7th Pay Commission: ಹೋಳಿ ಹಬ್ಬಕ್ಕೂ ಮುನ್ನ ಸಿಗಲಿದೆ ಈ ಡಬಲ್ Good News
ಜನವರಿ-ಜೂನ್ ಅವಧಿಯ ತುಟ್ಟಿಭತ್ಯೆಯನ್ನು ಸರ್ಕಾರ ಶೇ.4 ರಷ್ಟು ಘೋಷಿಸುವ ಸಾಧ್ಯತೆ ಇದೆ. ವಾರ್ಷಿಕವಾಗಿ ಸರ್ಕಾರ ಎರಡು ಬಾರಿ ತುಟ್ಟಿಭತ್ಯೆ ದರವನ್ನು ಪರಿಷ್ಕರಿಸುತ್ತದೆ. ಕಾಲಕಾಲಕ್ಕೆ ಹೆಚ್ಚಾಗುವ ಹಣದುಬ್ಬರದಿಂದ ನೌಕರರಿಗೆ ನೆಮ್ಮದಿ ನೀಡುವುದು ಸರ್ಕಾರದ ಉದ್ದೇಶವಾಗಿರುತ್ತದೆ. ಜನವರಿ-ಜೂನ್ ಅವಧಿಯಲ್ಲಿ ಮೊದಲ ಬಾರಿಗೆ ಹಣದುಬ್ಬರದಲ್ಲಿ ಬದಲಾವಣೆಯಾಗುತ್ತದೆ. ಜುಲೈ-ಡಿಸೆಂಬರ್ ಅವಧಿಯಲ್ಲಿ ಎರಡನೇ ಬದಲಾವಣೆ ಗಮನಿಸಲಾಗುತ್ತದೆ.
ವರ್ಷ 2020 ರಲ್ಲಿ ಕೊರೊನಾ ಪ್ರಕೋಪದ ಕಾರಣ ಸರ್ಕಾರ ನಿಲ್ಲಿಸಿದ್ದ DA ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ,. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ ಶೇ.4 ರಷ್ಟು ಕಡಿಮೆ DA ಅಂದರೆ ಶೇ.17 ತುಟ್ಟಿಭತ್ಯೆ ಸಿಗುತ್ತಿದೆ.
ಒಂದು ವೇಳೆ ಸರ್ಕಾರ ಜುಲೈ-ಡಿಸೆಂಬರ್ 2020ರ ಅವಧಿಯಲ್ಲಿ ನಿಲ್ಲಿಸಲಾಗಿದ್ದ ಶೇ.4 ರಷ್ಟು DA ಮತ್ತೆ ನೀಡಲು ಆರಂಭಿಸಿದರೆ ಹಾಗೂ ಜನವರಿ-ಜೂನ್ 2021ಅವಧಿಯ ಶೇ. 4 ರಷ್ಟು ತುಟ್ಟಿಭತ್ಯೆಯನ್ನು ಅದಕ್ಕೆ ಸೇರಿಸಿದರೆ, ಕೇಂದ್ರ ಸರ್ಕಾರಿ ನೌಕರರಿಗೆ ನೇರವಾಗಿ ಶೇ.8 ರಷ್ಟು DA ಏರಿಕೆಯ ಲಾಭ ಸಿಗಲಿದೆ. ಅಂದರೆ, ಈಗಿರುವ ಶೇ.17ರಷ್ಟು ತುಟ್ಟಿಭತ್ಯೆಗೆ ಶೇ.8ರಷ್ಟು ಏರಿಕೆಯಾದರೆ, ನೌಕರರ ತುಟ್ಟಿಭತ್ಯೆ ಶೇ.25ರಷ್ಟಾಗಲಿದೆ. ಇದರರ್ಥ ನೌಕರರಿಗೆ ಸಿಗುವ ವೇತನ ಹಾಗೂ ಪಿಂಚಣಿದಾರರಿಗೆ ಸಿಗುವ ಪಿಂಚಣಿಯಲ್ಲಿ ಭಾರಿ ಏರಿಕೆಯಾಗುವ ನಿರೀಕ್ಷೆ ಇದೆ.
7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕೇಂದ್ರೀಯ ನೌಕರರಿಗೆ ಸಿಗುವ ಟ್ರಾವೆಲ್ ಅಲೌನ್ಸ್ (Travel Allowance-TA) ಕೂಡ ತುಟ್ಟಿಭತ್ಯೆಯ (Dearness Allowance-DA) ಜೊತೆಗೆ ಏರಿಕೆಯಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಸಿಗುವ TA ನಲ್ಲಿಯೂ ಕೂಡ ಶೇ.8ರಷ್ಟು ಏರಿಕೆಯಾಗಲಿದೆ.