Visit To Space Station: ಪ್ರವೇಶಿಸಲಿರುವ ಮೊಟ್ಟಮೊದಲ ಖಾಸಗಿ ವ್ಯಕ್ತಿಗಳಿವರು, ಯಾತ್ರೆಗೆ ನೀಡಿದ ಹಣ ಎಷ್ಟು ಗೊತ್ತಾ?
ಮೊದಲ ಖಾಸಗಿ ಬಾಹ್ಯಾಕಾಶ ನಿಲ್ದಾಣದ ಸಿಬ್ಬಂದಿಗಳನ್ನು ಮಂಗಳವಾರ ಪರಿಚಯಿಸಲಾಗಿದೆ. ಸ್ಪೇಸ್‌ಎಕ್ಸ್ ರಾಕೆಟ್ (SpaceX rocket)ನೊಂದಿಗೆ ಹಾರಲು ಮೂವರು ಖಾಸಗಿ ಜನರನ್ನು ಸಹ ಆಯ್ಕೆ ಮಾಡಲಾಗಿದೆ, ಅಂದರೆ ಮುಂದಿನ ವರ್ಷ ಮೂವರ ಖಾಸಗಿ ಪ್ರಯಾಣಿಕರು ಬಾಹ್ಯಾಕಾಶ ಕೇಂದ್ರಕ್ಕೆ ಹೋಗುತ್ತಾರೆ.
ಈ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಭೂಮಿಯಿಂದ ಸುಮಾರು 420 ಕಿ.ಮೀ ದೂರದಲ್ಲಿದೆ. ಈ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡುವುದು ಹಲವರ ಕನಸಾಗಿದೆ ಆದರೆ. ಪ್ರಸ್ತುತ ಈ ಅವಕಾಶ ಕೇವಲ ಮೂರು ಜನರಿಗೆ ಮಾತ್ರ ಸಿಗುತ್ತಿದೆ. ಈ ಯಾತ್ರೆಗಾಗಿ ಜನರು ಭಾರಿ ಪ್ರಮಾಣದಲ್ಲಿ ಹಣ ನೀಡಲು ಸಿದ್ಧರಿದ್ದಾರೆ.
ಈ ಸ್ಪೇಸ್ ಯಾತ್ರೆಗೆ ಆಯ್ಕೆಯಾದ ಮೂವರು ಕೋಟ್ಯಾಧಿಪತಿಯಾಗಿದ್ದಾರೆ. ಈ ಯಾತ್ರೆಗಾಗಿ ಅವರು ಪ್ರತ್ಯೇಕ 400 ಕೋಟಿ ರೂ. ಶುಲ್ಕ ಪಾವತಿಸಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಲಿರುವ ಮೂವರು ವ್ಯಕ್ತಿಗಳ ಹೆಸರು 1. ಐಟಾನ್ ಸ್ಟಿಬೆ (Eytan Stibbe) 2. ಮಾರ್ಕ್ ಪೈಥಿ (Mark Pathy) ಹಾಗೂ 3. ಲ್ಯಾರಿ ಕಾನರ್ (Larry Connor) ಇದೆ. ಈ ಮೂವರು ಮುಂದಿನ ವರ್ಷ ಸ್ಪೇಸ್ ಸ್ಟೇಷನ್ ಯಾತ್ರಗೆ ತೆರಳಲಿದ್ದಾರೆ.
NASA ದ ಓರ್ವ ಮಾಜಿ ಬಾಹ್ಯಾಕಾಶ ಯಾತ್ರಿ ಈ ಮೂವರ ತಂಡದ ನೇತೃತ್ವ ವಹಿಸಲಿದ್ದಾರೆ. ಸದ್ಯ ಅವರು ಎಕ್ಸಿ ಓಂ ಸ್ಪೇಸ್ ಗಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಪ್ರಸ್ತಾವಿಸಲಾಗಿರುವ ಈ ಯಾತ್ರೆಯ ವ್ಯವಸ್ಥೆಯನ್ನು ಹ್ಯೂಸ್ಟನ್ ಕಂಪನಿ ಮಾಡಿದೆ.