ಇನ್ಮುಂದೆ ಚಿಟಿಕೆ ಹೊಡೆಯೋದ್ರಲ್ಲಿ Driving License Apply ಮಾಡಿ
ಬಿಹಾರ ರಾಜ್ಯದಲ್ಲಿ ಲರ್ನಿಂಗ್ ಲೈಸನ್ಸ್ ಗಾಗಿ ಅರ್ಜಿಗಳನ್ನು ಕೇವಲ ಆನ್ಲೈನ್ ಪ್ರಕ್ರಿಯೆಯಾ ಮೂಲಕ ಮಾತ್ರ ಪಡೆಯಲಾಗುತ್ತಿದೆ. ಇದಕ್ಕಾಗಿ ಇದ್ದ ಒಫ್ಲೈನ್ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ. ಬಿಹಾರದಲ್ಲಿ ಕಲಿಕಾ ಪರವಾನಿಗೆಯ ಸ್ಲಾಟ್ ಬುಕ್ ಆಗುತ್ತಲೇ ನೀವು ರೂ.740 ಪಾವತಿಸಬೇಕು. ಸ್ಲಾಟ್ ಬುಕ್ ಆಗುತ್ತಲೇ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಟೆಸ್ಟ್ ಗಾಗಿ ದಿನಾಂಕ ಆಯ್ದುಕೊಳ್ಳುವ ಅವಕಾಶ ನಿಮಗೆ ಸಿಗಲಿದೆ.
ಕೇವಲ ಆನ್ಲೈನ್ ಪರೀಕ್ಷೆಗಾಗಿ ಮಾತ್ರ ನೀವು ಸಾರಿಗೆ ಇಲಾಖೆಗೆ ಭೇಟಿ ನೀಡಬೇಕು. ಈ ಪರೀಕ್ಷೆಯಲ್ಲಿ ನೀವು ಒಟ್ಟು 10 ಪ್ರಶ್ನೆಗಳಿಗೆ ಉತ್ತರಿಸಬೇಕು. ಇದಕ್ಕಾಗಿ ಅರ್ಜಿದಾರರಿಗೆ ಕೇವಲ 10 ನಿಮಿಷ ಸಮಯಾವಕಾಶ ನೀಡಲಾಗುವುದು. 10 ಪ್ರಶ್ನೆಗಳಲ್ಲಿ ಕನಿಷ್ಠ ಆರು ಪ್ರಶ್ನೆಗಳ ಉತ್ತರ ಸರಿಯಾಗಿರಬೇಕು. ಪರೀಕ್ಷೆಯ ಫಲಿತಾಂಶ ಕೂಡ ತಕ್ಷಣ ಹೇಳಲಾಗುವುದು. ಲರ್ನಿಂಗ್ ಲೈಸನ್ಸ್ ಪರೀಕ್ಷೆಯ ಫಲಿತಾಂಶ ಬಂದ ನಂತರ ಸರ್ಟಿಫಿಕೆಟ್ ಅನ್ನು ನೀವು ಎಲ್ಲಿ ಬೇಕಾದರೂ ಪ್ರಿಂಟ್ ಹಾಕಿಸಿಕೊಳ್ಳಬಹುದು. ಕಚೇರಿಯಲ್ಲಿ ಕುಳಿತು ನೀವು ಸರ್ಟಿಫಿಕೆಟ್ ಗಾಗಿ ಕಾಯಬೇಕಾಗಿಲ್ಲ. ಏಕೆಂದರೆ ಈ ಸರ್ಟಿಫಿಕೆಟ್ ನಿಮಗೆ ಮೇಲ್ ಮೂಲಕ ಕಳುಹಿಸಲಾಗುವುದು.
ಇದರ ಜೊತೆಗೆ ಕೆಲ ರಾಜ್ಯಗಳು ಲರ್ನಿಂಗ್ ಲೈಸನ್ಸ್ ಗಾಗಿ ಶುಲ್ಕಪಾವತಿಸುವ ವ್ಯವಸ್ಥೆಯಲ್ಲಿಯೂ ಕೂಡ ಬದಲಾವಣೆ ಮಾಡಿವೆ. ಮಧ್ಯಪ್ರದೇಶದಲ್ಲಿ ಒಂದು ವೇಳೆ ನಿಮ್ಮ ಬಳಿ ಇರುವ ಲೈಸನ್ಸ್ ಬೇರೆ ಪಟ್ಟಣದ್ದಾಗಿದ್ದು, ವರ್ತಮಾನದಲ್ಲಿ ನೀವು ವಾಸಿಸುವ ಪಟ್ಟಣದ ಅಡ್ರೆಸ್ ಪ್ರೂಫ್ ನಿಮ್ಮ ಬಳಿ ಇದ್ದರೆ, ನೀವು ಶಾಶ್ವತ ಲೈಸನ್ಸ್ ಗಾಗಿ ಪಡೆದುಕೊಳ್ಳಬಹುದು. ಮಧ್ಯಪ್ರದೇಶವನ್ನು ಹೊರತುಪಡಿಸಿ ಉತ್ತರ ಪ್ರದೇಶ, ಬಿಹಾರ, ಝಾರ್ಖಂಡ್, ಹಾಗೂ ಚತ್ತೀಸ್ಗಡಗಳಂತಹ ರಾಜ್ಯಗಳು ಲರ್ನಿಂಗ್ ಲೈಸನ್ಸ್ ಹಾಗೂ ವಾಹನ ನೋಂದಣಿ ನಿಯಮಗಳಲ್ಲಿ ಬದಲಾವಣೆ ಜಾರಿಗೊಳಿಸುವ ನಿರ್ಧಾರ ಕೈಗೊಂಡಿವೆ.
ಡ್ರೈವಿಂಗ್ ಲೈಸನ್ಸ್ ಗಾಗಿ ಹೆಚ್ಚಾಗುತ್ತಿರುವ ಜನದಟ್ಟನೆಯನ್ನು ಪರಿಗಣಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 4 ನೂತನ RTO ಕಚೇರಿಗಳನ್ನು ತೆರೆಯಲು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹಲೋಟ್. ದೆಹಲಿಯಲ್ಲಿ ಪ್ರಸ್ತುತ 13 RTO ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಡ್ರೈವಿಂಗ್ ಲೈಸನ್ಸ್, ಅಂತರರಾಷ್ಟ್ರೀಯ ಡ್ರೈವಿಂಗ್ ಲೈಸನ್ಸ್, ವಾಹನಗಳ ನೋಂದಣಿ ಹಾಗೂ ಚಾಲಕರ ಲೈಸನ್ಸ್ ಇತ್ಯಾದಿಗಳನ್ನು ಜಾರಿಗೊಳಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದಿದ್ದಾರೆ.