Changes From February 1: ನಾಳೆಯಿಂದ ನಿಮ್ಮ ಜೀವನದಲ್ಲಾಗಲಿವೆ ಈ 10 ಪ್ರಮುಖ ಬದಲಾವಣೆಗಳು

Sun, 31 Jan 2021-12:33 pm,

ನಾಳೆ ಫೆಬ್ರವರಿ 1. ವರ್ಷ 2021-22 ರ ಆರ್ಥಿಕ ಆಯವ್ಯಯ ಪತ್ರ ಮಂಡನೆಯಾಗಲಿದೆ. ಬಜೆಟ್ ಮಂಡನೆ ಹಲವು ವಸ್ತುಗಳ ದರ ಏರಿಕೆ ಹಾಗೂ ಇಳಿಕೆಗೆ ಕಾರಣವಾಗುತ್ತದೆ. ಈ ಬಾರಿಯ ಬಜೆಟ್ ನಲ್ಲಿ ರೈಲುಗಳ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಪ್ರತಿ ತಿಂಗಳ ಮೊದಲ ವಾರದಲ್ಲಿ ಸಿಲಿಂಡರ್(LPG) ದರ ಪರಿಷ್ಕರಣೆ ಮಾಡಲಾಗುತ್ತದೆ. ಈ ಬಾರಿಯೂ ಕೂಡ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಆದರೆ, ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಎರಡು ಬಾರಿ ಸಿಲಿಂಡರ್ ಬೆಲೆ ಪರಿಷ್ಕರಿಸಲಾಗಿದೆ ಮಾತು ಜನವರಿ ತಿಂಗಳ ದರ ಪರಿಷ್ಕರಣೆ ನಡೆದಿಲ್ಲ. ಹೀಗಾಗಿ ಫೆಬ್ರುವರಿ 1 ರ ನಂತರ ಸಿಲಿಂಡರ್ ಬೆಲೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.  

ಫೆಬ್ರವರಿ 1 ರಿಂದ PNB ಗ್ರಾಹಕರಿಗಾಗಿ ಇರುವ ATM ಹಿಂಪಡೆಯುವಿಕೆಯ ನಿಯಮ ಬದಲಾಗಲಿದೆ. ಫೆಬ್ರವರಿ 1 ರಿಂದ PNB ಗ್ರಾಹಕರು EMV ಇಲ್ಲದ ATM ಮಶೀನ್ ಗಳಿಂದ ಹಣ ಹಿಂಪಡೆಯಲು ಸಾಧ್ಯವಾಗುವುದಿಲ್ಲ.

ಫೆಬ್ರವರಿ 1 ರಿಂದ ರಾಜ್ಯದ ಒಳಗೆ ಹಾಗೂ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಚರಿಸಬೇಕಾದರೆ ಯಾವುದೇ ರೀತಿಯ ಇ-ಪರ್ಮಿಟ್ (e-Permit) ಪಡೆದುಕೊಳ್ಳುವ ಅಗತ್ಯತೆ ಇಲ್ಲ. ಕಂಟೆನ್ಮೆಂಟ್ ಜೋನ್ ಹೊರಗಡೆ ಕೆಲ ಚಟುವಟಿಕೆಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ಚಟುವಟಿಕೆಗಳಿಗೆ ಅನುಮತಿ  ಇದೆ. ಆದರೆ ಸರ್ಕಾರ ಹೊರಡಿಸಿರುವ SOP ಪಾಲನೆ ಅನಿವಾರ್ಯ. ನೆರೆ ರಾಷ್ಟ್ರಗಳ ಜೊತೆಗೆ ಒಪ್ಪಂದದ ಶರತ್ತುಗಳ ಮೇರೆಗೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ. ಇದಕ್ಕೂ ಕೂಡ ವಿಶೇಷ ಅಥವಾ ಇ-ಪರ್ಮಿಟ್ ಪಡೆಯುವ ಅವಶ್ಯಕತೆ ಇಲ್ಲ.

ದೇಶಾದ್ಯಂತ ಶೇ.100 ರಷ್ಟು ಕ್ಷಮತೆಯೊಂದಿಗೆ ಥೇಟರ್ ತೆರೆಯಲು ಅನುಮತಿ ನೀಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ  ಕೊರೊನಾ ಪ್ರಕೋಪದ ನಡುವೆ ಸಿನಿಮಾ ಹಾಲ್ ಗಳನ್ನು ತೆರೆಯಲು ನೂತನ SOP ಬಿಡುಗಡೆ ಮಾಡಿದೆ. ಕಳೆದ ವರ್ಷದ ಮಾರ್ಚ್ ನಲ್ಲಿ ಕೊರೊನಾ ಪ್ರಕೋಪದ ಹಿನ್ನೆಲೆ ಸಿನಿಮಾ ಹಾಲ್, ಮುಲ್ಟಿಪ್ಲೆಕ್ಸ್ ಹಾಗೂ ಥೇಟರ್ ತೆರೆಯುವಿಕೆಯ ಮೇಲೆ ನಿರ್ಬಂಧ ವಿಧಿಸಲಾಗಿತ್ತು.

ಫೆಬ್ರವರಿ 1 ರಿಂದ ಮುಂಬೈ ಲೋಕಲ್ ಎಂದಿನಂತ ಸಾಮಾನ್ಯ ಜನರ ಸೇವೆಯನ್ನು ಆರಂಭಿಸಲಿದೆ. ಆದರೆ, ಕೆಲ ನಿರ್ಧಾರಿತ ಟೈಮ್ ಸ್ಲಾಟ್ ಗಳ ಅನುಸಾರ ಈ ಸೇವೆ ಆರಂಭಗೊಳ್ಳುತ್ತಿದೆ. ಮಹಾ ಸರ್ಕಾರ ಶುಕ್ರವಾರ ಬಿಡುಗಡೆಗೊಳಿಸಿರುವ ಒಂದು ಆದೇಶದಲ್ಲಿ ಇದನ್ನು ಸ್ಪಷ್ಟಪಡಿಸಿದೆ. ಕೊರೊನಾ ವೈರಸ್ ಮಹಾಮಾರಿಯ (Corona Pandemic) ಕಾರಣ ಈ ಸೇವೆ ಸ್ಥಗಿತಗೊಂಡಿತ್ತು. ಬೆಳಗ್ಗೆ 4.14 ರಿಂದ 7:00, ಮಧ್ಯಾಹ್ನ 12 ರಿಂದ ಸಂಜೆ 4 ಹಾಗೂ ರಾತ್ರಿ 9 ಗಂಟೆಯಿಂದ ಮಾರನೆದಿನ ಬೆಳಗ್ಗೆ 1 ಗಂಟೆಯವರೆಗಿನ ಒಟ್ಟು ಮೂರು ಸ್ಲಾಟ್ ಗಳಲ್ಲಿ ಸೇವೆ ಆರಂಭವಾಗುತ್ತಿದೆ.

ಫೆಬ್ರವರಿ 1 ರಿಂದ ಪಡಿತರ ಚೀಟಿ ಧಾರಕರಿಗೆ (Ration Card Holder) ಪಡಿತರ ಬಯೋಮೆಟ್ರಿಕ್ ಪದ್ಧತಿಯ ಬದಲಾಗಿ ಮೊಬೈಲ್ OTP ಹಾಗೂ ಐರಿಸ್ (Mobile OTP and IRIS Authentication)ಅಥೆಂಟಿಫಿಕೆಶನ್ ಆಧರಿಸಿ ಸಿಗಲಿದೆ. 'ದಿ ಹಿಂದೂ'ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಪಡಿತರ ಚೀಟಿಗೆ ಸಂಬಂಧಿಸಿದ ಈ ನಿಯಮ  ತೆಲಂಗಾಣ ರಾಜ್ಯದಿಂದ ಫೆಬ್ರುವರಿ 1 ರಿಂದ ಜಾರಿಗ ಬರಲಿದೆ.  ಕೊರೊನಾ ಮಹಾಮಾರಿಯಿಂದ ಹರಡುತ್ತಿರುವ ಸೊಂಕಿಂದ ಹಿನ್ನೆಲೆ ರಕ್ಷಣೆ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. 

Franklin Templeton Mutual Fund ವಿತರಣಾ ಪ್ರಕ್ರಿಯೆಯ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಲಿದೆ. ಕಳೆದ ವರ್ಷದ ಏಪ್ರಿಲ್ 23 ರಂದು  Franklin Templeton Mutual Fund ಕೆಲ ಯುನಿಟ್ ಧಾರಕರ ಇ-ವೋಟಿಂಗ್ ಪ್ರಕ್ರಿಯೆಗೆ ವಿರೋಧದ ಹಿನ್ನೆಲೆ ಸ್ಥಗಿತಗೊಳಿಸಿತ್ತು.  ಯುನಿಟ್ ಧಾರಕರು ಈ ಆರು ಯೋಜನೆಗಳನ್ನು ಸ್ಥಗಿತಗೊಳಿಸಬೇಕೇ ಅಥವಾ ಬೇಡವೇ ಎಂಬುದನ್ನು ಮತ ಚಲಾಯಿಸುವ ಮೂಲಕ ಹೇಳಬೇಕಿತ್ತು. ಇದಾದ ಬಳಿಕ ಈ ಫಂಡ್ ಗಳಿಂದ ಹಣ ಹಿಂಪಡೆಯುವಿಕೆಯ ಮೇಲೆ ನ್ಯಾಯಾಲಯ ನಿರ್ಬಂಧ ವಿಧಿಸಿತ್ತು. ಈ ಮ್ಯೂಚವಲ್ ಫಂಡ್ ಬಂದ್ ಆದ ಬಳಿಕ ಸುಮಾರು 3 ಲಕ್ಷ ಹೂಡಿಕೆದಾರರ ಮೇಲೆ ಇದು ಪ್ರಭಾವ ಬೀರಿತ್ತು.

ದೇಶದ ವಾಯುಯಾನ ಕಂಪನಿಯಾಗಿರುವ ಸ್ಪೈಸ್ ಜೆಟ್ (Spice Jet) ಈಗಾಗಲೇ 20 ಹೊಸ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಘೋಷಿಸಿದೆ. ಜೈಪುರ್, ಡೆಹ್ರಾಡೂನ್. ಅಮೃತ್ಸರ್ ಹಾಗೂ ದೆಹಲಿ ಸೇರಿದಂತೆ ಹಲವು ನಗರಗಳಿಗೆ ಜೋಡಿಸುವ ಸುಮಾರು 16 ನೂತನ ಫ್ಲೈಟ್ ಗಳ ಸೇವೆ ಆರಂಭಿಸುವುದಾಗಿ ಕಂಪನಿ ಘೋಷಿಸಿದೆ. 

Punjab & Maharashtra Co-operative (PMC) ಬ್ಯಾಂಕ್ ಆಡಳಿತ ಬ್ಯಾಂಕ್ ಅನ್ನು ಪುನಃ ಆರಂಭಿಸಲು ಹೂಡಿಕೆದಾರರಿಗೆ ತಮ್ಮ ತಮ್ಮ ಆಫರ್ ಸಲ್ಲಿಸಲು ಫೆಬ್ರುವರಿ 1ರವರೆಗೆ ಪ್ರಸ್ತಾವನೆ ಸಲ್ಲಿಸಲು ಗಡುವು ನೀಡಿದೆ. ಈಗಾಗಲೇ  Centrum Group-BharatPe ಹಾಗೂ UK ಮೂಲದ ಕಂಪನಿಯಾಗಿರುವ Liberty Group ಈಗಾಗಲೇ ಈ ಕುರಿತು ತಮ್ಮ ಪ್ರಸ್ತಾವನೆ ಸಲ್ಲಿಸಿವೆ ಎನ್ನಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link