LIC Aadhaar Stambh Policy: ನಿತ್ಯ ಕೇವಲ ರೂ.30 ಹೂಡಿಕೆ ಮಾಡಿ, ಲಕ್ಷಾಧಿಪತಿಯಾಗಿ

Fri, 19 Mar 2021-3:07 pm,

1. ಆಧಾರ್ ಸ್ಥಂಭ ಪಾಲಸಿ ವಿವರಗಳು - ಭಾರತೀಯ ಜೀವವಿಮಾ ನಿಗಮದ ಅಧಿಕೃತ ವೆಬ್ ಸೈಟ್ ಆಗಿರುವ licindia.in ನಲ್ಲಿ ನೀಡಲಾಗಿರುವ ಮಾಹಿತಿಯ ಪ್ರಕಾರ LIC Aadhaar Stambh ಒಂದು ರೀತಿಯ ಜೀವವಿಮಾ ಪಾಲಸಿಯಗಿದೆ. ಇದರಲ್ಲಿ ಸುರಕ್ಷತೆ ಹಾಗೂ ಉಳಿತಾಯ ಎರಡರ ಲಾಭ ಕೂಡ ಸಿಗುತ್ತದೆ. ಆದರೆ, ಈ ಪಾಲಸಿ ಕೇವಲ ಪುರುಷರಿಗಾಗಿ ಮಾತ್ರ ಸೀಮಿತವಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆಧಾರ್ ಕಾರ್ಡ್ ಇರುವುದು ಅವಶ್ಯಕ. ಎಲ್ಐಸಿಯ ಈ ಸಣ್ಣ ಉಳಿತಾಯ ಯೋಜನೆಯಲ್ಲಿ ಕೆಲ ರೈಡರ್ ಗಳ ಜೊತೆಗೆ ಡೆತ್ ಹಾಗೂ ಮ್ಯಾಚುರಿಟಿ ಬೆನಿಫಿಟ್ ಕೂಡ ಸಿಗುತ್ತದೆ.

2. ಇಲ್ಲಿದೆ ಈ ಪಾಲಸಿ ವಿಶೇಷತೆ - ಇದೊಂದು ನಾನ್ ಲಿಂಕ್ಡ್ ಹಾಗೂ ಪ್ರಾಫಿಟ್ ಎಂಡೋಮೆಂಟ್ ಅಸುರೆನ್ಸ್  ಪ್ಲಾನ್ ಆಗಿದೆ. ಪಾಲಸಿಯ ಮುಕ್ತಾಯಕ್ಕು ಮೊದಲು ಪಾಲಸಿದಾರರ ಅಕಾಲ ಮೃತ್ಯುವಾದರೆ, ನಾಮಿನಿಗೆ ಡೆತ್ ಬೆನಿಫಿಟ್ ಸಿಗುತ್ತದೆ. ಇದರಿಂದ ಕುಟುಂಬ ಸದಸ್ಯರ ಭವಿಷ್ಯದ ಅಗತ್ಯತೆಗಳು ಪೂರ್ಣಗೊಳ್ಳುತ್ತವೆ. ಇನ್ನೊಂದೆಡೆ ಪಾಲಸಿಧಾರಕರು ಮುಕ್ತಾಯದವರೆಗೆ ಜೀವಿತರಾಗಿದ್ದರೆ, ಮ್ಯಾಚುರಿಟಿ ಬೆನಿಫಿಟ್ ಕೂಡ ಲಭಿಸುತ್ತದೆ ಹಾಗೂ ಇದನ್ನು ಏಕಕಾಲಕ್ಕೆ ಪಾವತಿಸಲಾಗುತ್ತದೆ.

3. 10 ರಿಂದ 20 ವರ್ಷ ಪಾಲಸಿ ಅವಧಿ - ಈ ಪಾಲಸಿ ಪಡೆಯಲು ಯಾವುದೇ ವ್ಯಕ್ತಿ 8 ರಿಂದ 55 ವರ್ಷ ವಯಸ್ಸಿನವರಗಿರಬೇಕು. ಯೋಜನೆಯ ಮ್ಯಾಚುರಿಟಿ ಸಮಯದಲ್ಲಿ ಅರ್ಜಿದಾರರ ಗರಿಷ್ಟ ವಯಸ್ಸು 70 ವರ್ಷಗಳಾಗಿರಬೇಕು. ಆಧಾರ್ ಸ್ಥಂಭ ಪಾಲಸಿ ಅಡಿ ನೀಡಲಾಗುವ ಕನಿಷ್ಠ ಮೂಲ ರಾಶಿ 75, 000 ರೂ.ಗಳಾಗಿದ್ದರೆ ಅತ್ಯಧಿಕ ರಾಶಿ 3,00,000ರೂ. ಗಳಾಗಿದೆ. ಇದರಲ್ಲಿ ಮೂಲ ರಾಶಿಯನ್ನು 5,000 ಗುನಕದಲ್ಲಿ ನೀಡಲಾಗುತ್ತದೆ. ಈ ಪಾಲಸಿಯನ್ನು ನೀವು 10 ರಿಂದ 20 ವರ್ಷಗಳ ಅವಧಿಗೆ ಪಡೆಯಬಹುದು. ಈ ಪಾಲಸಿಯ ಇನ್ನೊಂದು ವಿಶೇಷತೆ ಎಂದರೆ. ಇದರಲ್ಲಿ ರಿಸ್ಕ್ ಕವರೇಜ್ ಪಾಲಸಿ ಜಾರಿಯಾದ ದಿನದಿಂದಲೇ ಆರಂಭವಾಗುತ್ತದೆ.

4. ಪ್ರಿಮಿಯಂ ಹಾಗೂ ಮ್ಯಾಚುರಿಟಿ ಯಾವ ರೀತಿ ಇರಲಿದೆ? - Aadhaar Stambh LIC Maturity Calculator ಪ್ರಕಾರ LIC ಧಾರಕನ ವಯಸ್ಸು ಒಂದು ವೇಳೆ 20 ವರ್ಷ ಆಗಿದ್ದರೆ, ಅದರ ಪ್ರಿಮಿಯಂ ಹಾಗೂ ಮ್ಯಾಚುರಿಟಿ ಈ ರೀತಿ ಇರಲಿದೆ. ಮೊದಲ ವರ್ಷದ ವಾರ್ಷಿಕ ಪ್ರಿಮಿಯಂ 10,821 ರೂ. (Rs 10,355 + Rs 466); ಆರು ತಿಂಗಳಿಗೆ 5,468 ರೂ. Rs 5233 + Rs 235) ಮತ್ತು ಮೂರು ತಿಂಗಳಿಗೆ ಪ್ರಿಮಿಯಂ ರೂ. 2,763 (Rs 2,644 + Rs119), ಒಂದು ವೇಳೆ ನೀವು ಮಾಸಿಕವಾಗಿ ಪ್ರಿಮಿಯಂ ಪಾವತಿಸಲು ಬಯಸುತ್ತಿದ್ದರೆ ರೂ. 921  (Rs 881 + Rs 40)

5. ಸ್ಕೀಮ್ ಅವಧಿ - ಸಮ್ ಅಷ್ಯೋರಡ್ 3, 00,000 ಜೊತೆಗೆ ಲಾಯಲ್ಟಿ ಅಡಿಶನ್ 97, 500 ರೂ. (ನಿವೇಶದ ಮೇಲೆ ವಾರ್ಷಿಕ 4.5% ರಿಟರ್ನ್)

6. ಅಪ್ರಾಪ್ತರ ಹೆಸರಿನಲ್ಲಿಯೂ ಕೂಡ ಪಾಲಸಿ ಪಡೆಯಬಹುದು -8 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತರೂ ಕೂಡ ಈ ಪಾಲಸಿಯನ್ನು ಪಡೆಯಬಹುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link