Jupiter ಹಾಗೂ Saturn ಗ್ರಹಗಳ ಅಪರೂಪದ ಮಿಲನ, 400 ವರ್ಷಗಳ ಬಳಿಕ ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ದೃಶ್ಯ
ಎಂಪಿ ಬಿರ್ಲಾ ಪ್ಲಾನೆಟೇರಿಯಂನ ನಿರ್ದೇಶಕ ದೆಬಿ ಪ್ರಸಾದ್ ಡುಯಾರಿ ಹೇಳುವಂತೆ 1623 ರ ಬಳಿಕ ಈ ಎರಡು ಗ್ರಹಗಳು ಇಷ್ಟೊಂದು ಹತ್ತಿರ ಎಂದಿಗೂ ಕಾಣಿಸಿಕೊಂಡಿಲ್ಲ. ನಾನೂರು ವರ್ಷಗಳ ನಂತರ, ಇಂತಹ ಕಾಕತಾಳೀಯ ಘಟನೆ ನಡೆಯುತ್ತಿದೆ.
ಈ ಕುರಿತು ಹೇಳಿರುವ ಅವರು, ಯಾವುದೇ ಎರಡು ಖಗೋಲಿಯ ಪಿಂಡಗಳು ಭೂಮಿಯಿಂದ ಪರಸ್ಪರ ಹತ್ತಿರಕ್ಕೆ ಕಾಣಿಸಿಕೊಂಡರೆ ಈ ಘಟನಾ ಕ್ರಮವನ್ನು ಕಂಜಕ್ಷನ್ ಎಂದು ಕರೆಯುತ್ತಾರೆ. ಶನಿ ಹಾಗೂ ಗುರು ಗ್ರಹದ ಈ ಅಪರೂಪದ ಸಂಗಮವನ್ನು ಗ್ರೇಟ್ ಕಂಜಕ್ಷನ್ ಎಂದು ಕರೆಯುತ್ತಾರೆ ಎಂದಿದ್ದಾರೆ.
ಇದಾದ ಬಳಿಕ ಎರಡೂ ಗ್ರಹಗಳು 15 ಮಾರ್ಚ್ 2080ರಲ್ಲಿ ಮತ್ತೆ ಪರಸ್ಪರ ಹತ್ತಿರಕ್ಕೆ ಬರಲಿವೆ.
ಈ ಕುರಿತು ಹೇಳಿರುವ ದುಯಾರಿ, ಡಿಸೆಂಬರ್ 21ರಂದು ಈ ಎರಡೂ ಗ್ರಹಗಳು ನಡುವಿನ ಅಂತರ 73.5 ಕೋಟಿ ಕಿಲೋಮೀಟರಗಳಷ್ಟಿರಲಿದೆ ಎಂದಿದ್ದಾರೆ. ಡಿ.21ರವರೆಗೆ ಈ ಎರಡೂ ಗ್ರಹಗಳು ಸ್ವಲ್ಪ ಸ್ವಲ್ಪ ಹತ್ತಿರಕ್ಕೆ ಬರಲಿವೆ ಎಂದು ಅವರು ಹೇಳಿದ್ದಾರೆ.
ಭಾರತದ ಬಹುತೇಕ ಪಟ್ಟಣಗಳಿಂದ ಸೂರ್ಯಾಸ್ತದ ಬಳಿಕ ಈ ಅದ್ಭುತ ಘಟನೆಯನ್ನು ವಿಕ್ಷೀಸಬಹುದಾಗಿದೆ.