರ್ಕಾರ ಕಡಿಮೆ ಮಾಡಬಹುದು. ಇದರ ಜತೆಗೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ. ಈ ಮಾತುಕತೆಗಳು ನಿಜವಾದರೆ ಈ ಬದಲಾವಣೆಗಳು ಜನರ ಮೇಲೆ ಹಣದುಬ್ಬರದ ಪ್ರಭಾವವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ.

ಎಲ್‌ಪಿಜಿ ಗ್ಯಾಸ್ ಬೆಲೆಯನ್ನು ಸರ್ಕಾರ ಪ್ರತಿ ತಿಂಗಳು ನಿರ್ಧರಿಸುತ್ತದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1 ರಂದು ಅಡುಗೆ ಅನಿಲ ಬೆಲೆಗಳನ್ನು ಪರಿಷ್ಕರಿಸುತ್ತವೆ. 

ಸೆಪ್ಟೆಂಬರ್ ಮೊದಲ ದಿನದಂದು ದೇಶದ ಕೋಟ್ಯಂತರ ಗ್ರಾಹಕರಿಗೆ ಸರ್ಕಾರ ಹಣದುಬ್ಬರದಿಂದ ಪರಿಹಾರ ನೀಡಲಿದೆ. ದೇಶೀಯ ಎಲ್ ಪಿಜಿ ಸಿಲಿಂಡರ್ ಬೆಲೆ ರೂ.50ರಷ್ಟು ಕಡಿಮೆಯಾಗಬಹುದು. ವಾಣಿಜ್ಯ ಸಿಲಿಂಡರ್ ಬೆಲೆ ರೂ.60ರಿಂದ ರೂ.70ರಷ್ಟು ಇಳಿಕೆಯಾಗಲಿದೆ ಎಂದು ವರದಿಗಳು ತಿಳಿಸಿವೆ. ವ್ಯಾಪಾರ ದರ್ಜೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಆಗಸ್ಟ್‌ನಲ್ಲಿ 8.50 ರೂ.ಗಳಷ್ಟು ಏರಿಕೆಯಾಗಿದ್ದು, ಜುಲೈನಲ್ಲಿ 30 ರೂ.ಗಳಷ್ಟು ಇಳಿಕೆಯಾಗಿದೆ.

ಪ್ರಧಾನಮಂತ್ರಿ ಉಜ್ವಲಾ ಯೋಜನೆಯು ಈಗಾಗಲೇ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ರೂ.300 ಸಬ್ಸಿಡಿಯನ್ನು ನೀಡುತ್ತಿದೆ.

ಏಜೆನ್ಸಿಯಿಂದ ಸಿಲಿಂಡರ್ ಖರೀದಿಸುವಾಗ ಪೂರ್ಣ ಬೆಲೆಯನ್ನು ಪಾವತಿಸಬೇಕು. ಆದರೆ ಕೆಲವು ದಿನಗಳ ನಂತರ ರೂ.300 ಸಹಾಯಧನ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದ ಕೋಟ್ಯಂತರ ಜನರು ಪ್ರಯೋಜನ ಪಡೆಯುತ್ತಿದ್ದಾರೆ.

ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿತಗೊಳಿಸಲು ಯೋಜಿಸುತ್ತಿವೆ ಎಂದು ಕೆಲವು ವರದಿಗಳು ಹೇಳುತ್ತವೆ.   

ಸರಕಾರ ಪೆಟ್ರೋಲ್ ಮೇಲೆ 6 ರೂ., ಡೀಸೆಲ್ ಮೇಲೆ 5 ರೂ. ಇಳಿಕೆ ಮಾಡುವ ಸಾಧ್ಯತೆ ಇದೆ. ಹೀಗಾದರೆ ಜನಸಾಮಾನ್ಯರಿಗೆ ಭಾರೀ ನೆಮ್ಮದಿ ಸಿಗಲಿದೆ. ಈ ಬಗ್ಗೆ ಸರ್ಕಾರ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಕಚ್ಚಾ ತೈಲ ಬೆಲೆ ಈ ಊಹಾಪೋಹಗಳಿಗೆ ಉತ್ತೇಜನ ನೀಡುತ್ತಿದೆ.  

ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ವೇತನದ ದರದಲ್ಲಿ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ನೀಡಲಾಗುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link