Facebookನಲ್ಲಿ ಭಾರಿ ಬದಲಾವಣೆ, ನಿಮ್ಮ ಖಾಸಗಿತನ ಕಾಪಾಡಲು ಬಂತು New Feature
ಬಂದಿದೆ 2FA Security - IANS ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ Facebook 2FA (Two Factor Authentication) ಬಿಡುಗಡೆ ಮಾಡಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಫೇಸ್ಬುಕ್ ಈ ನೂತನ ವೈಶಿಷ್ಟ್ಯವನ್ನು ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳಿಗೂ ಜಾರಿಗೊಳಿಸಲಾಗಿದೆ
ಮೊಬೈಲ್ ಡಿವೈಸ್ ಗಳಿಗೆ ಬಂದಿದೆ ಹೊಸ ವೈಶಿಷ್ಟ್ಯ - ವರದಿಗಳ ಪ್ರಕಾರ Facebookನ ಈ ನೂತನ ಸೆಕ್ಯೂರಿಟಿ ವೈಶಿಷ್ಟ್ಯ ಮೊಬೈಲ್ ಫೋನ್ ಗಾಗಿ ಬಂದಿದೆ. ಡೆಸ್ಕ್ ಟಾಪ್ ಗಳಲ್ಲಿ 2FA ಸೆಕ್ಯೂರಿಟಿ ವೈಶಿಷ್ಟ್ಯ 2017ರಲ್ಲಿಯೇ ಜಾರಿಗೆ ಬಂದಿದೆ.
ಈ ವೈಶಿಷ್ಟ್ಯ ಬಳಸಲು ಪ್ರತ್ಯೇಕ ಡಿವೈಸ್ ತೆಗೆದುಕೊಳ್ಳಬೇಕು - ಈ ಕುರಿತು ಹೇಳಿರುವ ಫೇಸ್ ಬುಕ್ ಈ ನೂತನ ವೈಶಿಷ್ಟ್ಯ ಬಳಸಲು ಬಳಕೆದಾರರು ಪ್ರತ್ಯೇಕ ಡಿವೈಸ್ ಪಡೆಯಬೇಕಾದ ಅವಶ್ಯಕತೆ ಇದೆ. ನೀವು ಒಂದು ವೇಳೆ ನಿಮ್ಮ ಮೊಬೈಲ್ ನಿಂದ ಫೇಸ್ಬುಕ್ ಗೆ ಲಾಗಿನ್ ಮಾಡಿದಾಗ ನೀವು ಮೊಬೈಲ್ ಮೂಲಕ ಕೀ ನಮೂದಿಸಬೇಕಾಗಲಿದೆ.
ಸೆಲೆಬ್ರಿಟಿ ಹಾಗೂ ಮುಖಂಡರಿಗೆ ಲಾಭದಾಯಕ - ವರದಿಗಳ ಪ್ರಕಾರ Facebook ನಲ್ಲಿ ಈಗಾಗಲೇ ಇರುವ ಸೆಲಿಬ್ರಿಟಿ, ರಾಜಕೀಯ ಮುಖಂಡರು ಹಾಗೂ ಮಾನವಾಧಿಕಾರ ಕಾರ್ಯಕರ್ತರಿಗೆ ಈ ನೂತನ ವೈಶಿಷ್ಟ್ಯ ದಿಂದ ಲಾಭ ಸಿಗಲಿದೆ. ಈ ಗಣ್ಯರ ಫೇಸ್ಬುಕ್ ಖಾತೆ ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಟ್ವಿಟ್ಟರ್ ನಲ್ಲಿ ಈಗಾಗಲೇ ಇಂತಹ ವೈಶಿಷ್ಟ್ಯ- ಇತೀಚೆಗಷ್ಟೇ ಮೈಕ್ರೋ ಬ್ಲಾಗಿಂಗ್ ಸೈಟ್ ಆಗಿರುವ ಟ್ವಿಟ್ಟರ್ ಕೂಡ ಇಂತಹುದೇ ಒಂದು ವೈಶಿಷ್ಟ್ಯ ಬಿಡುಗಡೆಗೊಳಿಸಿದೆ.