EPFO Pension Latest News: PF ಸ್ವರೂಪದಲ್ಲಿ ಭಾರಿ ಬದಲಾವಣೆಗೆ ಮುಂದಾದ ಸರ್ಕಾರ
ಸಂಸದೀಯ ಸಮಿತಿಗೆ ನೀಡಲಾಗಿರುವ ಸಲಹೆಗಳಲ್ಲಿ 'ಡಿಫೈನ್ಡ್ ಬೆನಿಫಿಟ್ಸ್' ಬದಲಿಗೆ 'ಡಿಫೈನ್ಡ್ ಕೊಡುಗೆಗಳ' ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಹೇಳಲಾಗಿದೆ. ಇದೀಗ ಇಪಿಎಫ್‌ಒ ಪಿಂಚಣಿಗೆ ಕನಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ, ಇದು ಒಂದು ರೀತಿಯಲ್ಲಿ 'efined benefits' ಮಾದರಿಯಾಗಿದೆ. Defined contributions ಸಿಸ್ಟಮ್ ಅನ್ನು ಅಳವಡಿಸಿಕೊಳ್ಳುವ ಮೂಲಕ, ಪಿಎಫ್ ಸದಸ್ಯರು ತಮ್ಮ ಕೊಡುಗೆಗೆ ಅನುಗುಣವಾಗಿ ಪ್ರಯೋಜನವನ್ನು ಪಡೆಯುತ್ತಾರೆ, ಅಂದರೆ ಹೆಚ್ಚು ಕೊಡುಗೆ ಹೆಚ್ಚು ಲಾಭ ನೀಡಲಿದೆ.
ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳ ಪ್ರಕಾರ, ಪ್ರಸ್ತುತ ಇಪಿಎಫ್‌ಒ 23 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರನ್ನು ಹೊಂದಿದ್ದು, ಅವರು ಪ್ರತಿ ತಿಂಗಳು 1000 ರೂಪಾಯಿ ಪಿಂಚಣಿ ಪಡೆಯುತ್ತಾರೆ. ಪಿಎಫ್‌ಗೆ ಅವರ ಕೊಡುಗೆ ಅದರಲ್ಲಿ ಕಾಲು ಭಾಗಕ್ಕಿಂತಲೂ ಕಡಿಮೆಯಿದೆ. ಇದು ಮುಂದುವರಿದರೆ ಭವಿಷ್ಯದಲ್ಲಿ ಬೆಂಬಲ ನೀಡುವುದು ಕಷ್ಟ ಎಂದು ಅಧಿಕಾರಿಗಳು ವಾದಿಸಿದ್ದಾರೆ. ಹೀಗಾಗಿ, defined contributions ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಅದನ್ನು ಹೆಚ್ಚು ಪ್ರಯೋಗಿಕವಾಗಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.
2019 ರ ಆಗಸ್ಟ್‌ನಲ್ಲಿ ಇಪಿಎಫ್‌ಒ ಪಿಂಚಣಿ ಯೋಜನೆಯಡಿ ಕನಿಷ್ಠ ಪಿಂಚಣಿ ಮೊತ್ತವನ್ನು ಹೆಚ್ಚಿಸಿ 2000 ರೂ. ಅಥವಾ 3000 ರೂ.ನಿಗದಿಪಡಿಸಲು ಶಿಫಾರಸುಗಳನ್ನು ಮಾಡಲಾಗಿತ್ತು. ಆದರೆ ಅದನ್ನುಇನ್ನೂ ಜಾರಿಗೆ ತರಲಾಗಿಲ್ಲ. ಈ ನಿಟ್ಟಿನಲ್ಲಿ ಸಂಸದೀಯ ಸಮಿತಿ ಕಾರ್ಮಿಕ ಸಚಿವಾಲಯದಿಂದ ಉತ್ತರವನ್ನು ಕೋರಿದೆ. ಮೂಲಗಳ ಪ್ರಕಾರ, ಕನಿಷ್ಠ ಪಿಂಚಣಿಯನ್ನು 2000 ರೂ.ಗೆ ಹೆಚ್ಚಿಸುವುದರಿಂದ ಸರ್ಕಾರಕ್ಕೆ 4500 ಕೋಟಿ ರೂ. ಹೊರೆ ಬೀಳಲಿದೆ. ಇದನ್ನು 3000 ರೂ.ಗೆ ಹೆಚ್ಚಿಸಿದರೆ, ಅದು 14595 ಕೋಟಿ ರೂ.ಗಳ ಹೆಚ್ಚುವರಿ ಹೊರೆಯಾಗಲಿದೆ.
ಪಿಎಫ್ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದಲೂ ಕೂಡ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಇಪಿಎಫ್‌ಒನ ಹೆಚ್ಚಿನ ಭಾಗ ಮುಳುಗಿದೆ ಮತ್ತು ಇದರಿಂದ ಯಾವುದೇ ಲಾಭವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗ ಹಾಗೂ ಆರ್ಥಿಕತೆಯ ಕುಸಿತದಿಂದಾಗಿ, ಈ ಹೂಡಿಕೆಯು ನಕಾರಾತ್ಮಕ ಆದಾಯ ನೀಡಿದೆ. ಅಧಿಕಾರಿಗಳ ಪ್ರಕಾರ, ಇಪಿಎಫ್‌ಒನ 13.7 ಲಕ್ಷ ಕೋಟಿ ರೂ.ಗಳ ಫಂಡ್ ಕಾರ್ಪಸ್‌ನಲ್ಲಿನ ಕೇವಲ ಶೇ.5 ಅಂದರೆ 4600 ಕೋಟಿ ರೂ.ಗಳನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ, ಸರ್ಕಾರ ಇಪಿಎಫ್‌ಒ ಹಣವನ್ನುಅಪಾಯಕಾರಿ ಉತ್ಪನ್ನಗಳಲ್ಲಿ ಮತ್ತು ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ದೂರ ಉಳಿಯಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.