ಸರ್ಕಾರದ ಅತಿ ದೊಡ್ಡ ನಿರ್ಧಾರ !ಇನ್ನು ಎಟಿಎಂನಿಂದಲೇ ಪಡೆಯಬಹುದು ಪಿಎಫ್ ಹಣ
ಉದ್ಯೋಗಿಗಳಿಗೆ ಖುಷಿ ನೀಡುವ ಘೋಷಣೆಯನ್ನು ಸರ್ಕಾರ ಮಾಡಿದೆ. ಈ ಘೋಷಣೆಯಿಂದ ಉದ್ಯೋಗಿಗಳಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ.
ಸರ್ಕಾರದ ಈ ನಿರ್ಧಾರದಿಂದ ಈಗ ಜನರು ಪಿಎಫ್ ಹಣವನ್ನು ಹಿಂಪಡೆಯಲು ಪಿಎಫ್ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ. ಈಗ ಎಟಿಎಂ ಮೂಲಕವೇ ಪಿಎಫ್ ಹಣವನ್ನು ಸುಲಭವಾಗಿ ಹಿಂಪಡೆಯುವುದು ಸಾಧ್ಯವಾಗುತ್ತದೆ.
ಈ ಮೂಲಕ ಪಿಎಫ್ ಹಣ ಹಿಂಪಡೆಯಲು ಇದ್ದ ದೊಡ್ಡ ತಲೆನೋವನ್ನು ಹೋಗಲಾಡಿಸಲು ಸರ್ಕಾರ ಉಪಕ್ರಮ ಕೈ ಗೊಂಡಿದೆ.
ಕಾರ್ಮಿಕ ಕಾರ್ಯದರ್ಶಿ ಸುಮಿತಾ ದಾವ್ರಾ ಈ ಸೌಲಭ್ಯಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ನೀಡಿದ್ದು, ಮುಂದಿನ ವರ್ಷ ಅಂದರೆ 2025 ರಿಂದ ನೌಕರರು ನೇರವಾಗಿ ಎಟಿಎಂನಿಂದ ಪಿಎಫ್ ಹಣವನ್ನು ಪಡೆಯುವ ಸೌಲಭ್ಯವನ್ನು ಪಡೆಯಲಿದ್ದಾರೆ ಎಂದು ಹೇಳಿದರು.
ಅಂದರೆ ಇನ್ನು ಕೇವಲ ಒಂದು ತಿಂಗಳ ನಂತರ, ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿಯನ್ನು ನೇರವಾಗಿ ಎಟಿಎಂನಿಂದ ಹಿಂಪಡೆಯಲು ಸಾಧ್ಯವಾಗುತ್ತದೆ. ಸರ್ಕಾರದ ಈ ಕ್ರಮದಿಂದ ದೇಶದ 7 ಲಕ್ಷ ಜನರಿಗೆ ಅನುಕೂಲವಾಗಲಿದೆ.
PF ಕ್ಲೈಮ್‌ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಮತ್ತು ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೈಗೊಂಡ ಕ್ರಮ ಇದಾಗಿದೆ.