Dearness Allowance Hike: ಶೇ.13ರಷ್ಟು ಹೆಚ್ಚಳದ ಜೊತೆಗೆ 5 ವರ್ಷದ ಅರಿಯರ್ ಸಿಗುವ ಸಾಧ್ಯತೆ
ಶೇ.13 ರಷ್ಟು DA ಹೆಚ್ಚಾಗುವ ಸಾಧ್ಯತೆ : ನಮ್ಮ ಸಹಯೋಗಿ ವೆಬ್ ಸೈಟ್ ಝೀ ನ್ಯೂಸ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ರಾಜ್ಯ ಸರ್ಕಾರಿ ನೌಕರರರ DA ಶೇ.13 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ರಾಜ್ಯ ಸರ್ಕಾರಿ ನೌಕರರಿಗೆ ಭಾರಿ ನೆಮ್ಮದಿ ಸಿಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಈ ವಿಷಯದಲ್ಲಿ ಸರ್ಕಾರದ ಆರ್ಥಿಕ ವಿಭಾಗ ಈಗಾಗಲೇ ಕಾರ್ಯನಿರ್ವಹಿಸಲು ಆರಂಭಿಸಿದೆ ಎನ್ನಲಾಗಿದೆ.
ಶೇ.75 ರಷ್ಟು ಅರಿಯರ್ ಕ್ಲಿಯರ್ ಆಗಲಿದೆ - ವರದಿಗಳ ಪ್ರಕಾರ 7th Pay Commissionನ ಬಾಕಿ ಉಳಿದ ಹಣದ ಶೇ.75ರಷ್ಟು ಅರಿಯರ್ ಸರ್ಕಾರ ಕ್ಲಿಯರ್ ಮಾಡುವ ಸಾಧ್ಯತೆ ಇದೆ. ಕಳೆದ ವರ್ಷವೇ ಸರ್ಕಾರ ಬಾಕಿ ಹಣದ ಶೇ.25ರಷ್ಟನ್ನು ನೌಕರರಿಗೆ ಪಾವತಿಸಿತ್ತು. ಸರ್ಕಾರದ ಅಧಿಕಾರಿಗಳು ಹೇಳುವುದನ್ನು ನಂಬುವುದಾದರೆ ಸರ್ಕಾರ ಬಾಕಿ ಹಣವನ್ನು ಮೂರು ಕಂತುಗಳಲ್ಲಿ ಪಾವತಿಸಲಿದೆ. ಈಗಾಗಲೇ ಮೊದಲ 2 ಕಂತುಗಳನ್ನು ಜಾರಿಗೊಳಿಸಲಾಗಿದೆ.
ಶೇ.17ರಷ್ಟು ತುಟ್ಟಿಭತ್ಯೆಯ ಪೇಮೆಂಟ್ - 7th Pay Commission - ಏತನ್ಮಧ್ಯೆ ಈ ಕುರಿತು ಮಾಹಿತಿ ನೀಡಿರುವ, ಎಜಿ ಆಫೀಸ್ ಬ್ರದರ್‌ಹುಡ್‌ನ ಮಾಜಿ ಅಧ್ಯಕ್ಷ ಮತ್ತು ಸಿಟಿಜನ್ಸ್ ಬ್ರದರ್‌ಹುಡ್‌ನ ಅಧ್ಯಕ್ಷ ಹರಿಶಂಕರ್ ತಿವಾರಿ ' ಜೂನ್ 2021 ರ ವೇಳೆಗೆ ಡಿಎ ಮತ್ತೆ 3-4% ನಷ್ಟು ಏರಿಕೆಯಾಗಲಿದೆ. ಇದು ಜೂನ್ 2021 ರಲ್ಲಿ ಡಿಎ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದ ನಂತರ ಡಿಎ ಮೀಟರ್ ಅನ್ನು 30-32% ಕ್ಕೆ ಹೆಚ್ಚಿಸಲಿದೆ. ಡಿಎ ಪಾವತಿಯನ್ನು ಪ್ರಸ್ತುತ 17% ಪಾವತಿಸಲಾಗುತ್ತಿದೆ.
ಶೇ.32ರಷ್ಟು ಆಗಲಿದೆ ತುಟ್ಟಿಭತ್ಯೆ- 7th Pay Commission : ಹರಿಶಂಕರ್ ತಿವಾರಿ ಪ್ರಕಾರ, ಜೂನ್ 2021 ರ ವೇಳೆಗೆ ಡಿಎ 30 ರಿಂದ 32% ಕ್ಕೆ ಹೆಚ್ಚಾಗಲಿದೆ. ಇದರಿಂದ ಕೇಂದ್ರ ನೌಕರರ ಡಿಎ ಪಾವತಿಯಲ್ಲಿಯೂ ಕೂಡ ಸುಮಾರು 15% ನಷ್ಟು ಹೆಚ್ಚಳಕ್ಕೆ ಕಾರಣವಾಗಲಿದೆ. ಪ್ರತಿ 6 ತಿಂಗಳಿಗೊಮ್ಮೆ ಕೇಂದ್ರ ಸರ್ಕಾರ ಡಿಎ ದರವನ್ನು ಪರಿಷ್ಕರಿಸುತ್ತದೆ. ಬೇಸಿಕ್ ಪೇ ಅನ್ನು ಬೇಸ್ ಎಂದು ಪರಿಗಣಿಸುವ ಮೂಲಕ ಇದರ ಲೆಕ್ಕವು ಶೇಕಡಾವಾರು ಇರುತ್ತದೆ. ಇದೀಗ ನೌಕರರು ಮತ್ತು ಪಿಂಚಣಿದಾರರು ಪ್ರತ್ಯೇಕ ಡಿಎ ಪಡೆಯುತ್ತಿದ್ದಾರೆ.
ಕೊರೊನಾ ಮಹಾಮಾರಿಯ ಕಾರಣ DA ನಿಲ್ಲಿಸಲಾಗಿದೆ - 7th Pay Commission: ಕೊರೊನಾ ಹೆಮ್ಮಾರಿಯ ಕಾರಣ ಸರ್ಕಾರ ಜನವರಿ 1, 2020ರಿಂದ ಜುಲೈ 1, 2020ರವರೆಗಿನ ತುಟ್ಟಿಭತ್ಯೆ ಹೆಚ್ಚಳವನ್ನು ಫ್ರೀಜ್ ಮಾಡಿದೆ. ಇದರ ಜೊತೆಗೆ ಪಿಂಚಣಿದಾರರ ತುಟ್ಟಿಭತ್ಯೆ ನೆಮ್ಮದಿಯನ್ನು 1 ಜುಲೈ 2021ರವರೆಗೆ ನಿಲ್ಲಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಆರ್ಥಿಕ ವರ್ಷ 2021 -22 ರಲ್ಲಿ ಒಟ್ಟು37 ಸಾವಿರ ಕೋಟಿ ರೂ ಉಳಿತಾಯವಾಗಲಿದೆ.
ತುಟ್ಟಿಭತ್ಯೆಯ ಮೇಲೆ ಅರಿಯರ್ ಇಲ್ಲ- 7th Pay Commission :1 ಜನವರಿ 2020 ರಿಂದ 30 ಜೂನ್ 2021 ರವರೆಗೆ ಯಾವುದೇ ಬಾಕಿ ಇರುವುದಿಲ್ಲ ಎಂದು ಕೇಂದ್ರ ಸರ್ಕಾರದ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ . ಜುಲೈ 2021 ರಲ್ಲಿ DA ಮತ್ತುDRಗೆ ಸಂಬಂಧಿಸಿದ ನಿರ್ಧಾರವನ್ನು ಒಂದೊಂದಾಗಿ ಜಾರಿಗೆ ತರಲಾಗುತ್ತಿದೆ.
ತುರ್ತುಪರಿಸ್ಥಿತಿಯಲ್ಲಿ ನಿಂತುಹೋಗಿತ್ತು DA - 7th Pay Commission : ಕೇಂದ್ರ ಸರ್ಕಾರದ ಆದೇಶದ ಬಳಿಕ ರಾಜ್ಯ ಸರ್ಕಾರಗಳು ಕೂಡ ತಮ್ಮ ನೌಕರರ ಡಿಎ ಅನ್ನು ಸ್ಥಗಿತಗೊಳಿಸಿವೆ. ಈ ಹಿಂದೆ ಸಹ, ತುರ್ತು ಪರಿಸ್ಥಿತಿಯಲ್ಲಿ ಕೂಟ ತುಟ್ಟಿಭತ್ಯೆಯನ್ನು ನಿಲ್ಲಿಸಲಾಗಿತ್ತು ಎಂದು ಹರಿಶಂಕರ್ ತಿವಾರಿ ಹೇಳಿದ್ದಾರೆ. 1975 ರಲ್ಲಿ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಹಣದುಬ್ಬರ ಭತ್ಯೆಯನ್ನು ನಿರ್ಬಂಧಿಸಲಾಗಿತ್ತು. ಆದರೆ ನಂತರ ಅದಕ್ಕೆ ಪುನಶ್ಚೇತನ ನೀಡಿ ಬಿಡುಗಡೆ ಮಾಡಲಾಯಿತು.